ಜಿಲ್ಲೆಯಲ್ಲಿ ಮಳೆಗೆ ತುಂಬಿದ ಚೆಕ್‌ ಡ್ಯಾಂ

Team Udayavani, Jul 20, 2021, 1:11 PM IST

ಜಿಲ್ಲೆಯಲ್ಲಿ ಮಳೆಗೆ ತುಂಬಿದ ಚೆಕ್‌ ಡ್ಯಾಂ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ-ಕುಂಟೆಗಳು ತುಂಬಿ ತುಳಕಾಡುತ್ತಿರುವ ಜೊತೆಗೆಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವಬಹುಕಮಾನ್‌ ಚೆಕ್‌ಡ್ಯಾಂಗಳು ತುಂಬಿ ಕೋಡಿ ಹರಿಯುತ್ತಿವೆ. ಅಂತರ್ಜಲಮಟ್ಟ ವೃದ್ಧಿಯಾಗುವ ಲಕ್ಷಣ ಕಂಡು ಬರುತ್ತಿದೆ.

ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಪ್ರದೇಶ ಎಂಬ ಖ್ಯಾತಿಗೆ ಗುರಿಯಾಗಿದ್ದು, ಇದನ್ನು ಅಳಿಸಿ ಹಾಕಲು ಅಂತರ್ಜಲಮಟ್ಟವನ್ನು ವೃದ್ಧಿಗೊಳಿಸುವ ಕೆಲಸಕ್ಕೆ ಹಿಂದಿನ ಜಿಲ್ಲಾಧಿಕಾರಿಅನಿರುದ್ಧ್ ಶ್ರವಣ್‌ ಸಾಕಷ್ಟು ಶ್ರಮವಹಿಸಿದ್ದರು. ಜಿಲ್ಲೆಯಲ್ಲಿನ ಜಲಮೂಲಗಳು ಕೆರೆ-ಕುಂಟೆಗಳನ್ನುಸಂರಕ್ಷಣೆ ಮಾಡುವ ಜೊತೆಗೆ ಅಕ್ರಮವಾಗಿಒತ್ತುವರಿಯಾಗಿದ್ದ ಕೆರೆಗಳನ್ನು ತೆರವುಗೊಳಿಸಿ, ಬೌಂಡರಿ ಗುರುತು ಮಾಡಿದ್ದರು.

ಮಳೆ ನೀರು ಸಂರಕ್ಷಣೆ: ತದನಂತರ ಜಿಪಂ ಸಿಇಒ ಆಗಿ ಬಂದ ಬಿ.ಫೌಝೀಯಾ ತರುನ್ನುಮ್‌ ಅವರು ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸುವ ಯೋಜನೆ ಮುಂದುವರಿಸಿ, ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು. ಜಿಲ್ಲಾದ್ಯಂತ ಕೆರೆ-ಕುಂಟೆಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸುವ ಜೊತೆಗೆ ಜಲಮೂಲ ಗಳಾದ ಕಾಲುವೆ, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಿ, ಮಳೆ ನೀರು ಸಂರಕ್ಷಣೆಗೆ ಆದ್ಯತೆ ನೀಡಿದ್ದರು. ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಬಹುಕಮಾನ್‌ ಚೆಕ್‌ಡ್ಯಾಂಗಳನ್ನು ನಿರ್ಮಿಸಿದ ಫಲದಿಂದಾಗಿ ಇಂದು ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಸುಧಾರಣೆ ಆಗುತ್ತಿದೆ. ಕಳೆದು ನಾಲ್ಕೈದು ದಿನಗಳಿಂದಸುರಿದ ಮಳೆ ನೀರು ಬಹುತೇಕ ಚೆಕ್‌ ಡ್ಯಾಂಗಳಿಗೆ ಹರಿದು ಬಂದಿದ್ದು, ನೋಡಲು ಜನರು ಮುಗಿ ಬೀಳುತ್ತಿದ್ದಾರೆ.

ವ್ಯವಸಾಯಕ್ಕೆ ಅನುಕೂಲ: ಜಿಪಂ ಹಾಲಿ ಸಿಇಒ ಪಿ.ಶಿವಶಂಕರ್‌ ಸಹ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಅಂತರ್ಜಲಮಟ್ಟವನ್ನು ವೃದ್ಧಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸಲು ಬದುಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ರೈತರ ತೋಟದಲ್ಲಿ ಕೃಷಿಹೊಂಡಗಳನ್ನು ನಿರ್ಮಿಸಿ ಒಂದೆಡೆ ಅಂತರ್ಜಲ ಮಟ್ಟವನ್ನು ವೃದ್ಧಿಗೊಳಿಸುವ ಜೊತೆಗೆರೈತರಿಗೆ ವ್ಯವಸಾಯಕ್ಕೆ ನೀರು ಬಳಕೆ ಮಾಡಲು ಸಹಕಾರ ಮಾಡಿದ್ದಾರೆ.

ಯಾವುದೇ ನದಿನಾಲೆಗಳಿಲ್ಲದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆನೀರನ್ನು ಆಶ್ರಯಿಸಿಕೊಂಡು ಈ ಭಾಗದ ರೈತರು ವ್ಯವ ಸಾಯ ನಡೆಸುತ್ತಿದ್ದಾರೆ.

ಇಂಥ ‌ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ರೈತರು ಮತ್ತು ಜನರ ‌ ಪಾಲಿಗ ನ‌ರೇಗಾ ಯೋಜನೆ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ನಿರ್ಮಿಸಿರುವ ‌ ಬಹುತೇಕ ಕಲ್ಯಾಣಿಗಳು, ಕೆರೆ-ಕುಂಟೆಗಳು, ಬಹುಕಮಾನ್‌ ಚೆಕ್‌ಡ್ಯಾಂಗ ‌ಳು, ಕೃಷಿ ಹೊಂಡಗಳು ಮಳೆನೀರು ಕೊಯು ಪ‌ದ್ಧತಿ ಅಳವಡಿಸಿ ನಿರ್ಮಿಸಿರುವ ‌ ಸಂಪ್‌ಗಳು ಭರ್ತಿಯಾಗಿದೆ.

ಕಳದೆರಡು ಸಾಲಿನ ಚೆಕ್‌ ಡ್ಯಾಂ ವಿವರ : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಬಾಗೇಪಲ್ಲಿ 1, ಚಿಕ್ಕಬಳ್ಳಾಪುರ 13, ಚಿಂತಾಮಣಿ 16, ಗೌರಿಬಿದನೂರು 6, ಗುಡಿಬಂಡೆ 7, ಶಿಡ್ಲಘಟ್ಟತಾಲೂಕಿನಲ್ಲಿ 32 ಒಟ್ಟು 75 ಬಹುಕಮಾನ್‌ ಚೆಕ್‌ ಡ್ಯಾಂಗಳ ನಿರ್ಮಾಣ ಮಾಡಿದ್ದು, 2021-22ನೇಸಾಲಿನಲ್ಲಿ ಚಿಂತಾಮಣಿ 2, ಗೌರಿಬಿದನೂರು 1, ಶಿಡ್ಲಘಟ್ಟ 7 ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಎಲ್ಲವೂ ತುಂಬಿ ಹರಿಯುತ್ತಿದ್ದು, ನೋಡಲು ಜನ ಮುಗಿಬೀಳುತ್ತಿದ್ದಾರೆ.

ಚೆಕ್‌ ಡ್ಯಾಂ ಶೇ.80 ಭರ್ತಿ: ಚಿಕ್ಕಬಳ್ಳಾಪುರ ಜಿಲ್ಲೆಯೂ ಬರಪೀಡಿತ ಪ್ರದೇಶವಾಗಿದೆ. ಜಲ ಸಂರಕ್ಷಣೆ ಮಾಡಲು ಆರ್‌.ಡಿ.ಪಿ.ಆರ್‌ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಜಿಪಂ ಉಪಕಾರ್ಯದರ್ಶಿ ಶಿವಕುಮಾರ್‌ಹೇಳಿದರು. ಈ ಹಿಂದೆ ನಿರ್ಮಿಸಿರುವ ಚೆಕ್‌ ಡ್ಯಾಂಗಳು ಇತ್ತೀಚಿಗೆ ಸುರಿದ ಮಳೆಯಿಂದ ಶೇ.80 ರಿಂದ 90 ತುಂಬಿದ್ದು, ಇದರಿಂದ ಅಂತರ್ಜಲದಮಟ್ಟ ವೃದ್ಧಿ ಆಗಿದೆ. ಪೋಷಕಕಾಲುವೆ ಅಭಿವೃದ್ಧಿಗೊಳಿಸಲಾಗಿದೆ. ವ್ಯರ್ಥವಾಗಿ ಹರಿಯುವ ನೀರು ತಡೆಗಟ್ಟಿ, ನಿಂತಿರುವನೀರು ಇಂಗಿಸುವ ಕೆಲಸವನ್ನು ಕೈಗೊಂಡಿದೆ ಎಂದು ಹೇಳಿದರು.ಚೆಕ್‌ಡ್ಯಾಂಗಳಸುತ್ತಮುತ್ತಲಿನಪ್ರದೇಶದಲ್ಲಿ ಕೊಳವೆಬಾವಿಗಳು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಬೋರ್‌ವೆಲ್‌ ಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ ಎಂದು ವಿವರಿಸಿದರು.

ನರೇಗಾ ಯೋಜನೆಯಡಿ ನಿರ್ಮಿಸಿರುವಕೆರೆ-ಕುಂಟೆಗಳು,ಕಲ್ಯಾಣಿಗಳು ಮತ್ತು ಬಹುಕಮಾನ್‌ ಚೆಕ್‌ಡ್ಯಾಂಗಳು ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ತುಂಬಿವೆ. ಇದರಿಂದ ಅಂತರ್ಜಲಮಟ್ಟ ವೃದ್ಧಿಯಾಗಿ ರೈತರು ಮತ್ತು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಸಹ ಸ್ಯಾಟಲೈಟ್‌ ಆಧರಿಸಿ ಮಳೆ ನೀರು ಸಂಗ್ರಹ ಮಾಡಲು ಚೆಕ್‌ಡ್ಯಾಂಗಳನ್ನು ನಿರ್ಮಿಸಲುಕ್ರಮಕೈಗೊಳ್ಳಲಾಗಿದೆ.-ಪಿ.ಶಿವಶಂಕರ್‌, ಜಿಪಂ ಸಿಇಒ, ಚಿಕ್ಕಬಳ್ಳಾಪುರ

-ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court slams IMA

Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.