ಕೆರೆ ಕಟ್ಟೆ ಖಾಲಿ, ಭೂಗರ್ಭ ಸೇರಿದ ಅಂತರ್ಜಲ


Team Udayavani, Apr 13, 2021, 5:18 PM IST

ಕೆರೆ ಕಟ್ಟೆ ಖಾಲಿ, ಭೂಗರ್ಭ ಸೇರಿದ ಅಂತರ್ಜಲ

ಕೊರಟಗೆರೆ: ಸರ್ಕಾರದ ಅಧಿಕೃತ ಆದೇಶದ ಎತ್ತಿನಹೊಳೆ ಕಾಮಗಾರಿ ಅಪೂರ್ಣವಾಗಿದ್ದು,ಗ್ರಾಮೀಣ ಪ್ರದೇಶದ ಹತ್ತಾರು ಕೆರೆಗಳಿಗೆ ಹರಿಯಬೇಕಾದ ಹೇಮಾವತಿ ನೀರು ಜೆಟ್ಟಿ ಅಗ್ರ ಹಾರ ಕೆರೆಗೆ ಮಾತ್ರ ಸೀಮಿತವಾಗಿದೆ. ಬಯಲುಸೀಮೆ ಪ್ರದೇಶದ ನೀರಾವರಿ ಯೋಜನೆಯಕನಸು ಇನ್ನು ಕನಸಾಗೆ ಉಳಿದಿದ್ದು, ಬರಗಾಲದಛಾಯೆಯಿಂದ ಕೆರೆ ಕಟ್ಟೆಗಳು ಖಾಲಿಯಾಗಿ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದಿದೆ.

ಸಣ್ಣ ನೀರಾವರಿ ಇಲಾಖೆ 44 ಕೆರೆ, ಪಂಚಾಯತ್‌ರಾಜ್‌ ಇಲಾಖೆ 82 ಕೆರೆ ಮತ್ತು ಮೀನುಗಾರಿಕೆಇಲಾಖೆ 10 ಕೆರೆ ಸೇರಿ ಒಟ್ಟು 166 ಕೆರೆಗಳಲ್ಲಿನೀರು ಬಹುತೇಕ ಖಾಲಿಯಾಗಿದ್ದು, ರೈತಾಪಿವರ್ಗ ಮತ್ತು ಸರ್ಕಾರಿ ಸ್ವಾಮ್ಯದ ನೂರಾರುಕೊಳವೆಬಾವಿಗಳು ಬತ್ತಿ ಹೋಗಿವೆ. 24 ಗ್ರಾಪಂವ್ಯಾಪ್ತಿಯ ಕೊಳವೆಬಾವಿಯ ಅಂಕಿ-ಅಂಶವೇತಾಪಂ ಕಚೇರಿಯಿಂದ ಮಾಯವಾಗಿದೆ.

ನೂರಾರು ಕೆರೆಗಳು ಒತ್ತುವರಿ: ಕೊರಟಗೆರೆ ಕ್ಷೇತ್ರದ ನೀರಾವರಿ ಕನಸಿನ ಯೋಜನೆಯಾದ ಹೇಮಾವತಿ ನೀರು ಜೆಟ್ಟಿ ಅಗ್ರಹಾರಕೆರೆಗೆ ಸೀಮಿತವಾದರೆ, ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಹತ್ತಾರು ಬಗೆಯ ವಿಘ್ನಗಳು ಪ್ರಾರಂಭವಾಗಿವೆ. ಕೆರೆ ಕಟ್ಟೆಗಳ ಪುನಶ್ಚೇತನ ಮತ್ತು ಅಭಿವೃದ್ಧಿ ಕಾಣದೇ ನೂರಾರು ಕೆರೆ ಒತ್ತುವರಿ ಮಾಯಾವಾಗಿವೆ. ಅಧಿಕಾರಿ ವರ್ಗ ಮೌನಕ್ಕೆ ಶರಣಾಗಿದ್ದಾರೆ.

20 ನೀರಿನ ಘಟಕ ಸ್ಥಗಿತ: ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕೆಆರ್‌ಐಡಿಎಲ್, ಕೆಎಂಎಫ್,ಇತರೆ ಇಲಾಖೆಯಿಂದ 154 ಘಟಕ ನಿರ್ಮಾಣವಾಗಿವೆ. ಆದರೆ, ನೀರಿನ ಸಮಸ್ಯೆ-ನಿರ್ವಹಣೆ ಕೊರತೆಯಿಂದ20ಕ್ಕೂ ಅಧಿಕ ಕಡೆಗಳಲ್ಲಿ ಸ್ಥಗಿತವಾಗಿವೆ. ಇನ್ನೂ100 ಕ್ಕೂ ಅಧಿಕ ಗ್ರಾಮಗಳಲ್ಲಿ ಶುದ್ಧ ನೀರಿನ ಅವಶ್ಯಕತೆ ಇದೆ. ಮತ್ತೂಂದೆಡೆ ಅರಸಾಪುರ, ಅಕ್ಕಿರಾಂಪುರ, ಬೈಚಾಪುರ, ಹೊಳವನಹಳ್ಳಿ, ಬಿ.ಡಿ.ಪುರ, ಕ್ಯಾಮೇನಹಳ್ಳಿ, ದೊಡ್ಡಸಾಗ್ಗೆರೆ, ಚಿನ್ನಹಳ್ಳಿ, ಎಲೆರಾಂಪುರ, ವಜ್ಜನಕುರಿಕೆ, ತುಂಬಾಡಿ, ವಡ್ಡ ಗೆರೆ, ಪಾತಗಾನಹಳ್ಳಿ, ಹಂಚಿಹಳ್ಳಿ, ಕುರಂ ಕೋಟೆ, ಜೆಟ್ಟಿ ಅಗ್ರಹಾರ, ತೋವಿನಕೆರೆ, ಬುಕ್ಕಾಪಟ್ಟಣ,ಬೂದಗವಿ ಗ್ರಾಪಂನ 15ಕ್ಕೂ ಅಧಿಕ ಗ್ರಾಮಗಳಲ್ಲಿ ಈಗಾಗಲೇ ನೀರಿನ ಅಭಾವ ಸೃಷ್ಟಿಯಾಗಿದೆ.

ಕಾಡಿನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ :

ಸಿದ್ದರಬೆಟ್ಟ, ಚನ್ನರಾಯನದುರ್ಗ, ದೇವರಾಯನದುರ್ಗ, ಹಿರೇಬೆಟ್ಟದಅಕ್ಕ-ಪಕ್ಕದ ಕೆರೆಗಳಲ್ಲಿ ನೀರು ಖಾಲಿಯಾಗಿದೆ.ಕಾಡಿನಲ್ಲಿ ವಾಸಿಸುವ ಪ್ರಾಣಿ ಮತ್ತು ಪಕ್ಷಿಗಳಿಗೆನೀರಿನ ಅಭಾವ ಸೃಷ್ಟಿಯಾಗಿದೆ. ಹಾಗಾಗಿ ಪ್ರಾಣಿಗಳು ನಾಡಿಗೆ ಆಗಮಿಸಿ ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನ ಅರಣ್ಯಇಲಾಖೆಯಿಂದ ಕಾಡಿನಲ್ಲಿಯೇ ನೀರಿನ ವ್ಯವಸ್ಥೆ ಕಲ್ಪಿಸಬೇಕಾದ ಅನಿವಾರ್ಯತೆ ಇದೆ.

ತಾಲೂಕಿನ ಬೈಚಾಪುರ ಗ್ರಾಪಂ, ಬಸವನಹಳ್ಳಿ, ಮಾವತ್ತೂರು ಗ್ರಾಪಂನ ಅಕ್ಕಪಕ್ಕದ ಗ್ರಾಮದಲ್ಲಿ ಹಾಗೂ ತೋವಿನಕೆರೆ ಗ್ರಾಪಂ ಕಬ್ಬಿಗೆರೆ, ಅಜ್ಜೇನಹಳ್ಳಿ, ಸೂರೇನಹಳ್ಳಿ ಗ್ರಾಮದಲ್ಲಿಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.ಇದಕ್ಕೆ ಪರ್ಯಾಯವಾಗಿ ಗ್ರಾಪಂನ15ನೇ ಹಣಕಾಸು ಯೋಜನೆಯಲ್ಲಿ ಶೇ.50 ರಷ್ಟು ಹಣವನ್ನು ಕುಡಿಯುವ ನೀರಿನ ವೆಚ್ಚ ಭರಿಸಲು ಆದೇಶಿಸಲಾಗಿದೆ. – ಶಿವಪ್ರಕಾಶ್‌, ತಾಪಂ ಇಒ

ಪ್ರತಿ ಶುಕ್ರವಾರ ನೀರಿನ ಸಮಸ್ಯೆ ಬಗ್ಗೆ ಟಾಸ್ಕ್ ಪೊರ್ಸ್‌ ಸಭೆ ನಡೆಯುತ್ತಿದ್ದು,ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ35 ಲಕ್ಷ ರೂ. ಅನುದಾನಕ್ಕೆ ಜಿಪಂಗೆ ಬೇಡಿಕೆ ಸಲ್ಲಿಸಿದ್ದೇವೆ. ಕೊರಟಗೆರೆ ತಾಲೂಕಿನ 46 ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದರೇ ದೂರು ಸಲ್ಲಿಸಬಹುದು.  – ಗೋವಿಂದರಾಜು, ತಹಶೀಲಾ

 

– ಸಿದ್ದರಾಜು ಕೆ

ಟಾಪ್ ನ್ಯೂಸ್

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್‌ವೈ

1-qwewqe

Kunigal: ಸಶಸ್ತ್ರಪಡೆಯ ಪೊಲೀಸ್ ಪೇದೆಯ ಕೊಲೆಗೆ ಯತ್ನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.