Updated at Sun,28th May, 2017 4:16PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪಾಕ್‌ ಹಿಂದೂ ಯುವಕನಿಗೆ ಅಮೆರಿಕ ಪ್ರತಿಷ್ಠಿತ ಪ್ರಶಸ್ತಿ

ವಾಷಿಂಗ್ಟನ್‌: ಪಾಕಿಸ್ಥಾನದ ಹಿಂದೂ ಯುವಕನೊಬ್ಬ ಅಮೆರಿಕ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯೊಂದಕ್ಕೆ ಭಾಜನರಾಗಿದ್ದಾರೆ. 

ಸುಸ್ಥಿರ ಶಾಂತಿ ಸ್ಥಾಪಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ ಯುವಕರಿಗೆ ಅಮೆರಿಕ ವಿದೇಶಾಂಗ ಇಲಾಖೆ  ಕೊಡಮಾಡುವ ಎಮರ್ಜಿಂಗ್‌ ಯಂಗ್‌ ಲೀಡರ್‌ ಪ್ರಶಸ್ತಿಗೆ ಪಾಕ್‌ ಯುವಕ ರಾಜ್‌ ಕುಮಾರ್‌ ಭಾಜನರಾಗಿದ್ದಾರೆ. ಇವರಲ್ಲದೇ ಮಾಲ್ಟ, ಶ್ರೀಲಂಕ, ಆಫ್ಘಾನಿಸ್ತಾನ, ಅಲೆjàರಿಯಾ ಮುಂತಾದ 10 ದೇಶಗಳ ಯುವಕರಿಗೆ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿ ಪಡೆದವರು 15 ದಿನಗಳ ಮಟ್ಟಿಗೆ ಅಮೆರಿಕಕ್ಕೆ ತೆರಳಿ ನಾಯ ಕತ್ವ ಸೇರಿ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ಪಡೆಯಲಿ ದ್ದಾರೆ.  ಪಾಕಿಸ್ತಾನಿ ಹಿಂದು ಆಗಿರುವ ಕುಮಾರ್‌ ಶಾಂತಿ, ಸಾಮರಸ್ಯ ಸಾರುವಂಥ ಲೇಖನಗಳನ್ನು ಪ್ರಕಟಿಸಿದ್ದಾರೆ.


More News of your Interest

Trending videos

Back to Top