ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ; ಇನ್ನೂ ಎಚ್ಚರಿಕೆ ಅಗತ್ಯ


Team Udayavani, Jul 22, 2021, 6:40 AM IST

ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ; ಇನ್ನೂ ಎಚ್ಚರಿಕೆ ಅಗತ್ಯ

ದೇಶದ ಮೂರು ಜನರ ಪೈಕಿ ಇಬ್ಬರಲ್ಲಿ ಕೊರೊನಾ ವಿರುದ್ಧದ ಹೋರಾಟದ ಪ್ರತಿಕಾಯಗಳು ಬೆಳೆದುಕೊಂಡಿದ್ದು, ಮೂರರಲ್ಲಿ ಒಬ್ಬರು ಇನ್ನೂ ಪ್ರತಿಕಾಯ ಬೆಳೆಸಿಕೊಂಡಿಲ್ಲ ಎಂದು ಕೇಂದ್ರ ಸರಕಾರವೇ ಹೇಳಿದೆ. ಮಂಗಳವಾರವಷ್ಟೇ ಸಿರೋ ಸಮೀಕ್ಷೆಯ ವರದಿ ಪ್ರಕಟವಾಗಿದ್ದು, ದೇಶದ ಒಟ್ಟಾರೆ ಜನಸಂಖ್ಯೆಯ ಶೇ.67ರಷ್ಟು ಮಂದಿಯಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯಗಳು ಬೆಳೆದುಕೊಂಡಿವೆ. ಕಳೆದ ಜೂನ್‌-ಜುಲೈ ವೇಳೆಯಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆ ಕೊರೊನಾಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತುತ್ತಾಗಿದ್ದು, ಈ ಸಂದರ್ಭದಲ್ಲೇ ಪ್ರತಿಕಾಯಗಳು ಅಭಿವೃದ್ಧಿಯಾಗಿವೆ ಎಂದು ಹೇಳಿದೆ.

ಒಂದು ರೀತಿಯಲ್ಲಿ ಹೇಳುವುದಾದರೆ, ಜನಸಂಖ್ಯೆಯ ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯಗಳು ಬೆಳೆದಿರುವುದು ಸಮಾಧಾನಕರ ಸಂಗತಿ. ಆದರೆ, ಇದೇ ಸೀರೋ ಸರ್ವೇ ಹೇಳುವ ಪ್ರಕಾರ ಇನ್ನೂ 40 ಕೋಟಿ ಮಂದಿಯಲ್ಲಿ ಪ್ರತಿಕಾಯಗಳು ಬೆಳೆದಿಲ್ಲ. ಹೀಗಾಗಿ, ಮುಂದೆ ಎದುರಾಗಬಹುದಾದ ಮೂರನೇ ಅಲೆ ವೇಳೆ ಹೆಚ್ಚಿನ ಜಾಗ್ರತೆಯಿಂದ ಇರಬೇಕಾದದ್ದು ಅತ್ಯಗತ್ಯ ಎಂದು ಐಸಿಎಂಆರ್‌ ತಿಳಿಸಿದೆ.

ಈ ಬಾರಿ ವಯಸ್ಕರಷ್ಟೇ ಅಲ್ಲ, ಮಕ್ಕಳಲ್ಲೂ ಪ್ರತಿಕಾಯಗಳು ಬೆಳೆದಿವೆ. ಅಂದರೆ 6-17 ವಯ ಸ್ಸಿನ ಶೇ.50ರಷ್ಟು ಮಕ್ಕಳು ಕೊರೊನಾ ಪ್ರತಿಕಾಯಗಳನ್ನು ಬೆಳೆಸಿಕೊಂಡಿದ್ದಾರೆ. ಇದಷ್ಟೇ ಅಲ್ಲ, ಬೇರೆ ಬೇರೆ ವಯೋಮಾನದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಶೇ.50ಕ್ಕಿಂತ ಹೆಚ್ಚು ಮಂದಿ ಪ್ರತಿಕಾಯಗಳನ್ನು ಬೆಳೆಸಿಕೊಂಡಿದ್ದಾರೆ.

ಅಂದರೆ ಸೀರೊ ಸಮೀಕ್ಷೆ ಪ್ರಕಾರ, 45-60 ವಯೋಮಾನದವರಲ್ಲಿ ಶೇ.77.6­ರಷ್ಟು ಮಂದಿ, 60 ವಯಸ್ಸಿಗಿಂತ ಮೇಲ್ಪಟ್ಟವರಲ್ಲಿ ಶೇ.76.7ರಷ್ಟು, 18-44 ವಯೋಮಾನದವರಲ್ಲಿ ಶೇ.66.7ರಷ್ಟು ಪ್ರತಿಕಾಯಗಳು ಬೆಳೆದಿವೆ. ಆರರಿಂದ 17 ವರ್ಷ ವಯಸ್ಸಿನ ಮಕ್ಕಳಲ್ಲಿ ಎರಡು ವಿಭಾಗ ಮಾಡಲಾಗಿದೆ. ಇಲ್ಲಿ 6-9 ವಯಸ್ಸಿನ ಮಕ್ಕಳಲ್ಲಿ ಶೇ.57.2 ಮತ್ತು 10-17 ವಯಸ್ಸಿನ ಮಕ್ಕಳಲ್ಲಿ ಶೇ.61.6ರಷ್ಟು ಪ್ರತಿಕಾಯ ಬೆಳೆದಿದೆ.

ಕೊರೊನಾ ಮೊದಲ ಅಲೆಗಿಂತ ಎರಡನೇ ಅಲೆ ವೇಳೆಯೇ ಹೆಚ್ಚು ಮಂದಿ ಕೊರೊನಾಗೆ ತೆರೆದುಕೊಂಡಿದ್ದಾರೆ. ಈ ಪ್ರಕಾರವಾಗಿ 2021ರ ಜೂನ್‌ ನಿಂದ ಜುಲೈ ನಡುವೆ ಶೇ.67.6ರಷ್ಟು ಮಂದಿಯಲ್ಲಿ ಕೊರೊನಾ ಬಂದು ಹೋಗಿದೆ. ಇದನ್ನೇ ಕಳೆದ ವರ್ಷದ ನವೆಂಬರ್‌-ಡಿಸೆಂಬರ್‌ ವೇಳೆಗೆ ಹೋಲಿಕೆ ಮಾಡಿ ಹೇಳುವುದಾದರೆ ಶೇ.24.1, ಆಗಸ್ಟ್‌- ಸೆಪ್ಟಂಬರ್‌ ನಲ್ಲಿ ಶೇ.7.1 ಮತ್ತು ಮೇ-ಜೂನ್‌ ವೇಳೆ ಶೇ.0.7ರಷ್ಟು ಮಂದಿ ಕೊರೊನಾಗೆ ತುತ್ತಾಗಿ ಪ್ರತಿಕಾಯ ಬೆಳೆಸಿಕೊಂಡಿದ್ದರು. ಪ್ರಮುಖವಾಗಿ ಲಸಿಕೆ ಹಾಕಿಸಿಕೊಂಡವರಲ್ಲಿ ಹೆಚ್ಚಿನ ಪ್ರತಿಕಾಯ ಕಂಡು ಬಂದಿದೆ ಎಂದೂ ಈ ಸಮೀಕ್ಷೆ ಹೇಳಿದೆ.

ಏನೇ ಆಗಲಿ, ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ ಬೆಳವಣಿಗೆ ಸೃಷ್ಟಿಯಾಗಿದ್ದರೂ ಉಳಿದ ಶೇ.33ರಷ್ಟು ಮಂದಿ ಇನ್ನೂ ಕೊರೊನಾಗೆ ಯಾವುದೇ ರೀತಿಯಲ್ಲೂ ತೆರೆದುಕೊಂಡಿಲ್ಲ. ಹೀಗಾಗಿ, ಇವರ ಮೇಲೆ ನಿಗಾ ವಹಿಸುವುದು ಮುಖ್ಯವಾಗಿದೆ ಎಂದು ಐಸಿಎಂಆರ್‌ ಹೇಳಿದೆ. ಇದರಲ್ಲಿ ಮಕ್ಕಳೂ ಸೇರಿದ್ದು, ಇವರು ಕೊರೊನಾಗೆ ತುತ್ತಾಗದಂತೆ ನೋಡಿಕೊಂಡರೆ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಬಹುದು. ಜತೆಗೆ, ಶೇ.67ರಷ್ಟು ಮಂದಿಯಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಐಸಿಎಂಆರ್‌ ಹೇಳಿದ್ದು ನಿಜವಾದರೂ ಇಂಥವರಲ್ಲೇ ಎಂದು ಅದು ಹೇಳಿಲ್ಲ. ಹೀಗಾಗಿ, ಎಲ್ಲರೂ ಎಚ್ಚರದಿಂದ ಇರಬೇಕಾದದ್ದು ಮುಖ್ಯವಾಗಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.