ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡಾಣೆ ಆಗಿದೆ: ಈಶ್ವರಪ್ಪ

Team Udayavani, Apr 21, 2021, 6:54 PM IST

21-26

ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಲೆ ಕೆಟ್ಟು ಹನ್ನೆರಡಾಣೆ ಆಗಿ ಹೋಗಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಟೀಕಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಯಲ್ಲಿ ಹೋಗುವ ಕುಡುಕನ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ.

ಮುಖ್ಯಮಂತ್ರಿ ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರ ಐಸಿಯುನಲ್ಲಿದೆ ಎಂದು ಅವರು ಹೇಳಿರುವುದು ಸರಿಯಲ್ಲ. ಅವರೊಬ್ಬ ಅಯೋಗ್ಯ ಎಂದು ವಾಗ್ಧಾಳಿ ನಡೆಸಿದರು. ಸಿದ್ದರಾಮಯ್ಯ ಸಿ.ಎಂ.ಆಗಲು ಅಯೋಗ್ಯರಾಗಿದ್ದಾರೆ. ಹೀಗಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನ ಅವರನ್ನು ಸೋಲಿಸಿದ್ದರು. ಆದರೂ ಅವರು ತಮ್ಮ ವರ್ತನೆ ತಿದ್ದಿಕೊಂಡಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತ ವಿಪಕ್ಷ ನಾಯಕರಾಗಲು ಕೂಡ ಯೋಗ್ಯರಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇಡಿ ಸರ್ಕಾರವೇ ಐಸಿಯುನಲ್ಲಿದೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ತಾನು ಮುಖ್ಯಮಂತ್ರಿಯಾಗಿದ್ದೆ ಎಂಬ ಘನತೆಯನ್ನು ಕೂಡ ಮರೆತು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ, ಸರ್ಕಾರವನ್ನು ಟೀಕಿಸುತ್ತಾರೆ. ಅವರಿಗೆ ತಲೆಕೆಟ್ಟು ಹನ್ನೆರಡಾಣೆ ಆಗಿ ಹೋಗಿದೆ. ಮುಖ್ಯಮಂತ್ರಿ ಸ್ಥಾನ ಕಳೆದು ಕೊಂಡಾಗಿನಿಂದ ಅವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ. ನಾನು ಕೂಡ ಜೀವಂತವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳಿಗೆ ಕೋವಿಡ್‌ ಬಂದಿದ್ದು, ಆಸ್ಪತ್ರೆಯಲ್ಲಿದ್ದಾರೆ. ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡಿದ್ದು ಸರಿನಾ ಎಂದು ಪ್ರಶ್ನಿಸಿದ ಈಶ್ವರಪ್ಪ ಅನೇಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿರುವ ಇಂತಹ ಒಬ್ಬ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರಲ್ಲ ಎಂಬುದೇ ಬೇಸರ ತರಿಸುತ್ತದೆ. ಮುಖ್ಯಮಂತ್ರಿ ಯಾಗಿದ್ದೇನಲ್ಲ ಎಂಬ ಜ್ಞಾನವೂ ಇಲ್ಲದ ಹಾಗೆ ಅವರು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯಪಾಲರ ಸಭೆ ಆಶ್ಚರ್ಯ ಮೂಡಿಸಿದೆ: ಕೋವಿಡ್‌ ವಿಚಾರದಲ್ಲಿ ರಾಜ್ಯಪಾಲರು ಏಕೆ ಸಭೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ರಾಜ್ಯಪಾಲರೇ ನೇರವಾಗಿ ಸಭೆ ಕರೆದಿರುವುದು ಆಶ್ವರ್ಯ ತಂದಿದೆ ಎಂದು ಈಶ್ವರಪ್ಪ ಹೇಳಿದರು. ರಾಜ್ಯಪಾಲರು ಸಭೆ ಕರೆಯಬಾರದು ಎಂದೇನೂ ಇಲ್ಲ. ಚುನಾಯಿತ ಪ್ರತಿನಿ ಗಳ ಸರ್ಕಾರ ಇದ್ದಾಗಲೂ ರಾಜ್ಯಪಾಲರು ಏಕೆ ಸಭೆ ಕರೆದಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇದು ಹೊಸ ವ್ಯವಸ್ಥೆ ಆಯಿತೇ ಎಂಬ ಅನುಮಾನ ಕಾಡುತ್ತಿದೆ. ಕೋವಿಡ್‌ ಪರಿಸ್ಥಿತಿ ಮಿತಿಮೀರಿ ಹೋಗುತ್ತಿದೆ. ರಾಜ್ಯಪಾಲರು ಸಭೆ ಕರೆದಿರುವುದರಿಂದ ಈ ವಿಚಾರದಲ್ಲಿ ಸೀರಿಯಸ್‌ ಬಂದಿದೆ ಎಂದರು.

ರಾಜ್ಯಪಾಲರ ಸಭೆ ರಾಜ್ಯದ ಹಿತ ದೃಷ್ಟಿಯಿಂದ ಒಳ್ಳೆಯದಾಗುತ್ತದೆ ಎಂಬ ಆಶಯ ನನ್ನದು ಎಂದು ತಿಳಿಸಿದರು. ರಾಜ್ಯದಲ್ಲಿ ಲಾಕ್‌ಡೌನ್‌ ಅವಶ್ಯಕತೆ ಇಲ್ಲ. ರಾಜ್ಯಪಾಲರು ಇಂದು ನಡೆಸುವ ಸಭೆ ರಾಜ್ಯದ ಹಿತದೃಷ್ಟಿಯಿಂದ ಮಹತ್ವ ಪೂರ್ಣವಾಗಿದ್ದು, ರಾಜ್ಯಪಾಲರ ಸಭೆಯ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ವಾಗಿರುತ್ತೇವೆ. ವಿರೋಧ ಪಕ್ಷದ ಟೀಕೆಗಳನ್ನು ಗುಣಾತ್ಮಕವಾಗಿ ತೆಗೆದು ಕೊಳ್ಳುತ್ತೇವೆ ಎಂದರು. ಕೆಲವರು ಎಲ್ಲದಕ್ಕೂ ವಿರೋಧ ಮಾಡಿದರಷ್ಟೆ ವಿರೋಧ ಪಕ್ಷವೆಂದು ಭಾವಿಸಿದ್ದಾರೆ.

ಖಂಡಿತವಾಗಿಯೂ ವಿರೋಧ ಪಕ್ಷದವರು ಸಹಕಾರ ನೀಡುತ್ತಿದ್ದು, ಅವರ ಸಹಕಾರದಿಂದ ಕೋವಿಡ್‌ ಕಡಿಮೆ ನಿಯಂತ್ರಣಕ್ಕೆ ಶ್ರಮಿಸುತ್ತೇವೆ ಎಂದರು.

ಟಾಪ್ ನ್ಯೂಸ್

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.