ಲಾಕ್‌ಡೌನ್‌ನತ್ತ ಚಿತ್ತ

Team Udayavani, May 7, 2021, 7:00 AM IST

ಲಾಕ್‌ಡೌನ್‌ನತ್ತ ಚಿತ್ತ

ಬೆಂಗಳೂರು: ಕೋವಿಡ್ ಕರ್ಫ್ಯೂ ಜಾರಿಯಾಗಿ ವಾರ ಕಳೆದಿದ್ದು, ಸೋಂಕು ಕಡಿಮೆಯಾಗುತ್ತಿಲ್ಲ. 2 ದಿನಗಳಿಂದ 50 ಸಾವಿರ ಪ್ರಕರಣ ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಿದೆ. ಕೇರಳ, ಮಧ್ಯಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದೆ. ರಾಜ್ಯದಲ್ಲೂ ಇದೇ ಕ್ರಮ ಜಾರಿಗೊಳಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಆರೋಗ್ಯ ಸಚಿವ ಡಾ| ಸುಧಾಕರ್‌ ಅವರೇ ಕರ್ಫ್ಯೂವಿನಿಂದ ಪ್ರಯೋಜನವಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸಂಪೂರ್ಣ ಲಾಕ್‌ಡೌನ್‌ ಸೂಕ್ತ ಎಂದಿದ್ದಾರೆ. ಹೀಗಾಗಿ ಸರಕಾರ ಸಂಪೂರ್ಣ ಲಾಕ್‌ಡೌನ್‌ ಮಾಡಲು ಚಿಂತನೆ ನಡೆಸುತ್ತಿದೆ.

ಸುಧಾಕರ್‌ ಹೇಳಿದ್ದೇನು? :

ಪೂರ್ಣ ಲಾಕ್‌ಡೌನ್‌ ಮಾಡಿದ್ದರಿಂದಲೇ ಮುಂಬಯಿಯಲ್ಲಿ ಕೋವಿಡ್ನಿಯಂತ್ರಣಕ್ಕೆ ಬಂದಿದೆ. ಕೋವಿಡ್ ಸರಪಣಿ ಕತ್ತರಿಸಲು ಕನಿಷ್ಠ 14 ದಿನಗಳಾದರೂ ಬೇಕು. ಈಗಿರುವ ವ್ಯವಸ್ಥೆ ಮೇ 12ಕ್ಕೆ ಮುಗಿಯಲಿದ್ದು, ಬಳಿಕ ಲಾಕ್‌ಡೌನ್‌ ಜಾರಿಗೊಳಿಸುವ ಬಗ್ಗೆ ಸಿಎಂ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸುಧಾಕರ್‌ ಹೇಳಿದ್ದಾರೆ.

ಕೋವಿಡ್ ಪ್ರಸರಣವನ್ನು ತಡೆಯಲು ಸರಕಾರ ಆದೇಶ ಹೊರಡಿಸಿದರೆ ಸಾಲದು. ಜನರ ಸಹಕಾರ ಮುಖ್ಯ. ಅದು ನಿರೀಕ್ಷಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದೂ ಸುಧಾಕರ್‌ ಹೇಳಿದ್ದಾರೆ.

ಲಾಕ್‌ಡೌನ್‌ ಮಾಡಲಿ :

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದು, ಜೀವ ಉಳಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಇಂದು ಸಿಎಂ ಸಭೆ :

ಶುಕ್ರವಾರ ಬೆಂಗಳೂರು ವಲಯ ಉಸ್ತುವಾರಿ ಸಚಿವರ ಜತೆ ಸಭೆ ನಡೆಸಲು ಸಿಎಂ ಮುಂದಾಗಿದ್ದಾರೆ.  ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.

ಇನ್ನೆರಡು ವಾರ ಬಂದ್‌ ಮಾಡಿ :

ರಾಜ್ಯದಲ್ಲಿ ಮೇ ಮಧ್ಯದ ವೇಳೆಗೆ ಸೋಂಕು ಸಂಖ್ಯೆ 5 ಲಕ್ಷದ ಸನಿಹಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಹೇಳಿದೆ. ಮುಂದಿನ ಎರಡು ವಾರ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಬೇಕು ಎಂದೂ ಸಲಹೆ ನೀಡಿದೆ.

ಕೇರಳ, ಮಧ್ಯಪ್ರದೇಶ ಲಾಕ್‌ :

ಪ್ರಕರಣ ಹೆಚ್ಚಳವಾಗುತ್ತಿರುವ ನಡುವೆ ಕೇರಳ ಮತ್ತು ಮಧ್ಯಪ್ರದೇಶ ಲಾಕ್‌ಡೌನ್‌ ಘೋಷಿಸಿವೆ.

ಪರೀಕ್ಷೆ ವೇಳೆ ಮಾತ್ರೆ :

ಕೋವಿಡ್ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಪರೀಕ್ಷೆಗೆ ಹಾಜರಾದ ಸಂರ್ಭದಲ್ಲಿ ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ತಜ್ಞರ ಸಮಿತಿ ಶಿಫಾರಸಿನ ಮೇರೆಗೆ ಸೋಂಕು ಪರೀಕ್ಷೆಗೆ ಬಂದವರ ಪೈಕಿ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಸೋಂಕುಪೀಡಿತರ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ಥಳದಲ್ಲಿಯೇ ಮಾತ್ರೆ ನೀಡಬೇಕು. ಅನಂತರ ಸೋಂಕು ದೃಢಪಟ್ಟರೆ ಸರಕಾರದ ಚಿಕಿತ್ಸಾ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಸೂಚಿಸಿದೆ. ಈ ಬಗ್ಗೆ ಪ್ರಯೋಗಾಲಯಗಳು ವೈದ್ಯರ ಸಲಹೆ ಸ್ವೀಕರಿಸಬೇಕು ಎಂದಿದೆ.

ಮಾತ್ರೆಗಳ ವಿವರ: (ಮೂರು ದಿನ)

ಇವೆರ್ಮೆಕ್ಟಿನ್‌ 12 ಎಂಜಿ ದಿನಕ್ಕೆ ಒಂದು

(ಖಾಲಿ ಹೊಟ್ಟೆಯಲ್ಲಿ )

ವಿಟಿಮಿನ್‌ ಸಿ 500 ಎಂಜಿ – ದಿನಕ್ಕೆ ಒಂದು

ಜಿಂಕ್‌ 50 ಎಂಜಿ – ದಿನಕ್ಕೆ ಒಂದು

ರಾಜ್ಯದಲ್ಲಿ  ಬಿಗಿ ನಿರ್ಬಂಧಗಳ ಆವಶ್ಯಕತೆ ಇದೆ. ಕಾಮಗಾರಿ ಚಟುವಟಿಕೆಗಳಿಗೆ ಬಿಟ್ಟು ಮಿಕ್ಕ ಎಲ್ಲವನ್ನೂ ಬಂದ್‌ ಮಾಡಿದರೆ ಉತ್ತಮ. ಡಾ| ಸಿ.ಎನ್‌. ಮಂಜುನಾಥ್‌ ತಜ್ಞರ ಸಲಹಾ ಸಮಿತಿ ಸದಸ್ಯ

ರಾಜ್ಯದಲ್ಲಿ  ಕೊರೊನಾ ಸೋಂಕಿನ ತೀವ್ರತೆ, ಆಮ್ಲಜನಕ ಕೊರತೆ, ಹಾಸಿಗೆ ಸಮಸ್ಯೆ ನೋಡಿದರೆ ಲಾಕ್‌ಡೌನ್‌ ಅಗತ್ಯವಿದೆ. ವೈದ್ಯಕೀಯ ಸೌಲಭ್ಯಗಳನ್ನು ಉತ್ತಮ ಪಡಿಸಿಕೊಳ್ಳಲು ಮತ್ತು ಸೋಂಕಿನ ತೀವ್ರತೆ ಇಳಿಸಲು ಅದರಿಂದ ಸಹಾಯವಾಗಲಿದೆ.ಡಾ| ನಾಗೇಂದ್ರ ಸ್ವಾಮಿಮುಖ್ಯ ಸಂಚಾಲಕರು, ಆಸ್ಪತ್ರೆ ಸಮೂಹ ಸಂಸ್ಥೆ ಒಕ್ಕೂಟ, ಕರ್ನಾಟಕ(ಎಫ್ಎಚ್‌ಎ)

ಲಾಕ್‌ಡೌನ್‌ ವಿಚಾರದಲ್ಲಿ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸರಕಾರವು ತಜ್ಞರ ಸಲಹೆ ಪಾಲಿಸಲಿ. ನಾವು ಅದರ ಪರ ಅಥವಾ ವಿರೋಧ ಎಂದಿಲ್ಲ. ಕೋವಿಡ್ ನಿಯಂತ್ರಣ ಮುಖ್ಯ.      – ಸಿದ್ದರಾಮಯ್ಯ, ವಿಪಕ್ಷ ನಾಯಕ

ಟಾಪ್ ನ್ಯೂಸ್

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.