ಇನ್ಫಿಯ ಕಿರಿಯ ಸಿಬ್ಬಂದಿಗಿಲ್ಲ ಎಚ್-1ಬಿ ಭಾಗ್ಯ!
Team Udayavani, Mar 21, 2017, 3:50 AM IST
ಬೆಂಗಳೂರು: ಸಂಸ್ಥೆಯ ಯಾವುದೇ ಕಿರಿಯ ಉದ್ಯೋಗಿಗಳು ಇನ್ನು ಎಚ್- 1ಬಿ ವೀಸಾಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಐಟಿ ದಿಗ್ಗಜ ಇನ್ಫೋಸಿಸ್ ತನ್ನ ಸಿಬ್ಬಂದಿಗೆ ಸೂಚನೆ ಹೊರಡಿಸಿದೆ. ಐಟಿ ಉದ್ಯೋಗದ ಹೊಸ್ತಿಲಲ್ಲೇ ಅಮೆರಿಕದ ಕನಸು ಕಾಣುವ ಸಂಸ್ಥೆಯ ಆಕಾಂಕ್ಷಿಗಳಿಗೆ ಇದರಿಂದ ನಿರಾಶೆ ಆದಂತಾಗಿದೆ.
“ಎಚ್- 1ಬಿ ವೀಸಾ ಬಳಸಿಕೊಂಡು ವಿದೇಶಕ್ಕೆ ಹಾರುವ ಪರಿಪಾಠ ನಿಲ್ಲಬೇಕು’ ಎಂದು ಇತ್ತೀಚೆಗಷ್ಟೇ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ ಬೆನ್ನಲ್ಲೇ ಸಂಸ್ಥೆ ಈ ತೀರ್ಮಾನಕ್ಕೆ ಬಂದಿದೆ. ಕನಿಷ್ಠ 4 ವರ್ಷದ ತನಕ ಯಾವ ಸಿಬ್ಬಂದಿಯೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.
“ಸಾಗರೋತ್ತರದ ಮಂದಿ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತು ಅಲ್ಲಿನ ಕಿರಿಯ ಉದ್ಯೋಗಿಗಳಿಗೆ ಭಾರತ ಕೆಲಸ ಕೊಟ್ಟಿದೆ. ಎಚ್-1ಬಿ ವೀಸಾದ ಕನಸಿನ ಗುಂಗಿನಲ್ಲೇ ಇಲ್ಲಿನ ಕಿರಿಯ ಉದ್ಯೋಗಿಗಳು ಕೆಲಸಕ್ಕೆ ಬರುತ್ತಾರೆ’ ಎಂಬುದು ಸಂಸ್ಥೆಯ ಎಕ್ಸಿಕ್ಯೂಟಿವ್ ಒಬ್ಬರ ಮಾತು. ಇದರೊಂದಿಗೆ, ಸಿಸ್ಟಮ್ಸ್ ಎಂಜಿನಿಯರ್ ಮತ್ತು ಸೀನಿಯರ್ ಸಿಸ್ಟಮ್ಸ್ ಎಂಜಿನಿಯರುಗಳೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ. ಟ್ರಂಪ್ ಸರಕಾರದ ಎಚ್-1ಬಿ ವೀಸಾ ಕಡಿತ ನೀತಿ ಹಿನ್ನೆಲೆಯಲ್ಲಿ ಈ ಕ್ರಮ ಎನ್ನಲಾಗಿದೆ.
ಯಾರಿಗೂ ಲಾಭ ಇಲ್ಲ: ಸಂಸ್ಥೆಯ ಈ ಆದೇಶದಿಂದ ಹಿರಿಯ ಉದ್ಯೋಗಿಗಳಿಗೆ ಲಾಭವಂತೂ ಇಲ್ಲ. ಲಿಂಕ್ಡ್ಇನ್‌ನ ಪ್ರಕಾರ, ಅಮೆರಿಕದಲ್ಲಿ 150 ಕೆಲಸ ಖಾಲಿ ಇದೆ ಎಂದು ಕಳೆದ ತಿಂಗಳು ಜಾಹೀರಾತು ಪ್ರಕಟವಾಗಿತ್ತು. ಅನೇಕ ಸಂಸ್ಥೆಗಳು ಕೇವಲ 2 ವರ್ಷದ ಅನುಭವ ಕೇಳಿದ್ದವು. ಈಗ ಹಿರಿಯ (ಅನುಭವಿ) ಸಿಬ್ಬಂದಿಗೆ ಈ ವೀಸಾ ಸೌಲಭ್ಯ ಸಿಕ್ಕರೂ ಪ್ರಯೋಜನವಿಲ್ಲ.. ಸಂಸ್ಥೆ ತೊರೆಯುವ ಉದ್ಯೋಗಿಗಳನ್ನು ಆದಷ್ಟು ತನ್ನಲ್ಲಿಯೇ ಉಳಿಸಿಕೊಳ್ಳಲು ಇನ್ಫೋಸಿಸ್ ನಿರ್ಧರಿಸಿದೆ ಎನ್ನಲಾಗಿದೆ.
ಕಾಗ್ನಿಝಂಟ್‌ನ 6 ಸಾವಿರ ಕೆಲಸಕ್ಕೆ ಕತ್ತರಿ?
ವೇತನ ಮೌಲ್ಯಮಾಪನ ಸಮೀಪಿಸುತ್ತಿದ್ದಂತೆ ಐಟಿ ಜಗತ್ತಿನಲ್ಲಿ ಉದ್ಯೋಗ ಕತ್ತರಿ ಪರ್ವ ಆರಂಭಗೊಂಡಿದೆ. ಅಮೆರಿಕದ ಮೂಲದ ಕಾಗ್ನಿಜೆಂಟ್ ಸಂಸ್ಥೆ ಇದೀಗ ಭಾರತದಲ್ಲಿ 6 ಸಾವಿರ ಸಿಬ್ಬಂದಿಗೆ ಗೇಟ್‌ಪಾಸ್ ನೀಡಲು ಮುಂದಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ 2,65,000 ಸಿಬ್ಬಂದಿ ಇರುವ ಕಾಗ್ನಿಜೆಂಟ್ ಸಂಸ್ಥೆಯಲ್ಲಿ ಶೇ.2-3 ಮಂದಿ ಕನಿಷ್ಠ ಕಾರ್ಯನಿರ್ವಹಣೆಗೆ ಒಳಪಟ್ಟಿದ್ದಾರೆ. ಕಂಪೆನಿ ಯಾಂತ್ರೀಕೃತ ಅಳವಡಿಕೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ 6 ಸಾವಿರ ಸಿಬ್ಬಂದಿಯ ಕೆಲಸಕ್ಕೆ ಕುತ್ತು ಬರಲಿದೆ ಎನ್ನಲಾಗಿದೆ. “ಇಂಥ ಕ್ರಮಗಳನ್ನು ಇತರ ಐಟಿ ಕಂಪೆನಿಗಳೂ ಕೈಗೊಳ್ಳುತ್ತವೆ. ನಾವು ಮಾತ್ರ ಅಲ್ಲ’ ಎಂದು ಕಂಪೆನಿ ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…