ನಾವು ನೆಟ್ಟು ಬೆಳೆಸುವ ಒಂದೊಂದು ಗಿಡ, ಒಂದೊಂದು ಆಕ್ಸಿಜನ್ ಸಿಲಿಂಡರ್ : ಎ. ಪಿ ಭಟ್

ವಿಶ್ವ ಪರಿಸರ ದಿನಾಚರಣೆಯ ವಿಶೇಷ ಲೇಖನ

ಶ್ರೀರಾಜ್ ವಕ್ವಾಡಿ, Jun 5, 2021, 8:30 AM IST

4-7

ಇಂದು ವಿಶ್ವ ಪರಿಸರ ದಿನ.  ಬರಡಾದ ಭೂಮಿಯಲ್ಲಿ ಪರಿಸರ ದಿನಾಚರಣೆಯನ್ನು ಮಾಡುವ ಕಾಲದಲ್ಲಿದ್ದೇವೆ ನಾವು. ‘ಪರಿಸರವನ್ನು ರಕ್ಷಣೆ’ ಮಾಡುವ ಸಮಯ ಈಗ ಬಂದೊದಗಿದೆ.

ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ನಾಶ ಪರಿಸರದ ಮೂಲಭೂತ ಅಂಶಗಳ ಅವನತಿ ಅಥವಾ ನಷ್ಟವೇ ಮನುಷ್ಯನ ಅವನತಿಗೆ ಕಾರಣವಾಗುತ್ತಿದೆ. ಪರಿಸರ ಕ್ಷೀಣತೆಗೆ ಮುಖ್ಯ ಕಾರಣವೆಂದರೆ ಮಾನವ ಚಟುವಟಿಕೆಗಳು, ವಿಶೇಷವಾಗಿ ಅಭಿವೃದ್ಧಿ ಮಾದರಿಗಳು ಮತ್ತು ಪರಿಸರದ ಮೇಲೆ ಅವುಗಳ ಪರಿಣಾಮ.

ಸಸ್ಯವರ್ಗದ ಪದರದ ನಾಶ, ಮಳೆಯ ಬದಲಾವಣೆ ಮತ್ತು ಕೆಟ್ಟ ಕೃಷಿ ಪದ್ಧತಿಗಳಿಂದ ಮಣ್ಣುಗಳ ಸವೆತದಿಂದಾಗಿ ವಾರ್ಷಿಕವಾಗಿ ಸಾವಿರಾರು ಹೆಕ್ಟೇರ್ ಕೃಷಿ ಮಣ್ಣು ನಷ್ಟವಾಗುತ್ತದೆ. ಮತ್ತೊಂದೆಡೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ.

ಹೌದು, ಈ ಆತಂಕದ ನಡುವೆಯಲ್ಲಿಯೇ ನಾವು ಮತ್ತೊಂದು ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಇದ್ದೇವೆ. ಈ ಹೊತ್ತಿಗೆ ಪರಸರವಾದಿ  ಡಾ. ಎ ಪಿ ಭಟ್ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

(ಮರಗಿಡಗಳಿಂದ ಕೂಡಿ ಹಸಿರನ್ನು ಹೊದ್ದು ನಿಂತ ಪಶ್ಚಿಮ ಘಟ್ಟದ ಒಂದು ವಿಹಂಗಮ ನೋಟ)

ಸಸ್ಯ ಸಂಕುಲಗಳ ರಕ್ಷಣೆಯೇ ನಮಗೆ ಶ್ರೀರಕ್ಷೆ ಹಾಗಾಗಿ ಸಸ್ಯಗಳನ್ನು ರಕ್ಷಣೆ ಮಾಡುವ ಅಗತ್ಯ ಹಾಗೂ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮನುಷ್ಯನೊಬ್ಬ ಸ್ವಾಸ್ಥ್ಯ ಬದುಕನ್ನು ಕಾಣಬೇಕಾದರೇ ಅವನ ಸುತ್ತ ಮುತ್ತ ಸರಿ ಸುಮಾರು  48 ರಿಂದ 50 ಮರಗಳಿರಬೇಕು. ಆಗ ಮಾತ್ರ ಪರಿಸರವೂ ಸಮೃದ್ಧಿಯಾಗಿರುತ್ತದೆ. ಆರೋಗ್ಯವೂ ಸಮೃದ್ಧಿಯಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಒಬ್ಬ ಮನುಷ್ಯ ವರ್ಷವೊಂದರಲ್ಲಿ 4800 ಕೆ.ಜಿ ಕಾರ್ಬನ್ ಡೈ ಆಕ್ಸೈಡ್ ನನ್ನು ಹೊರ ಹಾಕುತ್ತಾನೆ. 50 ವರ್ಷವಾದಂತಹ ಮರವೊಂದು 100 ರಿಂದ 200 ಕೆ. ಜಿ ಕಾರ್ಬನ್ ಡೈ ಆಕ್ಸೈಡ್ ನನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ 48 ರಿಂದ 50 ಮರಗಳಿದ್ದರೇ ಆರೋಗ್ಯವಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ.

ಮನುಷ್ಯ ಆರೋಗ್ಯಕರವಾಗಿ ಇರಬೇಕೆಂದರೇ, ಶೇಕಡಾ 32 ರಷ್ಟು ಅರಣ್ಯ ಪ್ರದೇಶ ಇರಬೇಕು.  ಭಾರತದಲ್ಲಿ ಈಗ ಕೇಂದ್ರ ಸರ್ಕಾರ ಹೇಳುವ ಪ್ರಕಾರ ಶೇಕಡಾ 24 ರಷ್ಟು ಅರಣ್ಯ ಪ್ರದೇಶ ಇದೆ. ಇದು ಮಾನವನ ಬದುಕಿಗೆ ಸಾಕೇ..? ಎನ್ನುವ  ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಅರಣ್ಯಗಳನ್ನು ಉಳಿಸುವ ಉದ್ದೇಶಗಳಿಂದ  ನಾವೆಲ್ಲರೂ ಹೊಸ ಚಿಂತನೆ ಮಾಡಬೇಕಾಗಿದೆ. ನಾವೆಲ್ಲರೂ ಪರಿಸರವನ್ನು ರಕ್ಷಣೆ ಮಾಡುವ ಸಂಕಲ್ಪಕ್ಕೆ ಮುಂದಾಗಬೇಕಿದೆ. ಪಶ್ಚಿಮ ಘಟ್ಟಗಳು ಬರಡಾಗುತ್ತಿವೆ. ಅದನ್ನು ರಕ್ಷಿಸುವ ಚಿಂತನೆ ನಾವು ಮಾಡಬೇಕಿದೆ. ನಮ್ಮ ಮನೆ, ನಮ್ಮ ಶಾಲೆ, ನಮ್ಮ ದೇವಸ್ಥಾನ, ನಮ್ಮ ಮಸೀದಿ, ನಮ್ಮ ಚರ್ಚು … ಹೀಗೆ ಎಲ್ಲರೂ ನಮ್ಮದು ಎಂದು ಭಾವಿಸಿಕೊಂಡು ಮರಗಳನ್ನು ರಕ್ಷಿಸುವತ್ತ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಹಸಿರು ವಲಯಗಳನ್ನು ಸೃಷ್ಟಿಸಿಕೊಳ್ಳಬೇಕಿದೆ.

ನಮ್ಮ ಊರಿನಲ್ಲಿ ನಾವು ನೆಟ್ಟು ಬೆಳೆಸುವ ಒಂದೊಂದು ಗಿಡ, ಒಂದೊಂದು ಆಕ್ಸಿಜನ್ ಸಿಲಿಂಡರ್ ನಂತೆ. ಹಾಗಾಗಿ ಮರಗಳನ್ನು ರಕ್ಷಿಸುವ ಕೆಲಸಕ್ಕೆ ನಾವೆಲ್ಲರೂ ಕೈ ಜೋಡಿಬೇಕಿದೆ. ಪರಿಸರ ನಾಶದಿಂದ ಮನುಷ್ಯನ ಮೇಲೆ ಆಗುತ್ತಿರುವ ದುಷ್ಪರಿಣಾಮ ತಪ್ಪಿಸಲು ಹಸರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-sirsi

Sirsi: ಯಾರನ್ನೂ ಯಾವತ್ತೂ ಪ್ಲೀಸ್ ಮಾಡಬೇಡಿ, ಪ್ರೀತಿ ಮಾಡಿ ಸಾಕು: ಹುಕ್ಕೇರಿ ಶ್ರೀ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Arrested: ಯೂಟ್ಯೂಬ್‌ ನೋಡಿ ದ್ವಿಚಕ್ರ ವಾಹನ ಕದ್ದಿದ್ದ ಯುವಕ ಬಂಧನ  

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.