ಕ್ಯಾಚ್ ಆಫ್ ದಿ ಸಮ್ಮರ್: ವಿಶ್ವ ಕ್ರಿಕೆಟ್ ನ ಬೆರಗು ಮೂಡಿಸಿದ ಹರ್ಲೀನ್ ಡಿಯೋಲ್ ಕ್ಯಾಚ್
Team Udayavani, Jul 10, 2021, 11:00 AM IST
ನಾರ್ತಂಪ್ಟನ್: ಇಂಗ್ಲೆಂಡ್ ವನಿತೆಯರ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ಡಕ್ ವರ್ತ್ ನಿಯಮದಡಿ ಸೋಲನುಭವಿಸಿದೆ. ಆದರೆ ಭಾರತದ ಹರ್ಲೀನ್ ಡಿಯೋಲ್ ಹಿಡಿದ ಅದ್ಭುತ ಕ್ಯಾಚ್ ಇದೀಗ ವಿಶ್ವ ಕ್ರಿಕೆಟ್ ನ್ನು ಬೆರಗುಗೊಳಿಸಿದೆ.
ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5 ನೇ ಓವರ್ ನಲ್ಲಿ ಜೋನ್ಸ್ ಬಾರಿಸಿದ ಚೆಂಡನ್ನು ಲಾಂಗ್ ಆಫ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್ ಅದ್ಭುತವಾಗಿ ಹಿಡಿದರು.
ಜೋನ್ಸ್ ಬಾರಿಸಿದ ಚೆಂಡನ್ನು ಸಿಕ್ಸರ್ ಗೆರೆಯ ಬಳಿ ಹಾರಿ ಹಿಡಿದ ಹರ್ಲೀನ್ ಸಮತೋಲನ ತಪ್ಪಿದ ಕಾರಣ ಚೆಂಡನ್ನು ಮೇಲಕ್ಕೆಸೆದರು. ಗೆರೆ ದಾಟಿ ಮತ್ತೆ ಮೈದಾನದೊಳಗೆ ಹಾರಿ ಚೆಂಡು ನೆಲಕ್ಕೆ ತಾಗುವ ಮೊದಲೇ ಅದನ್ನು ಹಿಡಿದರು. ಹರ್ಲೀನ್ ಈ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇಂಗ್ಲೆಂಡ್ ಆಟಗಾರರೂ ಚಪ್ಪಾಳೆ ತಟ್ಟಿ ಭಾರತೀಯ ಆಟಗಾರ್ತಿಯ ಸಾಧನೆಗೆ ಮೆಚ್ಚುಗೆ ಸೂಚಿಸಿದರು.
ಇದನ್ನೂ ಓದಿ:ಹರ್ಮನ್ ಬಳಗಕ್ಕೆ ವರುಣನ ಕಾಟ: ಡಿಎಲ್ ನಿಯಮದಡಿ ಗೆದ್ದ ಇಂಗ್ಲೆಂಡ್ ವನಿತೆಯರು
ಹರ್ಲೀನ್ ಕ್ಯಾಚ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋವನ್ನು ಕಿಚ್ಚ ಸುದೀಪ್ ಕೂಡಾ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ಕ್ಯಾಚನ್ನು ಸುದೀಪ್ ‘ಎಪಿಕ್’ ಎಂದು ಬಣ್ಣಿಸಿದ್ದಾರೆ.
Epic………….. ????? https://t.co/6YAtG3BkUQ
— Kichcha Sudeepa (@KicchaSudeep) July 10, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ಮಕ್ಕಳಿಗಾಗಿ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!
Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ