ಎಸ್ಬಿಐನಲ್ಲಿ ಕನಿಷ್ಠ ಠೇವಣಿ ಐದಲ್ಲ 3 ಸಾವಿರ!
Team Udayavani, Sep 26, 2017, 6:00 AM IST
ಮುಂಬೈ: ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಕನಿಷ್ಠ 5 ಸಾವಿರ ರೂ. ಇರಬೇಕೆಂಬ ನಿಯಮ ಜಾರಿ ಮಾಡಿ ಟೀಕೆಗೆ ಟೀಕೆಗೆ ಗುರಿಯಾಗಿರುವ ಎಸ್ಬಿಐ, ಅದನ್ನೀಗ 3 ಸಾವಿರ ರೂ.ಗೆ ಇಳಿಸಿದೆ. ಒಂದು ವೇಳೆ ಅದನ್ನು ಪಾಲಿಸದೇ ಇದ್ದರೆ ವಿಧಿಸಲಾಗುವ ದಂಡದ ಮೊತ್ತವನ್ನೂ ತಗ್ಗಿಸಿದೆ. ಮುಂದಿನ ತಿಂಗಳ 1ನೇ ತಾರೀಕಿನಿಂದ ಪರಿಷ್ಕೃತ ನಿಯಮ ಜಾರಿಗೆ ಬರಲಿದೆ. ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಂಡು ಬರಬೇಕು ಎಂಬ ನಿಯಮದಿಂದ ಅಪ್ರಾಪ್ತರು, ಪಿಂಚಣಿದಾರರು, ಸರ್ಕಾರಿ ಯೋಜನೆಗಳಿಂದ ಲಾಭ ಪಡೆಯುವವರನ್ನು ಹೊರಗಿಡಲಾಗಿದೆ.
ಠೇವಣಿ ಕಾಯ್ದುಕೊಳ್ಳದೇ ಇದ್ದರೆ ವಿಧಿಸಲಾಗುವ ದಂಡದ ಮೊತ್ತವನ್ನೂ ಇಳಿಕೆ ಮಾಡಲಾಗಿದ್ದು, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ 20 ರೂ.ಗಳಿಂದ 40 ರೂ. ಮತ್ತು ನಗರ ಮತ್ತು ಮಹಾನಗರ ಪ್ರದೇಶಗಳಿಗೆ 30 ರೂ.ಗಳಿಂದ 50 ರೂ.ಗೆ ಪರಿಷ್ಕರಿಸಲಾಗಿದೆ.