ಮಳೆರಾಯನ ಎರಡು ಮುಖಗಳು

Team Udayavani, Jun 6, 2021, 9:00 AM IST

ಮಳೆರಾಯನ ಎರಡು ಮುಖಗಳು

ಧರೆಗಿಳಿಯಲು ಮುತ್ತಿನ ಮಣಿಗಳಂತೆ ತಯಾರಾದ ಮಳೆ ಹನಿಗಳನ್ನು ತಡೆಯಲು ಸೂರ್ಯನು ಪ್ರಯತ್ನಪಟ್ಟಂತಿತ್ತು ಆ ವಾತಾವರಣ. ಬೆಚ್ಚಗಿನ ಗೂಡಲ್ಲಿ ನೆಚ್ಚಿನ ಊಟ ಸವಿಯಲು ಗೂಡು ಸೇರ ಹೊರಟ ಹಕ್ಕಿಗಳು, ಸಣ್ಣ ಸಣ್ಣ ಇರುವೆಗಳು ಸಾಲುಗಟ್ಟಿ ಶರವೇಗದಲ್ಲಿ ತನ್ನ ಮನೆಯನ್ನು ಸೇರುವ ತವಕ, ಆಗಸ ಒಡೆದು ಭೂಮಿಯ ತಂಪಾಗಿಸುವ ಸೂಚನೆಯನ್ನು ಮಿಂಚು-ಗುಡುಗಿನ ಒಡನಾಟದ ತಾಳಮೇಳಗಳು ಬಡಿದಾಗಲೇ ಕಾಲೇಜಿನ ಬೆಂಚು ಬಿಸಿ ಮಾಡುತ್ತಿದ್ದ ನಾನು ಕೂಡ ನನ್ನ ಮನೆಯೆಡೆಗೆ ಪಾದ ಬೆಳೆಸಲು ತಯಾರಾದೆ.

ಹೆಗಲಿಗೆ ಬ್ಯಾಗ್‌ ಸಿಕ್ಕಿಸಿಕೊಂಡು ಕಪ್ಪು ಬಿಳುಪು ಚುಕ್ಕಿ ಚಿತ್ತಾರದ ಕೊಡೆಯನ್ನು ಹಿಡಿದು ಮೈದಾನಕ್ಕಿಳಿದಾಗ ಶಾಂತರೂಪದ ಮಳೆ ಮೈ ಮನಸ್ಸು ತಂಪಾಗಿಸಲು ಧರೆಗಿಳಿದೇ ಬಿಟ್ಟಿತು. ಕೊಡೆಯಂಚಿನಲಿ ಸುರಿಯುತ್ತಿದ್ದ ಮಳೆ ಹನಿಯನ್ನು ಕೈಯಲ್ಲಿ ಸೆರೆಹಿಡಿಯುತ್ತಾ ಕಣ್ಣಿನ ರೆಪ್ಪೆಗಳಿಗೆ ಅಲಂಕಾರವಾಗಿ ಮಾಡುತ್ತಾ ನೆಲದ ಕೇಸರಿ ನೀರನ್ನು ಚಪ್ಪಲಿ ಮಹಾಶಯನ ಸಹಾಯದಿಂದ ಸಮವಸ್ತ್ರದಲ್ಲಿ ಚಿತ್ತಾರ ಬಿಡಿಸುತ್ತಾ ಮುಂದೆ ಮುಂದೆ ಸಾಗುತ್ತಿದ್ದಂತೆ….. ಮಳೆ ಕೋಪಗೊಂಡು ಸುರಿದಂತೆ ರಭಸದಿಂದ ಸುರಿಯಲಾರಂಭಿಸಿತು.

ನೋಡ ನೋಡುತ್ತಿದ್ದಂತೆ ವಾಯು ಮಹಾರಾಜನ ಸಹಾಯ ಪಡೆದು ನನ್ನ ಕೊಡೆಯನ್ನು ಬಾವಲಿಯನ್ನಾಗಿಸುವ ಪ್ರಯತ್ನ ಮಾಡಿತು. ಮೈ ನಡುಗಿಸಲು ಚಳಿ ಮಹಾರಾಜನ ಸಹಾಯ ಪಡೆದು ನೀರೆರಚಲು ಪ್ರಾರಂಭ ಮಾಡಿತು.

ಮುಂದೆ ಸಾಗುತಿದ್ದಂತೆ ಎಲ್ಲ ಕಡೆ ಕೊಳಕು ಕೆಂಪು ನೀರನ್ನು ಹರಿಸಿ ಮುಂದೆ ಹೆಜ್ಜೆ ಇಡದಂತೆ ಕಣ್ಣು ಕತ್ತಲಾಗಿಸಿತು. ರಭಸದಲ್ಲಿ ಸಾಗುತ್ತಿದ್ದ ನೀರಿನ ಜತೆ ನಾನೂ ಸಾಗಿ  ಮನೆ ತಲುಪಬೇಕು ಎಂದು ಹೋಗುತಿದ್ದಾಗ,  ಮಾರುದ್ದ ಬೆಳೆದಿದ್ದ ಮರ ಮಕಾಡೆ ಮಲಗಿಬಿಟ್ಟಿತ್ತು. ಅಲ್ಲಿಗೆ… ಮನೆಗೆ ಹೋಗುವಂತೆಯೂ ಇಲ್ಲ ಮಳೆ ನಿಲ್ಲಿಸುವಂತೆಯೂ ಇಲ್ಲ. ಮಳೆರಾಯನ ಎರಡು ಮುಖಗಳನ್ನು ಒಟ್ಟಿಗೆ ಕಂಡಂತಹ ಆ ದಿನ ಮರ ಸರಿಸಿ ಮನೆ ಸೇರುವ ತನಕ ಯೋಚಿಸುವಂತೆ ಮಾಡಿತು.

-  ಸಮೀಕ್ಷಾ ಎಸ್‌.ಡಿ.ಎಂ. ಕಾಲೇಜು ಉಜಿರೆ

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.