ಹೂವು-ಹಣ್ಣು ಬೆಳೆಗಾರರಿಗೆ ಸಿಕ್ಕೀತೆ ಪರಿಹಾರ?

Team Udayavani, May 15, 2021, 4:21 PM IST

ಹೂವು-ಹಣ್ಣು ಬೆಳೆಗಾರರಿಗೆ ಸಿಕ್ಕೀತೆ ಪರಿಹಾರ?

ದಾವಣಗೆರೆ: ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಜನತಾ ಕರ್ಫ್ಯೂ ವೇಳೆ ಬೆಳೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ ಹಣ್ಣು, ಹೂ ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿತ್ತು. ಈ ವರ್ಷ ರಾಜ್ಯ ಸರ್ಕಾರ ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಬೆಳೆಗಾರರು ಮತ್ತೆ ಸರ್ಕಾರ ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಕಳೆದ ವರ್ಷದ ಜನತಾ ಕರ್ಫ್ಯೂ ವೇಳೆ ಹಣ್ಣು ಮತ್ತು ತರಕಾರಿ ಹಾನಿಗೆ ಹೆಕ್ಕೇರ್‌ಗೆ 15 ಸಾವಿರ ರೂ. ಹಾಗೂ ಹೂವು ಹಾನಿಗೆ ಹೆಕ್ಕೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ 5836 ರೈತರಿಗೆ ಸಂಬಂಧಿಸಿ 3681 ಹೆಕ್ಕೇರ್‌ ಪ್ರದೇಶದ 5.61 ಕೋಟಿ ರೂ. ಗಳಷ್ಟು ಹಣ್ಣು, ಹೂವು ಮತ್ತು ತರಕಾರಿ ಬೆಳೆ ಹಾನಿಯಾಗಿತ್ತು. ಸರ್ಕಾರದಿಂದ 5.28 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದ್ದು, ಇದರಲ್ಲಿ 4.15 ಕೋಟಿ ರೂ. ಪರಿಹಾರವನ್ನು ಹಂತ ಹಂತವಾಗಿ 4436 ರೈತರಿಗೆ ವಿತರಣೆ ಮಾಡಲಾಗಿದೆ.

ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ನೀಡಿದ ಪರಿಹಾರ ಜಗಳೂರು ತಾಲೂಕಿನ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ದೊರಕಿತ್ತು. ಜಗಳೂರು ತಾಲೂಕಿನ 2116 ರೈತರಿಗೆ ಸಂಬಂಧಿಸಿದ 1443 ಹೆಕ್ಕೇರ್‌ ಬೆಳೆ ಹಾನಿಗಾಗಿ 2.17 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಉಳಿದಂತೆ ದಾವಣಗೆರೆ ತಾಲೂಕಿನ 711 ರೈತರಿಗೆ 64 ಲಕ್ಷ ರೂ., ಚನ್ನಗಿರಿ ತಾಲೂಕಿನ 605 ರೈತರಿಗೆ 49 ಲಕ್ಷ ರೂ., ಹೊನ್ನಾಳಿ ತಾಲೂಕಿನ 758 ರೈತರಿಗೆ 65 ಲಕ್ಷ ರೂ., ಹರಿಹರ ತಾಲೂಕಿನ 246 ರೈತರಿಗೆ 18.82 ಲಕ್ಷ ರೂ. ಪರಿಹಾರ ಮೊತ್ತ ಪಾವತಿಸಲಾಗಿದೆ.

ಹಣ್ಣು ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 2023 ರೈತರಿಗೆ ಸಂಬಂಧಿಸಿದಂತೆ 1280 ಹೆಕ್ಕೇರ್‌ ಪ್ರದೇಶದ ಹಣ್ಣು ಹಾನಿಯಾಗಿತ್ತು. ಇದಕ್ಕಾಗಿ 1.29 ಕೋಟಿ ರೂ. ಪರಿಹಾರ ಬಿಡುಗಡೆಯಾಗಿದೆ. ದಾವಣಗೆರೆ ತಾಲೂಕಿನ 345 ರೈತರಿಗೆ 29 ಲಕ್ಷ ರೂ., ಚನ್ನಗಿರಿ ತಾಲೂಕಿನ 567 ರೈತರಿಗೆ 46 ಲಕ್ಷ ರೂ., ಹೊನ್ನಾಳಿ ತಾಲೂಕಿನ 310 ರೈತರಿಗೆ 30ಲಕ್ಷ ರೂ., ಹರಿಹರ ತಾಲೂಕಿನ 124 ರೈತರಿಗೆ 10ಲಕ್ಷ ರೂ., ಜಗಳೂರು ತಾಲೂಕಿನ 111 ರೈತರಿಗೆ 12ಲಕ್ಷ ರೂ. ಪರಿಹಾರ ಪಾವತಿಸಲಾಗಿದೆ.

ತರಕಾರಿ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 3536 ರೈತರಿಗೆ ಸಂಬಂಧಿಸಿದಂತೆ 2308 ಹೆಕ್ಕೇರ್‌ ಪ್ರದೇಶದ ತರಕಾರಿ ಹಾನಿಯಾಗಿತ್ತು. ಇದಕ್ಕಾಗಿ 3.78 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ 2.65 ಕೋಟಿ ರೂ. ಪರಿಹಾರ ರೈತರಿಗೆ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 332ರೈತರಿಗೆ 30 ಲಕ್ಷ ರೂ., ಚನ್ನಗಿರಿ ತಾಲೂಕಿನ 29 ರೈತರಿಗೆ, 2.51 ಲಕ್ಷ ರೂ., ಹೊನ್ನಾಳಿ ತಾಲೂಕಿನ 339 ರೈತರಿಗೆ 25 ಲಕ್ಷ ರೂ., ಹರಿಹರ ತಾಲೂಕಿನ 45 ರೈತರಿಗೆ 3.5 ಲಕ್ಷ ರೂ., ಜಗಳೂರು ತಾಲೂಕಿನ 1987 ರೈತರಿಗೆ 2.02 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 280 ರೈತರಿಗೆ ಪರಿಹಾರ ವಿತರಿಸುವುದು ಬಾಕಿ ಇದೆ.

ಪುಷ್ಪ ಪರಿಹಾರ: ಜನತಾ ಕರ್ಫ್ಯೂ ಕಾರಣದಿಂದ ಜಿಲ್ಲೆಯಲ್ಲಿ ಕಳೆದ ವರ್ಷ 277 ರೈತರಿಗೆ ಸಂಬಂಧಿಸಿ 92.78 ಹೆಕ್ಕೇರ್‌ ಪ್ರದೇಶದ ಹೂವು ಹಾನಿಯಾಗಿತ್ತು. ಇದಕ್ಕಾಗಿ 20.86 ಲಕ್ಷ ರೂ. ಬಿಡುಗಡೆಯಾಗಿದೆ. ಎಲ್ಲ ರೈತರಿಗೆ ಪರಿಹಾರ ಪಾವತಿಸಲಾಗಿದೆ. ದಾವಣಗೆರೆ ತಾಲೂಕಿನ 34 ರೈತರಿಗೆ 3.92 ಲಕ್ಷ ರೂ., ಚನ್ನಗಿರಿ ತಾಲೂಕಿನ 9 ರೈತರಿಗೆ 78,224 ರೂ., ಹೊನ್ನಾಳಿ ತಾಲೂಕಿನ 109 ರೈತರಿಗೆ 10ಲಕ್ಷ ರೂ., ಹರಿಹರ ತಾಲೂಕಿನ 77 ರೈತರಿಗೆ 4.5 ಲಕ್ಷ ರೂ., ಜಗಳೂರು ತಾಲೂಕಿನ 18 ರೈತರಿಗೆ 6.17 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹಣ್ಣು, ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರ ನೀಡಿದ ಪರಿಹಾರಧನ ಕನಿಷ್ಠವಾಗಿದ್ದರೂ ಇಷ್ಟಾದರೂ ರೈತರಿಗೆ ತಲುಪಿತು ಎಂಬ ಸಮಾಧಾನ ರೈತರದ್ದಾಗಿದೆ. ಈ ವರ್ಷವೂ ಸರ್ಕಾರ ಒಂದಿಷ್ಟು ಪರಿಹಾರ ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕರ್ಫ್ಯೂ ವೇಳೆ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಅವಧಿ ವಿಸ್ತರಣೆ ಜತೆಗೆ ಸಾಗಾಟಕ್ಕೆ ಅಡ್ಡಿ ಇಲ್ಲದಿದ್ದರೂ ಕರ್ಫ್ಯೂ ಕಾರಣದಿಂದ ಬೇಡಿಕೆ ಬಹಳಷ್ಟು ಕುಸಿದಿದೆ. ಇದರಿಂದಾಗಿ ಉತ್ಪನ್ನಗಳ ಬೆಲೆಯೂ ಕುಸಿದಿದೆ.

ಕೆಲವೊಂದು ಬೆಳೆಗಳ ಬೆಲೆ ಸಾಗಾಟ ಮಾಡುವ ವೆಚ್ಚವೂ ಭರಿಸದಷ್ಟು ಇಳಿದಿದ್ದು ಬೆಳೆ ಜಮೀನಿನಲ್ಲಿಯೇ ಕೊಳೆಯುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ವರ್ಷವೂ ಪರಿಹಾರ ಘೋಷಿಸುವುದು ಸೂಕ್ತ. ಇ. ಶ್ರೀನಿವಾಸ್‌, ರೈತ ಮುಖಂಡ

ಹೂವು, ಹಣ್ಣು, ತರಕಾರಿ ಬೆಳೆ ಪರಿಹಾರವಾಗಿ 4.15 ಕೋಟಿ ರೂ. ಪರಿಹಾರವನ್ನು 4436 ರೈತರಿಗೆ ವಿತರಣೆ ಮಾಡಲಾಗಿದೆ. ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಮಾಡದ, ಹಿಸ್ಸೆ ಮಾಲೀಕರ ಸಮಸ್ಯೆ ಇರುವ ಕೆಲವು ರೈತರಿಗೆ ಪಾವತಿಯಾಗುವುದು ಬಾಕಿ ಇದೆ. ಈ ವರ್ಷ ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆಯಾದರೂ ಕೃಷಿ, ತೋಟಗಾರಿಕೆ ಉತ್ಪನ್ನ ಮಾರಾಟಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲ. ಲಕ್ಷ್ಮೀಕಾಂತ್‌ ಬೊಮ್ಮನ್ನಾರ್‌, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.