ಭಾರತ ಮೂಲದ ಶುಶ್ರೂಷಕನಿಗೆ 20 ವರ್ಷ ಕಾರಾಗೃಹ ವಾಸ!
Team Udayavani, May 30, 2021, 10:57 PM IST
ಹೂಸ್ಟನ್: ಸುಮಾರು 376 ಕೋಟಿ ರೂ. ಮೌಲ್ಯದ ಹಗರಣವೊಂದರಲ್ಲಿ ನೇರವಾಗಿ ಭಾಗಿಯಾದ ಆರೋಪದ ಮೇರೆಗೆ ಅಮೆರಿಕದಲ್ಲಿ ತನ್ನದೇ ಕ್ಲಿನಿಕ್ ತೆರೆದು ಸೇವೆ ಸಲ್ಲಿಸುತ್ತಿದ್ದ ತ್ರಿವಿಕ್ರಮ್ ರೆಡ್ಡಿ (39) ಎಂಬ ಭಾರತೀಯ ಶುಶ್ರೂಷಕನಿಗೆ ಅಮೆರಿಕದ ಉತ್ತರ ಟೆಕ್ಸಾಸ್ನ ನ್ಯಾಯಾಲಯ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.
ಅಲ್ಲದೆ, ಹಗರಣದಲ್ಲಿ ಕೊಳ್ಳೆ ಹೊಡೆಯಲಾಗಿರುವ 376 ಕೋಟಿ ರೂ.ಗಳನ್ನು ಹಿಂದಿರುಗಿಸುವಂತೆಯೂ ರೆಡ್ಡಿಗೆ ನ್ಯಾಯಾಧೀಶರಾದ ಪ್ರೇರಕ್ ಶಾ ಸೂಚಿಸಿದ್ದಾರೆ.
ಆರೋಗ್ಯ ವಿಮೆಗಳನ್ನು ಮಾರಾಟ ಮಾಡುವ ಮೆಡಿಕೇರ್ ಎಂಬ ನಕಲಿ ವ್ಯೂಹವೊಂದನ್ನು ಸೃಷ್ಟಿಸಿಕೊಂಡಿದ್ದ ಈತ ಆ ಮೂಲಕ ನೂರಾರು ಆರೋಗ್ಯ ವಿಮಾ ಕಂಪೆನಿಗಳಿಗೆ ಮೋಸ ಮಾಡಿರುವ ಆರೋಪವಿದೆ.
ಹಲವಾರು ವರ್ಷಗಳಿಂದ, ಟೆಕ್ಸಾಸ್ ಮೂಲದ ಬ್ಲೂ ಕ್ರಾಸ್ ಬ್ಲೂ ಶೀಲ್ಡ್ ಸಂಸ್ಥೆ ಸೇರಿದಂತೆ ಅಮೆರಿಕದಲ್ಲಿ ಆರೋಗ್ಯ ವಿಮೆ ಸೇವೆ ನೀಡುವ ಮೆಡಿಕೇರ್, ಏಟ್ನಾ, ಯುನೈಟೆಡ್ ಹೆಲ್ತ್ಕೇರ್, ಹ್ಯುಮಾನಾ ಹಾಗೂ ಸಿಗ್ನಾ ಎಂಬ ಕಂಪೆನಿಗಳಿಗೆ ಮೋಸ ಮಾಡಿದ್ದ ಎನ್ನಲಾಗಿದೆ. 2019ರಲ್ಲಿ ಈತನ ಕುಕೃತ್ಯ ಬಹಿರಂಗವಾದ ಅನಂತರ ಈತನ ಕ್ಲಿನಿಕ್ ಮುಚ್ಚಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.