ಪಾರ್ಕ್ ಮಾಡಿದ್ದ 25 ಕಾರುಗಳ ಗಾಜು ಒಡೆದು ಕಳ್ಳತನ
Team Udayavani, Aug 21, 2017, 9:37 AM IST
ಬೆಂಗಳೂರು: ರಸ್ತೆ ಬದಿಯ ಮೇಲೆ ಪಾರ್ಕ್ ಮಾಡಿದ್ದ 25ಕ್ಕೂ ಅಧಿಕ ಕಾರುಗಳ ಗಾಜನ್ನು ಒಡೆದು ಮಾಡಿ ಕಳ್ಳತನ ಮಾಡಿದ ಘಟನೆ ನಗರದ ಸುಧಾಮ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ. ರಾತ್ರಿ ಪಾರ್ಕ್ ಮಾಡಿ ಮಲಗಿದ್ದ ಮಾಲಕರು ಬೆಳಿಗ್ಗೆ ಎಂದು ನೋಡಿದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.