ದೇವಸ್ಥಾನಗಳನ್ನು ಭಕ್ತರಿಗೆ ಬಿಟ್ಟುಕೊಡಿ


Team Udayavani, Apr 10, 2021, 6:50 AM IST

ದೇವಸ್ಥಾನಗಳನ್ನು ಭಕ್ತರಿಗೆ ಬಿಟ್ಟುಕೊಡಿ

ಈಗಾಗಲೇ ಅಸ್ತಿತ್ವದಲ್ಲಿರುವ ಮತಧರ್ಮವಾಗಲಿ ಅಥವಾ ಹೊಸದಾಗಿ ರೂಪಿಸುವ ಮತಧರ್ಮವಾಗಲಿ, ಪ್ರತಿ ಯೊಬ್ಬರಿಗೂ ತಮ್ಮ ಪೂಜಾಸ್ಥಳದ ಆಡಳಿತ ನಡೆಸುವ ಹಕ್ಕಿದೆ ಎಂದು ಭಾರತದ ಸಂವಿಧಾನವು ಸ್ಪಷ್ಟವಾಗಿ ಹೇಳುತ್ತದೆ. ಆರ್ಥಿಕ, ನೈತಿಕ ಅಥವಾ ರಾಷ್ಟ್ರದ ಭದ್ರತ ವಿಷಯ ಗಳಲ್ಲಿ ಏನಾದರೂ ಸಮಸ್ಯೆಯಾದಲ್ಲಿ ಪೂಜಾಸ್ಥಳವನ್ನು ನಿರ್ಬಂಧಿಸುವ ಹಾಗೂ ನಿಯಂತ್ರಿಸುವ ಹಕ್ಕನ್ನು ಸರಕಾರ‌ಕ್ಕೆ ನೀಡುವ ಷರತ್ತು ಅದರಲ್ಲಿ ಇದ್ದರೂ, ಸರಕಾರ‌ವೇ ಸ್ವತಃ ಅದರ ಆಡಳಿತ ನಡೆಸಬಹುದು ಎಂದು ಎಲ್ಲೂ ಹೇಳಿಲ್ಲ. ಆದರೆ ತಮಿಳುನಾಡಿನಲ್ಲಿ ಹಿಂದು ರಿಲೀಜಿಯಸ್‌ ಆ್ಯಂಡ್‌ ಚಾರಿಟೆಬಲ್‌ ಎಂಡೋಮೆಂಟ್ಸ್‌ ಆ್ಯಕ್ಟ್ (ಎಚ್‌ ಆರ್‌ ಆ್ಯಂಡ್‌ ಸಿಇ) ದೇವಸ್ಥಾನಗಳ ಆಡಳಿತ ನಡೆಸುವ ಆಧಾರ ದಲ್ಲೇ ರೂಪಿಸಲ್ಪಟ್ಟಿದೆ. ಸಂವಿಧಾನಕ್ಕೆ ಮೂಲಭೂತವಾಗಿ ವಿರುದ್ಧ ವಾಗಿದ್ದರೂ ಕೂಡ ಈ ಕಾನೂನು ದಶಕಗಳಿಂದ ನಡೆದುಕೊಂಡು ಬಂದಿದೆ.

ಸರಕಾರ‌ದ ನಿಯಂತ್ರಣದಲ್ಲಿ ದೇವಸ್ಥಾನಗಳು ಅಕ್ಷರಶಃ ಅವನತಿ ಹೊಂದುತ್ತಿವೆ. ಬ್ರಿಟಿಷ್‌ ಆಡಳಿತ ಮತ್ತು ಇಸ್ಲಾ ಮಿಕ್‌ ಆಕ್ರಮಣ-ಆಡಳಿತಗಳ ಸಮಯದಲ್ಲಿ ಆದ ನಷ್ಟ ವನ್ನು ಅಳೆಯಲು ಆಗುವುದಿಲ್ಲ. ಆದರೆ ಸ್ವತಂತ್ರ ಭಾರತದಲ್ಲಿ ಆದ ನಷ್ಟವೇ ಅಪಾರವಾಗಿದೆ. ನಮ್ಮಿಂದಲೇ ಆರಿಸಲ್ಪಟ್ಟ ಸರಕಾರ‌ಗಳು ದೇವಸ್ಥಾನಗಳ ಉಸಿರುಗಟ್ಟಿಸುತ್ತಿವೆ.

ಮದ್ರಾಸ್‌ ಹೈಕೋರ್ಟ್‌ಗೆ ತಮಿಳುನಾಡಿನ ಸರಕಾರ‌ವು ನೀಡಿದ ಅಂಕಿಅಂಶಗಳು ಹೀಗಿವೆ: 11,999 ದೇವಸ್ಥಾನ ಗಳಲ್ಲಿ ದಿನಕ್ಕೆ ಒಂದು ಪೂಜೆಯೂ ನಡೆಯುತ್ತಿಲ್ಲ; 34,000 ದೇವ ಸ್ಥಾನಗಳಲ್ಲಿ ಪೂಜೆ, ನಿರ್ವಹಣೆ ಮತ್ತು ಭದ್ರತೆ ಇತ್ಯಾದಿ ಗಳೆಲ್ಲವನ್ನೂ ಒಬ್ಬನೇ ವ್ಯಕ್ತಿ ನೋಡಿಕೊಳ್ಳು ವಂತಾಗಿದೆ; 37,000 ದೇವಸ್ಥಾನಗಳಲ್ಲಿ ವಾರ್ಷಿಕ ಆದಾಯ ರೂ. 10,000ಕ್ಕಿಂತಲೂ ಕಡಿಮೆ ಇದೆ; 1,200 ವಿಗ್ರಹಗಳು ಕಳುವಾಗಿವೆ- ಕಲಾಕೃತಿಗಳಲ್ಲ, ಪೂಜಿಸುವ ಮೂರ್ತಿಗಳು!

ಅದ್ಭುತವಾದ ಕೆತ್ತನೆಗಳ ಮೇಲೆ ಎನಾಮಲ್‌ ಪೇಂಟ್‌ ಮತ್ತು ಸುಣ್ಣ ಬಳಿಯಲಾಗಿದೆ. ಭಾರತದಲ್ಲಿರುವ 1,00,000 ಪುರಾತನ ಶಾಸನಗಳ ಪೈಕಿ 60,000ಕ್ಕೂ ಹೆಚ್ಚು ತಮಿಳುನಾಡಿನಲ್ಲಿಯೇ ಇದೆ. ನಿರ್ವಹಣೆಯ ಹೆಸರಿನಲ್ಲಿ ಮರಳುಚಿಮ್ಮಿಸಿ ಇವುಗಳು ಸವೆದು ಅಳಿದುಹೋಗುತ್ತಿವೆ. ಇವೆಲ್ಲ ಏಕಾಗುತ್ತಿವೆಯೆಂದರೆ, ದೇವಸ್ಥಾನಗಳ “ನವೀ ಕರಣದ’ ಕೆಲಸ ಕೊಡುವುದು ಅತ್ಯಂತ ಕಡಿಮೆ ಬಿಡ್ಡಿಂಗ್‌ ಮಾಡಿದ ಗುತ್ತಿಗೆದಾರರಿಗೇ ಹೊರತು, ದೇವಸ್ಥಾನಗಳನ್ನು ಯಾವ ಆಧಾರದ ಮೇಲೆ ಕಟ್ಟಲಾಗಿದೆಯೆನ್ನುವ ಜ್ಞಾನವಿರುವವರಿಗಲ್ಲ.

ಯುನೆಸ್ಕೋ ತಮಿಳುನಾಡಿನ ದೇವಸ್ಥಾನಗಳ ಸ್ಥಿತಿಯ ಬಗ್ಗೆ ವಿವರಿಸುವಾಗ “ಅಧೋಗತಿ’ ಮತ್ತು “ಕಗ್ಗೊಲೆ’ ಎನ್ನುವ ಪದವನ್ನು ಬಳಸುತ್ತದೆ. ದೇವಸ್ಥಾನಗಳನ್ನ ಕೆಡವಲಾಗುತ್ತಿದೆ, ಕುಸಿಯಲು ಬಿಟ್ಟು ಮುಚ್ಚಿ ಹಾಕಲಾಗುತ್ತಿದೆ. ಅನಂತರ ಇವುಗಳನ್ನ ಪುನಃಸ್ಥಾಪಿಸಲಾಗುವುದಿಲ್ಲ ಎಂದು ಘೋಷಿಸಿ ಬಿಡಲಾಗುತ್ತಿದೆ. ಸರಿಯಾದ ನಿರ್ವಹಣೆಯಿಲ್ಲದೆ ಬಹಳ ಕಾಲದವರೆಗೆ ಹಾಗೇ ಬಿಟ್ಟರೆ ಯಾವುದನ್ನೂ ಪುನಃಸ್ಥಾಪಿಸ ಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಕ್ರಮೇಣ ದೇವಸ್ಥಾನ ಗಳಿಗೆ ಬರುವ ಜನರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುವಂತೆ ನೋಡಿಕೊಳ್ಳಲಾಗಿದೆ.

ಕಾಳಜಿ ಇಲ್ಲದವರು ದೇವಸ್ಥಾನಗಳನ್ನು ನಿರ್ವಹಿಸ ಬಾರದು: ಇವೆಲ್ಲ ನಿಲ್ಲಬೇಕೆಂದರೆ ದೇವಸ್ಥಾನಗಳನ್ನು ಕಾಳಜಿ ಯಿಂದ ನೋಡಿಕೊಳ್ಳುವ, ಅದನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪರಿಗಣಿಸುವವರ ಕೈಗೆ ನೀಡಬೇಕು. ನಾವು ಮಾತನಾಡುತ್ತಿರುವುದು ದೇವಸ್ಥಾನದ ಪಾವಿತ್ರ್ಯದ ಬಗ್ಗೆ. ದೇವಸ್ಥಾನಕ್ಕಾಗಿ ಯಾರ ಹೃದಯ ಮಿಡಿಯುವುದಿ ಲ್ಲವೋ ಅವರು ದೇವಸ್ಥಾನಗಳನ್ನು ನಿರ್ವಹಿಸಲಾರರು ಎನ್ನುವುದು ಸ್ಪಷ್ಟ. ಜನರ ಜೀವನದ ಆಧ್ಯಾತ್ಮಿಕ ವಿಷಯಗಳಲ್ಲಿ ಯಾವುದೇ ರೀತಿಯಲ್ಲಿ ಮೂಗು ತೂರಿಸುವುದು ಸರಕಾರ‌ದ ಕೆಲಸವಲ್ಲ. ಇದು ವ್ಯಕ್ತಿಗತ ವಿಷಯವಾಗಿದ್ದು ಸಮುದಾಯಗಳಿಂದ ನಿರ್ವಹಿಸಲ್ಪಡಬೇಕು. ಅಲ್ಲದೇ, ಎಚ್‌ ಆರ್‌ ಆ್ಯಂಡ್‌ ಸಿಇ ಅಧಿಕಾರಿಗಳು ಚಿನ್ನ ಹಾಗೂ ಮೂರ್ತಿಗಳನ್ನು ಕದ್ದು ವಿದೇಶಕ್ಕೆ ಮಾರಿದ ಆರೋಪಕ್ಕೆ ಒಳಗಾಗಿದ್ದಾರೆ. ಕೆಲವು ವರ್ಷ ಗಳ ಹಿಂದೆ ವಿಗ್ರಹವೊಂದು ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿ, ಅದನ್ನು ಅವರು ಹಿಂದಿರುಗಿಸಿದರು. ವಿದೇಶಿ ಅಧಿಕಾರಿ ಗಳಿಗೂ ಕೂಡ ಈ ಕಲಾಕೃತಿಗಳ ಬಗ್ಗೆ ಆದರವಿದೆ, ಆದರೆ ನಮ್ಮದೇ ಅಧಿಕಾರಿಗಳ ಔದಾಸೀನ್ಯ ವಿಷಾದನೀಯ.

ಶತಮಾನಗಳ ಹಿಂದೆ ಈ ದೇಶದಲ್ಲಿ ಧಾರ್ಮಿಕ ಘರ್ಷಣೆಯಾದ ಇತಿಹಾಸವಿದೆ. ನಮ್ಮ ದೇಶದ ಮೇಲೆ ಪರಕೀಯರು ದಾಳಿ ಮಾಡಿದಾಗ, ಅವರ ಮತದಲ್ಲಿ ಮೂರ್ತಿಪೂಜೆ ಅಪಚಾರವಾಗಿದ್ದರಿಂದ ದೇವಸ್ಥಾನಗಳು ಇರ ಬಾರದು ಎಂಬುದು ಅವರ ನಂಬಿಕೆಯಾಗಿತ್ತು. ಹೀಗಾ ಗಿ ಅನೇಕ ದೇವಸ್ಥಾನಗಳನ್ನು ನಾಶಮಾಡಿದರು.

ಈಗ ಅನ್ಯಧರ್ಮೀಯರು ಅಧಿಕಾರಕ್ಕೆ ಬಂದರೆ, ಇದೆಲ್ಲ ದೇವರಲ್ಲ, ದೇವಸ್ಥಾನಗಳು ಇರಬಾರದು ಎಂಬುದು ಅವರ ನಂಬಿಕೆಯಾಗಿದ್ದರೆ, ಅವರು ದೇಗುಲಗಳ ಉತ್ತಮ ನಿರ್ವಹಣೆ ಮಾಡುವರು ಎಂದು ನಿರೀಕ್ಷಿಸುವುದು ಹೇಗೆ?
ಸರಕಾರ‌ದಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಕಮಿ ಷನರ್‌ ಅಥವಾ ಯಾವುದೇ ಅಧಿಕಾರಿಯ ಆಯ್ಕೆಯನ್ನು ಮತಧರ್ಮದ ಆಧಾರದ ಮೇಲೆ ನಿರ್ಧರಿಸಲಾಗದು, ಏಕೆಂದರೆ, ಇದು ಪ್ರಜಾಪ್ರಭುತ್ವ, ಜಾತ್ಯತೀತ ಪ್ರಕ್ರಿಯೆ. ಅವರು ಯಾವ ಮತಧರ್ಮವನ್ನು ಅನುಸರಿಸುತ್ತಾರೆ ಅನ್ನುವುದರ ಬಗ್ಗೆ ನಮಗೆ ಸಮಸ್ಯೆ ಇಲ್ಲ. ಯಾರು ಬೇಕಾದರೂ ಐಎಎಸ್‌ ಅಧಿಕಾರಿಯಾಗಿ ಒಂದು ಸ್ಥಾನವನ್ನು ವಹಿಸಬಹುದು. ಅದರಿಂದ ಏನೂ ಸಮಸ್ಯೆಯಿಲ್ಲ. ಆದರೆ ಧಾರ್ಮಿಕ ಅಥವಾ ಆಧ್ಯಾತ್ಮಿಕ ಪ್ರಕ್ರಿಯೆಯು ಅವರಿಂದ ನಿರ್ವಹಿಸಲ್ಪಡಬಾರದು.

ದೇವಸ್ಥಾನಗಳ ಖಾಸಗೀಕರಣ ಮತ್ತು ಬಾಹ್ಯ ಲೆಕ್ಕ ಪರಿಶೋಧನೆಗೆ ಒಂದು ಆಯೋಗ 1947ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೋದಾಗ, ದೇವ ಸ್ಥಾನಗಳು – ಮತ್ತು ದೇಶದ ಇನ್ನೂ ಹಲವಾರು ವಿಷಯ ಗಳು – ಶೋಚನೀಯ ಸ್ಥಿತಿಯಲ್ಲಿದ್ದವು. ಅವುಗಳನ್ನು ಪುನರ್‌ ರಚಿಸುವ ಕಾರ್ಯದಲ್ಲಿ, ಬಹುಶಃ ದೇವಸ್ಥಾನಗಳ ಆಡಳಿತವನ್ನು ಸ್ವಲ್ಪ ಸಮಯ ಸರಕಾರ‌ ನೋಡಿಕೊಳ್ಳುವುದು ಅನಿವಾರ್ಯ ಎಂದು ಅನಿಸಿರಬೇಕು. ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತನಾಲ್ಕು ವರ್ಷದ ಅನಂತರ, ಇದನ್ನು ಸರಿಪಡಿಸಿ, ಭಕ್ತರಿಗೆ ಹಿಂದಿರುಗಿಸುವ ಸಮಯ ಬಂದಿದೆ. ಸಮುದಾಯವು ದೇವಸ್ಥಾನಗಳನ್ನು ನಿರ್ವಹಿಸುವ ಬಗ್ಗೆ ಸರಕಾರ‌ವು ಮಾನದಂಡಗಳನ್ನು ನಿಗದಿಪಡಿಸಬಹುದು. ಯಾರಾದರೂ ದೇವಸ್ಥಾನದಲ್ಲಿ ದುರ್ವ್ಯವಹಾರ ಮಾಡಿದರೆ, ಅದಕ್ಕೆ ಅದಾಗಲೇ ಕಾನೂನುಗಳಿವೆ. ಆದರೆ ಸರಿಯಾದ ನಿರ್ವಹಣೆಯಿಲ್ಲ ಎಂಬ ಆಧಾರದ ಮೇಲೆ ಸರಕಾರ‌ವೇ ದೇವಸ್ಥಾನಗಳ ಆಡಳಿತ ವಹಿಸುವುದು ಸಂಕುಚಿತ ದೃಷ್ಟಿಯಾಗುತ್ತದೆ.

ಹಲವು ಕಡೆಗಳಿಂದ ನನಗೆ ಈ ಪ್ರಶ್ನೆಯನ್ನು ಕೇಳಲಾಗುತ್ತಿದೆ, “ಹಿಂದೂ ಸಮುದಾಯವು ದೇವಸ್ಥಾನಗಳನ್ನು ಚೆನ್ನಾಗಿ ನಿರ್ವಹಿಸುತ್ತದೆಯೇ?” ಇದರ ಹಿಂದಿನ ಕಲ್ಪನೆ ಏನೆಂದರೆ – ತಮಿಳುನಾಡಿನ ಎಂಬತ್ತೇಳು ಪ್ರತಿಶತ ಜನರಿಗೆ, ತಮಗೆ ಅಮೂಲ್ಯವಾದುದನ್ನು ನಿರ್ವಹಿಸುವ ಸಾಮರ್ಥ್ಯ, ನಿಷ್ಠೆ ಮತ್ತು ಬಾಧ್ಯತೆಯಿಲ್ಲ, ಆದರೆ ಬೇರೆ ಯಾರಿಗೋ ಅದು ಇದೆ. ಇದು ಹಾಸ್ಯಾಸ್ಪದ.

ತಮಿಳುನಾಡು ಸರಕಾರ‌ವು ತೆಗೆದುಕೊಳ್ಳಬೇಕಾದ ಒಂದು ಹೆಜ್ಜೆಯೆಂದರೆ, ದೇವಸ್ಥಾನಗಳನ್ನು ಸಾರ್ವಜನಿಕರಿಗೆ ಹಿಂತಿರುಗಿಸುವ ಖಾಸಗೀಕರಣ ಪ್ರಕ್ರಿಯೆಯು ಹೇಗೆ ನಡೆಯಬೇಕು ಎಂದು ನಿರ್ಧರಿಸಲು ಒಂದು ಆಯೋಗವನ್ನು ಸ್ಥಾಪಿಸಬೇಕು. ಎರಡನೆಯದಾಗಿ, ಬಾಹ್ಯ ಲೆಕ್ಕ ಪರಿಶೋಧನೆಯನ್ನು ನಡೆಸಬೇಕು (ಸಮುದಾಯವು ಅದರ ವೆಚ್ಚ ಭರಿಸಬೇಕು). ಈ ಪರಿಶೋಧಕರು, ದೇವಸ್ಥಾನಕ್ಕಾಗಿರುವ ಹಾನಿ, ದೇವಸ್ಥಾನದ ಭೂಮಿಯ ಅತಿಕ್ರಮಣ, ದೇವಸ್ಥಾನದ ಜಾಗದಲ್ಲಿ ಜನರು ಕಟ್ಟಿರುವ ಕಾನೂನುಬಾಹಿರ ಕಟ್ಟಡಗಳು – ಇವೆಲ್ಲವನ್ನೂ ಲೆಕ್ಕ ಹಾಕಬೇಕು.

ಈ ಕಟ್ಟಡಗಳನ್ನು ಒಡೆಯಿರಿ ಎಂದು ನಾವು ಹೇಳುತ್ತಿಲ್ಲ. ಆದರೆ, ಆ ಜಾಗವನ್ನು ಬಳಸುತ್ತಿರುವವರು, ಇಂದಿನ ಮೌಲ್ಯದ ಪ್ರಕಾರ ಬಾಡಿಗೆ ನೀಡಬೇಕು ಅಥವಾ ಖರೀದಿಸಬೇಕು. ಸುಮಾರು ಐದು ಲಕ್ಷ ಎಕರೆಗಳು ರಾಜ್ಯದ 44,000 ದೇವಸ್ಥಾನಗಳಿಗೆ ಸೇರಿದುದಾಗಿದೆ. ಎಕರೆಗೆ ಕೇವಲ ಐದು ರೂಪಾಯಿ ಬಾಡಿಗೆಯಿರುವ ಹಲವು ಜಾಗಗಳು ನನಗೆ ಗೊತ್ತಿದೆ, ಆದರೆ ಹಲವು ದಶಕ ಗಳಿಂದ ಅದನ್ನೂ ಪಾವತಿಸಲಾಗಿಲ್ಲ. ಸರಿಯಾದ ಬಾಡಿಗೆ ಅಥವಾ ಖರೀದಿ ಮೌಲ್ಯವನ್ನು ಪೂರ್ಣವಾಗಿ ಪಾವತಿಸಿದರೆ, ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲು ಅದೇ ಸಾಕಾಗುತ್ತದೆ.

– ಸದ್ಗುರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.