ಶೀಘ್ರದಲ್ಲಿ ‘ನಿನ್ನ ಸನಿಹಕೆ’ ಬಿಡುಗಡೆ
Team Udayavani, Jul 23, 2021, 1:31 PM IST
ಬೆಂಗಳೂರು: ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್ ನಾಯಕ-ನಾಯಕಿಯಾಗಿರುವ “ನಿನ್ನ ಸನಿಹಕೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಏಪ್ರಿಲ್ ತಿಂಗಳಲ್ಲೇ ತೆರೆ ಕಾಣಬೇಕಿತ್ತು. ಅಷ್ಟರಲ್ಲಿ ಎರಡನೇ ಲಾಕ್ ಡೌನ್ ಘೋಷಿಸಿದ್ದರಿಂದ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿತ್ತು ಚಿತ್ರತಂಡ.
ಇದೀಗ ಶೇ. 100ರಷ್ಟು ಆಸನ ವ್ಯವಸ್ಥೆಗೆ ಅವಕಾಶ ಕಲ್ಪಿಸುತ್ತಿದ್ದಂತೆಯೇ “ನಿನ್ನ ಸನಿಹಕೆ’ ಥಿಯೇಟರ್ಗೆ ಬರಲು ಸಜ್ಜಾಗಿದೆ. ರಘು ದೀಕ್ಷಿತ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಿಟ್ಲಿಸ್ಟ್ ಸೇರಿಕೊಂಡಿವೆ. ವಿಶೇಷವೆಂದರೆ ಲಾಕ್ ಡೌನ್ ಸಮಯದಲ್ಲಿ ಕವರ್ ಸಾಂಗ್ಸ್ ಮೂಲಕ ಈ ಚಿತ್ರದ “ನೀ ಪರಿಚಯ’ ಎಂಬ ಹಾಡು ಕಮಾಲ್ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯಲ್ಲಿ ಈ ಹಾಡಿನ ಕವರ್ ವರ್ಷನ್ ಮಾಡಿದ್ದಾರೆ. .ಲಾಕ್ ಡೌನ್ ಸಮಯದಲ್ಲಿ ಹಿಟ್ ಆಗಿರೋಈ ಹಾಡು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಯೂಟ್ಯೂಬ್ನಲ್ಲಿ ಮಿಲಿಯನ್ಸ್ ಹಿಟ್ಸ್ ದಾಖಲಿಸಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿರೋ ಈ ಸಿನಿಮಾದ ಟ್ರೇಲರ್ ಸದ್ಯದಲ್ಲೇ ರಿಲೀಸ್ ಆಗಲಿದ್ದು ಬಿಡುಗಡೆಯ ದಿನಾಂಕವನ್ನು ಅದೇ ಸಮಯದಲ್ಲಿ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಲಿದೆ ಚಿತ್ರತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ