ಅಂಚೆ ರಂಗದಲ್ಲಿ ಗುಲಾಬಿ ರಂಗು


Team Udayavani, Feb 12, 2017, 3:45 AM IST

2nd.jpg

ಪ್ರಕೃತಿಯಲ್ಲಿ ಅಸಂಖ್ಯ ಹೂಗಳಿವೆ. ಹಲವು ಬಣ್ಣಗಳಿವೆ. ಹತ್ತಾರು ಬಗೆಯ ವಾಸನೆಗಳೂ ಇವೆ. ಆದರೆ ಹೂಗಳ ರಾಣಿ ಎನ್ನಿಸಿಕೊಂಡ ಹೂ ಮಾತ್ರ ಒಂದೇ ಅದೇ ಗುಲಾಬಿ. ಗುಲಾಬಿಗೆ ರಾಣಿಯ ಬಿರುದು ಇಂದು ನಿನ್ನೆಯದಲ್ಲ. ಬಹು ಹಿಂದಿನದು. ಸಾವಿರ ಸಾವಿರ ವರ್ಷಗಳ ಹಿಂದಕ್ಕೆ ಓಡುತ್ತದೆ, ಗುಲಾಬಿ ಹುಟ್ಟಿನ ಚರಿತ್ರೆ.

ನೂರಾರು ಬಗೆಯ ಗುಲಾಬಿ ತಳಿಗಳು ನಿಸರ್ಗದಲ್ಲಿ ನಳನಳಿಸುತ್ತಿದ್ದರೂ ಇದು ಗಮನ ಸೆಳೆದಿದ್ದು ಇತ್ತೀಚೆಗಷ್ಟೇ. ಪುರಾತನ ಪರ್ಷಿಯನ್ನರು ಗುಲಾಬಿಯಲ್ಲಿರುವ ತೈಲದ ಅಂಶ ಹಾಗೂ ಅದರ ಸುವಾಸನೆಯನ್ನು ಕಂಡುಹಿಡಿಯುವವರೆಗೆ ಇದೇನು ಹೆಚ್ಚು ಪ್ರಚಲಿತವಾಗಿರಲಿಲ್ಲ.

ಪರ್ಷಿಯಾದಿಂದ ಮೆಡಿಟರೇನಿಯನ್‌ ವಲಯಕ್ಕೆ ವಿಶೇಷವಾಗಿ ಗ್ರೀಸ್‌ಗೆ ಗುಲಾಬಿ ಬಂದ ನಂತರವೇ ಅದರ ಪ್ರಸಿದ್ಧಿ ಹೆಚ್ಚಿತು. ಖ್ಯಾತ ಕವಿ ಹೋಮರ್‌ ಸಾಹಿತ್ಯದಲ್ಲೂ ಗುಲಾಬಿ ಪ್ರಸ್ತಾಪವಾಯಿತು. ಕಾಲಕ್ರಮೇಣ ಗುಲಾಬಿ ಹೂವು ಸಮಾಜದ ಅವಿಭಾಜ್ಯ ಅಂಗವಾಗುವಷ್ಟರ ಮಟ್ಟಿಗೆ ತನ್ನ ಖ್ಯಾತಿಯನ್ನು ಗಳಿಸಿಕೊಂಡಿತು. ರೋಮ್‌ ರಾಜಮನೆತನ ಗುಲಾಬಿಗೆ ನೀಡಿದ ಮಾನ್ಯತೆ ಅದರ ವಿಸ್ತರಣೆಗೆ ನೆರವಾದರೂ ರೋಮ್‌ ಪತನದ ಬಳಿಕ ಗುಲಾಬಿ ನೇಪಥ್ಯಕ್ಕೆ ಸರಿಯಿತು. ಕೇವಲ ಸುಗಂಧ ಮತ್ತು ವೈದ್ಯಕೀಯ ಉಪಯೋಗಕ್ಕೆ ಮಾತ್ರ ಸೀಮಿತವಾಯಿತು ಗುಲಾಬಿ. 

ಬಲ್ಗೇರಿಯಾ ಕಣಿವೆಗಳಲ್ಲಿ ಯಥೇತ್ಛವಾಗಿ ಬೆಳೆಯುತ್ತಿದ್ದ ಗುಲಾಬಿಗಳಿಂದ ಉತ್ಪಾದನೆಯಾದ ಗುಲಾಬಿ ಎಣ್ಣೆ ಇನ್ನೊಮ್ಮೆ ಗುಲಾಬಿ ಉಚ್ಛಾ†ಯ ಸ್ಥಿತಿಗೆ ತಲುಪಲು ಕಾರಣ. ಬಲ್ಗೇರಿಯಾ ಗುಲಾಬಿ ತೈಲ ಜನತೆಯ ಜೀವನ ಶೈಲಿಯನ್ನೇ ಬದಲಿಸುವಂತಹ ವಾತಾವರಣವನ್ನು ನಿರ್ಮಿಸಿತು. ನಂತರ “ಗುಲಾಬಿ’ ಹಿಂದೆ ನೋಡಿದ್ದೇ ಇಲ್ಲ.

ಉದ್ಯಾನಗಳಲ್ಲಿ ಕಾಣಿಸಿಕೊಂಡ ಗುಲಾಬಿ ತಳಿಗಳ ಅಭಿವೃದ್ಧಿಯೂ ಮೊದಲಾಯಿತು. ಕ್ರಿ.ಪೂ. 2700ರಲ್ಲಿ ಚೀನಾ ಕೂಡ ಗುಲಾಬಿ ತೈಲ ಉತ್ಪಾದನೆಯಲ್ಲಿ ತೊಡಗಿದ್ದು ಗುಲಾಬಿ ವಿಶ್ವವ್ಯಾಪಿಯಾಗಲು ಕಾರಣವಾಯಿತು. ಜಗತ್ತಿನ ಎಲ್ಲಾ ಭಾಗಗಳಲ್ಲೂ ಈಗ ಗುಲಾಬಿ ಹೂಗಳು ಲಭ್ಯ. ಅದರ ಉಪಯೋಗಗಳೂ ನಾನಾ ಬಗೆ.

ಗುಲಾಬಿಯ ಜೊತೆಯಲ್ಲಿ ಸಾಂಸ್ಕೃತಿಕ ಇತಿಹಾಸ ಇರುವ ಸನ್ನಿವೇಶ ಈಗಿದೆ. ಇದಕ್ಕೆ ಹತ್ತಾರು ಕಾರಣಗಳು. ಪ್ರೇಮ, ಹುಟ್ಟು , ವಿವಿಧ ಹಬ್ಬಗಳ ಆಚರಣೆ, ಶುಭ ಸಮಾರಂಭ ಹೀಗೆ. ಅನೇಕ ಸಂದರ್ಭಗಳಿಗೆ ಈಗ ಗುಲಾಬಿ ಹೂಗಳ ಉಪಸ್ಥಿತಿ ತುಂಬಾ ಸಾಮಾನ್ಯ.

ಅಂದಚಂದಕ್ಕೆ ಪ್ರೇಮ ಸಲ್ಲಾಪಕ್ಕೆ ಬಗೆ ಬಗೆಯ ಸಂದೇಶ ರವಾನೆಗೂ ಈಗ ಗುಲಾಬಿಯೇ ಸಾಧನ! ಅರ್ಧ ಅಂಗುಲದ ಗುಲಾಬಿಯಿಂದ ಅಂಗೈ ಅಗಲದ ಗಾತ್ರದವರೆಗೂ ಇರುವ ಹೂಗಳು ಆಯಾ ವಾತಾವರಣಕ್ಕೆ ತಕ್ಕಂಥ ಬಗೆ ಬಗೆಯ ವಾಸನೆಗಳು ಸೂಸುತ್ತಿರುವ ಗುಲಾಬಿಗಳ ಸಂಖ್ಯೆಯೇ ಹದಿಮೂರು ಸಾವಿರದಷ್ಟಿದೆ ಎಂದರೆ ಅದರ ಜನಪ್ರಿಯತೆ ಹಾಗೂ ವ್ಯಾಪಕತೆಯನ್ನು ಊಹಿಸಬಹುದಾಗಿದೆ.

ಈ ಹೂವು ಅಂಚೆ ರವಾನೆಗೆಂದು ಆರಂಭಗೊಂಡ ವ್ಯವಸ್ಥೆಯಲ್ಲೂ ಪಡೆದಿರುವ ಸ್ಥಾನ ಅಪರಿಮಿತ.

ಬಲ್ಲಿರಾ ಬಲ್ಗೇರಿಯಾವ ?
ಕೆಂಪು, ಹಳದಿ, ಬಿಳಿ, ನೇರಳೆ ಮೊದಲಾದ ಹಲವು ಹತ್ತು ರೀತಿಯ ಬಣ್ಣಗಳಿಂದ, ಸುವಾಸನೆಗಳಿಂದ ವಿಶ್ವದಾದ್ಯಂತ ವ್ಯಾಪಿಸಿರುವ ಗುಲಾಬಿಗಳಿಗೆ ಹೆಚ್ಚಿನ ಮಾನ್ಯತೆ ತಂದುಕೊಟ್ಟ ಬಲ್ಗೇರಿಯಾ ಇಂದು ಗುಲಾಬಿ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ . ಆ ದೇಶ ಕಳೆದ ಐದು ವರ್ಷಗಳಿಂದ ಹೊರತರುತ್ತಿರುವ ವೈವಿಧ್ಯಮಯ ಅಂಚೆಚೀಟಿಗಳು ಪ್ರಪಂಚದ ಅಂಚೆಚೀಟಿ ಸಂಗ್ರಾಹಕರ ಗಮನ ಸೆಳೆಯುತ್ತಲೇ ಇವೆ.

ಬಲ್ಗೇರಿಯಾ ಗುಲಾಬಿ ಕಣಿವೆಯ ಎಂಟು ಗುಲಾಬಿ ಚಿತ್ರಗಳುಳ್ಳ ಅಂಚೆಚೀಟಿಗಳ ಗೊಂಚಲು ಬಿಡುಗಡೆ ಮಾಡಿದ್ದು 1970ರಲ್ಲಿ. ಇದು ಗುಲಾಬಿ ಉದ್ಯಮದಲ್ಲಿ ಅತಿ ಹೆಚ್ಚು ಉಪಯೋಗವಾಗುವ ಐದು ಪ್ರಬೇಧಗಳಿಗೆ ಸೇರಿದ ಹೂಗಳಿದ್ದವು.

ಇಲ್ಲಿಂದಾಚೆಗೆ ಅಂಚೆಚೀಟಿಗಳಲ್ಲಿ ಗುಲಾಬಿ ಹೂಗಳ ವರ್ಣ ಚೆಲುವು ವಿಸ್ತರಿಸುತ್ತಲೇಇದ್ದು ಇಂಗ್ಲೆಂಡ್‌, ಅಮೆರಿಕ, ಕೆನಡ, ಜರ್ಮನಿ, ಇಟೆಲಿ ದೇಶಗಳಲ್ಲಿ ರೋಸ್‌ಸ್ಟಾಂಪ್‌ ಬಿಡುಗಡೆಗೊಳ್ಳದ ವರ್ಷಗಳೇ ಇಲ್ಲ. ಯುರೋಪ್‌ನ ಬಹುತೇಕ ಎಲ್ಲಾ ದೇಶಗಳಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕೆ ಪ್ರಕಟವಾಗುವ ಗುಲಾಬಿ ಚಿತ್ರಗಳುಳ್ಳ ಅಂಚೆಚೀಟಿಗಳು ಹತ್ತಾರು. 
ವಿಕ್ಟೋರಿಯನ್‌ ತಳಿಯ ಗುಲಾಬಿಗಳು ಸಾಮಾನ್ಯವಾಗಿ ಮದುವೆಗಳಲ್ಲಿ ಬಳಕೆಯಾಗುತ್ತವೆ. 

ಅಮೆರಿಕ ದೇಶ 1998ರಲ್ಲಿ ಲಗ್ನಕ್ಕೆ ಗುಲಾಬಿ ಎಂಬ ಶೀರ್ಷಿಕೆಯಲ್ಲಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿ ಗಮನ ಸೆಳೆಯಿತು.

ಇಂಗ್ಲೆಂಡ್‌ 1991ರಲ್ಲಿ ಜರುಗಿದ ಜಾಗತಿಕ ಗುಲಾಬಿ ಬೆಳೆಗಾರರ ಸಮಾವೇಶದ ಸ್ಮರಣೆಯಲ್ಲಿ ಗುಲಾಬಿ ಗೊಂಚಲು ಅಂಚೆಚೀಟಿ ಸೆಟ್‌ ಹೊರತಂದಿತು. ವಿವಿಧ ಬಣ್ಣ , ಬಗೆಬಗೆಯ ಗುಲಾಬಿ, ನಾನಾ ರೀತಿಯ ಆಕಾರ, ಗಾತ್ರ, ವಿನ್ಯಾಸಗಳಲ್ಲಿ ಗುಲಾಬಿ ಅಂಚೆಚೀಟಿಗಳು ನಿರಂತರವಾಗಿ ಹೊರಬರುತ್ತಲೇ ಇದ್ದು ಒಂದೊಂದು ಅಂಚೆಚೀಟಿ ವಿಶ್ವದ ಗಮನ ಸೆಳೆಯುತ್ತವೆ. ಅಂತಹ ಅಂಚೆಚೀಟಿಗಳಲ್ಲಿ “ಕಾಂಪಾಸ್‌ ರೋಸ್‌’ ಕೂಡ ಒಂದು. ಲಂಡನ್‌ನ ಗ್ರೀನ್‌ವಿಚ್‌ ಖಗೋಳ ಕೇಂದ್ರದ ಶತಮಾನೋತ್ಸವಕ್ಕೆ (1984) ಬಂದ ಅಂಚೆಚೀಟಿ ಅದು.

ಗುಲಾಬಿ ಲೋಕ !
ಗುಲಾಬಿ ಹೂಗಳಲ್ಲಿ ಆಯಸ್ಕಾಂತೀಯ ಶಕ್ತಿ ಇದೆ ಎಂಬ ಅಂಶವನ್ನು ಪುರಾತನ ಚೀನಾದವರು ಪತ್ತೆ ಹಚ್ಚಿದ್ದರು. ಹಡಗು ಪ್ರಯಾಣದ ವೇಳೆ ಗುಲಾಬಿಗಳನ್ನು ದಿಕ್ಸೂಚಿಗಳಂತೆ ಉಪಯೋಗ ಮಾಡಲಾಗುತ್ತಿತ್ತು. ನಾವಿಕರು, ಬೇಟೆಗಾರರೂ ಗುಲಾಬಿಯನ್ನು ಮಾರ್ಗದರ್ಶಿಯಂತೆ ಬಳಸುತ್ತಿದ್ದರೆಂಬುದು ಸೋಜಿಗದ ಸಂಗತಿಯಾದರೂ ಇದು ನಿಜವೆಂದು ಸಾಬೀತಾಯಿತು. ಅದಕ್ಕೆಂದೇ ಅಂಗೋಲ “ಕಾಂಪಾಸ್‌ ರೋಸ್‌’ ಅಂಚೆಚೀಟಿ (1969)ಯನ್ನು ಹೊರತಂದಿತು. ಬೆನ್ನಲ್ಲೇ ಲಂಡನ್‌ನ ಗ್ರೀನ್‌ವಿಚ್‌ ಕಾಲಮಾನ ಸಂಸ್ಥೆಯೂ ಇನ್ನೊಂದು ಇದರ ಸ್ಮರಣಾರ್ಥ ಅಂಚೆಚೀಟಿ ಪ್ರಕಟಿಸಿತು.

ಜಗತøಸಿದ್ಧ ನಾವಿಕ, ಅನ್ವೇಷಕ ವಾಸ್ಕೋಡಗಾಮ ಕೂಡ “ಗುಲಾಬಿ’ಗಳನ್ನೇ ಹಡಗುಯಾನಕ್ಕೆ ದಿಕ್ಸೂಚಿಯಂತೆ ಬಳಸುತ್ತಿದ್ದ. ಆತ ಅಕ್ಷಾಂಶ-ರೇಖಾಂಶಗಳನ್ನು ರೋಸ್‌ ಹೂಗಳಿಂದಲೇ ಪತ್ತೆಹಚ್ಚುತ್ತಿದ್ದನಂತೆ. ವಾಸ್ಕೋಡಗಾಮನ 500 ವರ್ಷಾಚರಣೆ ಸಂದರ್ಭದಲ್ಲಿ “ರೋಸ್‌ಲೈನ್‌’ ಅಂಚೆಚೀಟಿಯನ್ನು ಹೊರತರಲಾಯಿತು.

ಕಸಿ ಮಾಡಿದ ಗುಲಾಬಿ ತಳಿಗಳು ಜಗತ್ತಿನಾದ್ಯಂತ ಪ್ರಚಲಿತವಾಗುತ್ತಿದ್ದು ಒಂದೊಂದು ತಳಿಗೂ ಆಯಾ ದೇಶಗಳ ಗಣ್ಯರು, ಸ್ಮಾರಕಗಳು, ರಾಜರಾಣಿಯರ ಹೆಸರುಗಳನ್ನಿಟ್ಟು ಗುರ್ತಿಸಲಾಗುತ್ತಿದ್ದು ಅದಕ್ಕನುಗುಣವಾಗಿ ರಾಯಲ್‌ ಹೈನೆಸ್‌, ಕ್ವೀನ್‌ ಎಲಿಜಬೆತ್‌, ಅಲೆಗಾÕಂಡರ್‌, ಬ್ಲೂಮೂನ್‌, ಡಬ್ಬಲ್‌ ಡಿಲೈಟ್‌, ಐಸ್‌ಬರ್ಗ್‌ ಎಂಬ ಹೆಸರುಗಳ ಅಂಚೆಚೀಟಿಗಳು ಪ್ರಕಟಗೊಂಡಿವೆ.

ಕೆನಡಾ, ಹಂಗರಿ, ನ್ಯೂಜಿಲೆಂಡ್‌, ಫ್ರಾನ್ಸ್‌ ದೇಶಗಳಂತೂ ಗುಲಾಬಿ ಚಿತ್ರಗಳ ಮಿನಿಯೇಚರ್‌ ಹಾಳೆಗಳನ್ನು ಆಗಿಂದಾಗ್ಗೆ ಮುದ್ರಿಸಿ ಹೊರತರುತ್ತವೆ.

ವಿವಿಧ ಬಗೆಯ ತಳಿಗಳನ್ನು ಬೆಳೆಯುವಲ್ಲಿ ನಿಪುಣ ದೇಶವಾದ ಬಲ್ಗೇರಿಯಾ ಚಿತ್ರ-ವಿಚಿತ್ರ ಗುಲಾಬಿ ಅಂಚೆಚೀಟಿಗಳನ್ನು ತರುವಲ್ಲೂ ಮುಂದು. 1978ರಲ್ಲಿ ಬಲ್ಗೇರಿಯಾ ಸಹಜ ಸುವಾಸನೆಯನ್ನು ಒಳಗೊಂಡ ಗುಲಾಬಿ ಚಿತ್ರಗಳಿರುವ ಅಂಚೆಚೀಟಿಗಳನ್ನು ಸಿದ್ಧಗೊಳಿಸಿ ಬಿಡುಗಡೆ ಮಾಡಿತು. ಇಡೀ ವಿಶ್ವವೇ ಈಗ ವಾಸನೆಭರಿತ ಅಂಚೆಚೀಟಿಗಳನ್ನು (ಗುಲಾಬಿ) ಹೊರತರುವಂತಾಯಿತು.

ಸಾಮ್ರಾಟ ಅಲೆಗಾÕಂಡರ್‌ ಭಾರತಕ್ಕೆ ಬಂದಾಗ ತನ್ನೊಡನೆ ಗುಲಾಬಿಗಳನ್ನು ತಂದಿದ್ದ. ಅಲ್ಲಿನಿಂದಲೇ ಭಾರತದಲ್ಲೂ ಗುಲಾಬಿ ಪುಷ್ಪಗಳ ಇತಿಹಾಸ ಆರಂಭ. ಮೊಗಲ್‌ ದೊರೆಗಳು ಗುಲಾಬಿ ಮೋಹಿಗಳಾದರು. ದೆಹಲಿ ಬಳಿಯ ಸಮ್ಮರ್‌ ಕುಂಡ ಹಾಗೂ ಆಗ್ರಾದಲ್ಲಿ ಗುಲಾಬಿ ತೋಟಗಳನ್ನು ಅಭಿವೃದ್ಧಿಗೊಳಿಸಿದ ಅವರು ಗುಲಾಬಿ ಅತ್ತರ್‌ ತಯಾರಿಕೆಯಲ್ಲೂ ಪರಿಣಿತಿ ಸಾಧಿಸಿದರು. ಗುಲಾಬಿ ಅತ್ತರ್‌ ಜಗತ್ತಿಗೆ ಭಾರತದ ಕೊಡುಗೆ. ನಂತರದ ಕಾಲದಲ್ಲಿ ಭಾರತದಲ್ಲೂ ಹಲವು ಬಗೆಯ ಗುಲಾಬಿ ತಳಿಗಳನ್ನು ಅಭಿವೃದ್ಧಿಪಡಿಸಲಾಯಿತು. ಭಾರತೀಯ ರೋಸ್‌ ಸೊಸೈಟಿ ಗುಲಾಬಿ ಹೂಗಳ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅದರ ಫ‌ಲವಾಗಿ ಹೊರಹೊಮ್ಮಿದ ಗುಲಾಬಿ ತಳಿಗಳಿಗೆ ಮೃಣಾಲಿನಿ, ಸುಗಂಧ ಎಂದು ಹೆಸರಿಡಲಾಯಿತು.

ಸಹಜ ಚೆಲುವಿನ ಜೊತೆಗೆ ಸುವಾಸನೆಯನ್ನು ಬೀರುತ್ತಿದ್ದ ಭಾರತೀಯ ಗುಲಾಬಿಗಳ ಚಿತ್ರಗಳನ್ನು ಒಳಗೊಂಡ ಹತ್ತಾರು ಅಂಚೆಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿದೆ. ಇದರಲ್ಲಿ ಸುವಾಸನೆಯುಳ್ಳ ಅಂಚೆಚೀಟಿಗಳೂ ಸೇರಿವೆ ! ವೈವಿಧ್ಯಮಯ ಹಾಗೂ ವರ್ಣರಂಜಿತ ಅಂಚೆಚೀಟಿಗಳಲ್ಲಿ ಗುಲಾಬಿ ಪುಷ್ಪ ವೈಭವ ಕಾಣಿಸಿಕೊಂಡು ಬರುತ್ತಿರುವುದು ವಿಶೇಷ. “ಪ್ರೇಮಿಗಳ ದಿನ’ದ ಜ್ವರ ವಿಶ್ವದಾದ್ಯಂತ ಹರಡಿಕೊಂಡ ನಂತರವಂತೂ ಹೊರಬಂದಿರುವ ಅಂಚೆಚೀಟಿಗಳು, ಮಿನಿಯೇಚರ್‌ಗಳು ಚಿತ್ರವಿಚಿತ್ರ.

ಜರ್ಮನಿಯ ಗುಲಾಬಿ ಉದ್ಯಾನ “ಲವ್‌ಸ್ವಿಜ್‌’ ಶತಮಾನೋತ್ಸವಕ್ಕೆ ಉದ್ಯಾನದ ದೊಡ್ಡ ಚಿತ್ರವುಳ್ಳ ಅಂಚೆಚೀಟಿಯನ್ನು ಬಿಡುಗಡೆ ಮಾಡಿ ಅಂಚೆ ಸಂಗ್ರಾಹಕರ ಮನಗೆದ್ದಿತು. ನಂತರ ಹಲವು ಆಧಾರಗಳಲ್ಲಿ ಥೇಟ್‌ ಗುಲಾಬಿ ಗೊಂಚಲಿನಂತೆಯೇ ಇರುವ ಅಂಚೆಚೀಟಿ ಬಂತು. ಪ್ರೇಮಿಗಳ ದಿನಕ್ಕೆ ಹೃದಯಾಕಾರದ ಅಂಚೆಚೀಟಿಗಳು, ಮಿನಿಯೇಚರ್‌ ಹಾಳೆಗಳೂ ಬರತೊಡಗಿವೆ. ಇವುಗಳ ಬೇಡಿಕೆಯೂ ಹೆಚ್ಚಿದೆ.

ಲಂಡನ್‌ನಲ್ಲಿ ರೋಸ್‌ ಫಿಲಾಟಲಿ ಫ್ರೆಂಡ್ಸ್‌ ಸಂಘವೊಂದು ಅಸ್ತಿತ್ವಕ್ಕೆ ಬಂದಿದ್ದು ಗುಲಾಬಿ ಅಂಚೆಚೀಟಿಗಳನ್ನು ಒಂದೆಡೆ ಸಂಗ್ರಹಿಸಿ ಮ್ಯೂಸಿಯಂ ಮಾಡುವ ಯೋಜನೆ ಹಾಕಿಕೊಂಡಿದೆ.

– ಎನ್‌. ಜಗನ್ನಾಥ ಪ್ರಕಾಶ್‌ 

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.