ಸಿಡ್ಕೊದಿಂದ ಹೊಸ ಪ್ರವಾಸಿ ಕೇಂದ್ರ ಯೋಜನೆ
Team Udayavani, Jul 2, 2021, 9:21 AM IST
ನವಿಮುಂಬಯಿ: ಪ್ರವಾ ಸೋದ್ಯಮಕ್ಕಾಗಿ ಸಿಡ್ಕೊದ ಉಲ್ವೆ ನೋಡ್ ಬಳಿ ದ್ವೀಪವನ್ನು ಅಭಿವೃದ್ಧಿ ಪಡಿಸಲು ಸಿಡ್ಕೊ ಹೂಡಿಕೆದಾರರಿಂದ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಥಾಣೆ ಕೊಲ್ಲಿಯ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಈ ದ್ವೀಪವು ಮೂರು ಕಡೆ ಅರೇಬಿಯನ್ ಸಮುದ್ರದ ನೀರಿನಿಂದ ಆವೃತವಾಗಿದೆ ಮತ್ತು ಐತಿಹಾಸಿಕ ಎಲಿಫೆಂಟಾ ಗುಹೆಗಳ ಮುಂಭಾಗದ ನೋಟವನ್ನು ಹೊಂದಿದೆ.
ನವಿಮುಂಬಯಿ ಮಹಾನಗರ ಪಾಲಿಕೆಯು ದ್ವೀಪದ 30 ಹೆಕ್ಟೇರ್ ಭೂಮಿಯಲ್ಲಿ ಪ್ರಾದೇಶಿಕ ಉದ್ಯಾನ ಯೋಜನೆಯನ್ನು ಅಭಿವೃದ್ಧಿ ಯೋಜ ನೆಯಲ್ಲಿ ಕಾಯ್ದಿರಿಸಿದೆ. ಈ ದ್ವೀಪದ ಅಭಿವೃದ್ಧಿಯೊಂದಿಗೆ ನವಿಮುಂಬಯಿಗೆ ನೈಸರ್ಗಿಕ ಪ್ರವಾಸಿ ತಾಣ ಸಿಗಲಿದೆ. ಈ 60 ಹೆಕ್ಟೇರ್ ದ್ವೀಪವು ಉದ್ದೇಶಿತ ನವಾಹೇಶೇವ ಶಿವಿx ಸಮುದ್ರ ಸೇತುವೆಗೆ ಹತ್ತಿರದಲ್ಲಿದೆ. ಆದ್ದರಿಂದ ಸಿಡ್ಕೊ ದ್ವೀಪವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, ಟೆಂಡರ್ ಆಹ್ವಾನಿಸಿದೆ.
ಜೂ. 27ರಿಂದ ಸಿಡ್ಕೊ ತನ್ನ ವೆಬ್ಸೈಟ್ನಲ್ಲಿ ಹೂಡಿಕೆದಾರರು ಮತ್ತು ಖರೀದಿದಾರರಿಗೆ ದ್ವೀಪದಲ್ಲಿ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ಮಿಸಲು ಬಯಸುವ ಎಲ್ಲ ಮಾಹಿತಿಗಳನ್ನು ಒದಗಿಸಿದೆ. ಯೋಜನೆಗೆ ಬಿಡ್ಡಿಂಗ್ ಮಾಡಲು ಜು. 29ರ ಗಡುವು ನೀಡಲಾಗಿದೆ. ಟೆಂಡರ್ ಪೂರ್ವ ಅರ್ಹತೆಗಾಗಿ ಈ ಆಸಕ್ತಿಯ ಪ್ರಸ್ತಾವನೆ ಮೂಲಕ ಪಡೆದ ಸಲಹೆಗಳನ್ನು ನೀಡಲಾಗುವುದಿಲ್ಲ ಎಂದು ಸಿಡ್ಕೊ ಸ್ಪಷ್ಟಪಡಿಸಿದೆ. ಈ ಪ್ರಸ್ತಾವದ ಮೂಲಕ ಪಡೆದ ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಸೇರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಸಿಡ್ಕೊ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ