Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Team Udayavani, May 8, 2024, 6:25 PM IST

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

ಪಣಜಿ: ಗೋವಾದಲ್ಲಿ ಲೋಕಸಭಾ ಚುನಾವಣೆ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ, ಇದರಿಂದ ಬಿಜೆಪಿಗೆ ಲಾಭವಾಗಲಿದೆ. ಉತ್ತರ ಗೋವಾದಿಂದ ಶ್ರೀಪಾದ್ ನಾಯ್ಕ್ 1 ಲಕ್ಷ ಮತಗಳಿಂದ ಹಾಗೂ ದಕ್ಷಿಣ ಗೋವಾದಿಂದ ಪಲ್ಲವಿ ಧೆಂಪೊ 60 ಸಾವಿರ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಣಜಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುರಾಜ್ಯದಲ್ಲಿ ಬಿಸಿಲಿನ ತಾಪವಿದ್ದರೂ ಮತದಾನಕ್ಕೆ ಉತ್ಸಾಹದಿಂದ ಮನೆಯಿಂದ ಹೊರ ಬಂದಿದ್ದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಬಗ್ಗೆ ಹೇಳಿಲ್ಲ. ಕೇವಲ ಧರ್ಮ, ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಯತ್ನಿಸಿದರು. ಬಿಜೆಪಿ ಹಾಗೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಎಸ್ಟಿ ಅಥವಾ ಒಬಿಸಿ ಸಮುದಾಯದ ಒಬ್ಬ ಅಥವಾ ಇಬ್ಬರನ್ನು ಒಕ್ಕಲೆಬ್ಬಿಸುವ ಮೂಲಕ ಇಡೀ ಸಮಾಜ ಬಿಜೆಪಿ ವಿರುದ್ಧವಾಗಿದೆ ಎಂದು ತೋರಿಸಲು ಪ್ರಯತ್ನಿಸಿದರು. ಈಗ ಮತದಾರರು ಅದರಲ್ಲೂ ಯುವ ಮತದಾರರು ಚುರುಕಾಗಿದ್ದಾರೆ. ಕಾಂಗ್ರೆಸ್‍ನ ಒಡೆದು ಆಳುವ ರಾಜಕಾರಣವನ್ನು ತಾವು ಒಪ್ಪುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನ ವಿಧ್ವಂಸಕ ರಾಜಕಾರಣಕ್ಕೆ ಮತದಾರರು ತಕ್ಕ ಉತ್ತರ ನೀಡಿ ತಮ್ಮ ಸ್ಥಾನವನ್ನು ತೋರಿಸುತ್ತಾರೆ ಎಂಬ ನಂಬಿಕೆಯನ್ನು ತಾನಾವಡೆ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಉತ್ತರ ಗೋವಾ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಇದು ನಮ್ಮ ಕೊನೆಯ ಚುನಾವಣೆ. ಈ ಬಗ್ಗೆ ಪಕ್ಷಕ್ಕೆ ತಿಳಿಸಲಾಗಿದ್ದು, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಚುನಾವಣೆಯ ನಂತರ ಭಾರತ್ ಮೈತ್ರಿಯನ್ನು ಎಲ್ಲರೂ ಮರೆತುಬಿಡುತ್ತಾರೆ ಎಂದು ಸದಾನಂದ ತಾನಾವಡೆ ನುಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತಾನಾವಡೆ, ಉತ್ತರ ಗೋವಾ ಅಭ್ಯರ್ಥಿ ಶ್ರೀಪಾದ ನಾಯ್ಕ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

ಭಗವಾನ್‌ ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ…ದೇವಾಲಯ ಒಡೆಯಲು ಹೈಕೋರ್ಟ್‌ ಅನುಮತಿ

ಭಗವಾನ್‌ ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ…ದೇವಾಲಯ ಒಡೆಯಲು ಹೈಕೋರ್ಟ್‌ ಅನುಮತಿ

1-asdsad

Special Marriage Act ಅಡಿಯಲ್ಲಿ ಹಿಂದೂ-ಮುಸ್ಲಿಂ ವಿವಾಹ ಮಾನ್ಯವಲ್ಲ: ಹೈಕೋರ್ಟ್

4

ಹೊರಬಿತ್ತು ಅಂಬಾನಿ ಪುತ್ರನ ವೆಡ್ಡಿಂಗ್ ಕಾರ್ಡ್‌: ಎಲ್ಲಿ,ಯಾವಾಗ,ವಿಶೇಷಗಳೇನು? ಇಲ್ಲಿದೆ ವಿವರ

1-weqwwewq

Jammu ಭೀಕರ ಬಸ್ ಅವಘಡ : 21 ಮಂದಿ ಮೃತ್ಯು, ಹಲವರಿಗೆ ಗಾಯ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.