ಜುಲೈ 1 ರಿಂದ ಏನೆಲ್ಲಾ ಬದಲಾವಣೆ..? : ಇಲ್ಲದೆ ಮಾಹಿತಿ


Team Udayavani, Jun 28, 2021, 5:49 PM IST

these-changes-are-going-to-happen-from-july-first-know-the-detail

ನವ ದೆಹಲಿ : ಇನ್ನು ಎರಡು ಮೂರು ದಿನಗಳಲ್ಲಿ ಅಂದರೇ, ಜುಲ್ 1 ರಿಂದ ಕೆಲವು ವಿಚಾರಗಳಲ್ಲಿ ಬದಲಾವಣೆಗಳು ಆಗಲಿವೆ. ಈ ಬಗ್ಗೆ ನಿಮಗೆ ಮೊದಲೇ ಮಾಹಿತಿ ಇದ್ದರೂ, ಅದರ ವಿಸ್ತೃತ ಮಾಹಿತ ಇಲ್ಲಿದೆ.

ಜುಲೈ 1 ರಿಂದ ಈ ಕೆಳಗಿನ ಬದಲಾವಣೆಯ ಕಾರಣದಿಂದಾಗಿ ನಮ್ಮ ಜೇಬಿಗೆ ಕತ್ತರಿ ಬೇಳು ಸಾಧ‍್ಯತೆ ಇದೆ. ಜೀವನ ಶೈಲಿ ದುಬಾರಿ ಆಗಲಿದೆ ಎನ್ನುವುದನ್ನು ಈ ಬದಲಾವಣೆ ತೋರಿಸುತ್ತದೆ.  ಪ್ರಮುಖ 5 ಬದಲಾವಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಎರಡೂ ಲಸಿಕೆ ಪಡೆದಂತಹ ಪ್ರವಾಸಿಗರಿಗೆ ಮಾತ್ರ ಗೋವಾ ಪ್ರವೇಶ : ಪ್ರಮೋದ ಸಾವಂತ್

ಎಟಿಎಂನಿಂದ ಹಣ ವಿತ್ ಡ್ರಾ ದುಬಾರಿ : ಎಸ್‌ ಬಿ ಐ

ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಆಗಿ ಗುರುತಿಸಿಕೊಂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹಲವು ಪ್ರಮುಖ ನಿಯಮಗಳಲ್ಲಿ ಜುಲೈ 1 ರಿಂದ ಬದಲಾವಣೆ ಮಾಡುತ್ತಿದೆ. ಅವುಗಳಲ್ಲಿ ಮುಖ್ಯವಾದದ್ದೇನೆಂದರೇ, ಜುಲೈ ಒಂದರಿಂದ ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡುವುದು ದುಬಾರಿಯಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂ ಮತ್ತು ಬ್ಯಾಂಕ್ ಸೇವೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಎಸ್‌ ಬಿ ಐ ಗ್ರಾಹಕರು ನಾಲ್ಕು ಬಾರಿಗಿಂತ ಹೆಚ್ಚು ಬ್ಯಾಂಕ್ ಮತ್ತು ಎಟಿಎಂನಿಂದ ಹಣವನ್ನು ಪಡೆಯುವುದಾದರೆ, ಪ್ರತಿ ವಹಿವಾಟಿನ ಮೇಲೆ 15 ರೂ. ಮತ್ತು ಜಿಎಸ್ ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಎಸ್ ಬಿ ಐ ಮಾಹಿತಿ ನೀಡಿದೆ.

ಎಸ್ ಬಿ ಐ ಚೆಕ್ ಬುಕ್ ಇನ್ಮುಂದೆ ದುಬಾರಿ

ಎಸ್ ಬಿ ಐ ಜುಲೈ 1 ರಿಂದ ಬದಲಾವಣೆ ಮಾಡುತ್ತಿರುವ ಪ್ರಮುಖ ಬದಲಾವಣೆಯಲ್ಲಿ ಚೆಕ್ ಬುಕ್ ಬದಲಾವಣೆಯು ಕೂಡ ಒಂದು 10 ಚೆಕ್‌ ಗಳಿಗೆ  ಬಿ ಎಸ್‌ ಬಿ ಡಿ ಖಾತೆದಾರರಿಗೆ ಯಾವ ಶುಲ್ಕವನ್ನೂ ವಿಧಿಸುವುದಿಲ್ಲ. ಆದರೆ  10 ಚೆಕ್ ಗಳ  ನಂತರ 40 ರೂ ಮತ್ತು ಜಿಎಸ್‌ಟಿ  ವಿಧಿಸಲಾಗುತ್ತದೆ ಎಂದು ಎಸ್ ಬಿ ಐ ಮಾಹಿತಿ ನೀಡಿದೆ.  ಅದೇ ಸಮಯದಲ್ಲಿ, 25 ಚೆಕ್ ಹೊಂದಿರುವ ಚೆಕ್ ಬುಕ್ ಮೇಲೆ  75 ತುರ್ತು ಚೆಕ್ ಬುಕ್ ಬೇಕಾದಲ್ಲಿ 50 ರು ಶುಲ್ಕ ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಚೆಕ್ ಬುಕ್ ನಲ್ಲಿನ ಹೊಸ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗುವುದು ಎಂದು ಬ್ಯಾಂಕ್ ಹೇಳಿದೆ.

LPG ನೂ ದುಬಾರಿ..?

ಕಚ್ಚಾ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ಹೆಚ್ಚಿಸಬಹುದೆಂಬ ಆತಂಕ ಎದುರಾಗಿದೆ. ಜುಲೈ 1 ರಿಂದ ಎಲ್‌ ಪಿ ಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುವುದು ಎಂದು ಹೇಳಲಾಗಿದೆ. ಇನ್ನು, ತೈಲ ಕಂಪನಿಗಳು ಜೂನ್ ತಿಂಗಳಲ್ಲಿ ಬೆಲೆಗಳನ್ನು ಹೆಚ್ಚಿಸಿಲ್ಲ. ಎಲ್‌ ಪಿ ಜಿ ಸಿಲಿಂಡರ್‌ ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. ಆದರೇ, ಜೂನ್ ನಲ್ಲಿ ಹೆಚ್ಚಿಸದಿದ್ದ ಕಾರಣ ಜುಲೈ ನಲ್ಲಿ ದುಬಾರಿ ಆಗಬಹುದು ಎಂದು ಹೇಳಲಾಗುತ್ತಿದೆ.

ಟಿಡಿಎಸ್, ಟಿಸಿಎಸ್ ಕಡಿತದಲ್ಲೂ ಬದಲಾವಣೆ

ಜುಲೈ 1 ರಿಂದ ಹೆಚ್ಚಿನ ಟಿಡಿಎಸ್ ಟಿಸಿಎಸ್ ಶುಲ್ಕ ವಿಧಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರ ಮೇಲೆ ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಸದವರನ್ನು ಈಗ ಕಟ್ಟುನಿಟ್ಟಾಗಿ ಪರಿಗಣಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ ಎಂದು ವರದಿಯಾಗಿದೆ.

ಸಿಂಡಿಕೇಟ್ ಬ್ಯಾಂಕಿನ ಐ ಎಫ್‌ ಎಸ್‌ ಸಿ ಕೋಡ್ ಬದಲಾವಣೆ

ಜುಲೈ 1 ರಿಂದ  ಸಿಂಡಿಕೇಟ್ ಬ್ಯಾಂಕಿನ ಐ ಎಫ್‌ ಎಸ್‌ ಸಿ  ಕೋಡ್ ಬದಲಾವಣೆಯಾಗಲಿದೆ. ಕೆನರಾ ಬ್ಯಾಂಕ್‌ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನಗೊಂಡಿರುವುದರಿಂದ ಸಿಂಡಿಕೇಟ್ ಬ್ಯಾಂಕ್ ಖಾತೆದಾರರು ಹೊಸ ಐ ಎಫ್‌ ಎಸ್‌ ಸಿ ಕೋಡ್‌ ಗಳನ್ನು ಪಡೆಯುತ್ತಾರೆ. ಕೆನರಾ ಬ್ಯಾಂಕ್, ಈಗಾಗಲೇ ಹೊಸ ಐ ಎಫ್‌ ಎಸ್‌ ಸಿ ಕೋಡ್ ಪಡೆಯಲು ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಖಾತೆದಾರರಿಗೆ ಮನವಿ ಮಾಡಿದೆ. ಹೊಸ ಐಎಫ್‌ಎಸ್‌ಸಿ ಕೋಡ್ ಇಲ್ಲದೆ, ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇನ್ನು, ಜುಲೈ 1 ರಿಂದ ಹಳೆಯ ಚೆಕ್‌ ಬುಕ್‌ ಗಳ ಬದಲಿಗೆ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಚೆಕ್‌ ಬುಕ್‌ ಗಳನ್ನು ಸಹ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

ಇದನ್ನೂ ಓದಿ :  ತನ್ನ ಬಳಕೆದಾರರಿಗೆ ಮತ್ತೆರಡು ವಿಶೇಷತೆಗಳನ್ನು ನೀಡುತ್ತಿದೆ ವಾಟ್ಸ್ಯಾಪ್ ..!

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.