ವಿದ್ಯಾರ್ಥಿಗಳ ನೆರವಿಗೆ ಬಂದ ಏರ್ ಇಂಡಿಯಾ :ಭಾರತ-ಅಮೆರಿಕ ನಡುವೆ ಸಂಚಾರ ಹೆಚ್ಚಿಸಲು ನಿರ್ಧಾರ
Team Udayavani, Jul 30, 2021, 11:50 PM IST
ನವದೆಹಲಿ: ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಲು ಮುಂದಾಗಿರುವ ಭಾರತದ ಸಾವಿರಾರು ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ಸೌಕರ್ಯ ಕಲ್ಪಿಸಲು ಏರ್ ಇಂಡಿಯಾ ಸಂಸ್ಥೆ ನಿರ್ಧರಿಸಿದೆ.
ಆಗಸ್ಟ್ ಮೊದಲ ವಾರದಿಂದ ಭಾರತ ಹಾಗೂ ಅಮೆರಿಕ ನಡುವೆ ಏರ್ ಇಂಡಿಯಾ ವಿಮಾನಗಳ ಸಂಚಾರವನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಇತ್ತೀಚೆಗೆ, ಮುಂಬೈ ಮತ್ತು ಅಮೆರಿಕದ ನೆವಾರ್ಕ್ ನಡುವಿನ ವಿಮಾನ ಸಂಚಾರವನ್ನು ಏರ್ ಇಂಡಿಯಾ ರದ್ದುಗೊಳಿಸಿತ್ತು. ಇದರಿಂದ ಗಲಿಬಿಲಿಗೊಂಡಿದ್ದ ಹಲವಾರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಕಂಪನಿ, ಕೊರೊನಾ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಭಾರತದಿಂದ ಬರುವ ವಿಮಾನಗಳಿಗೆ ನಿರ್ಬಂಧ ಹೇರಿರುವುದರಿಂದ ಮುಂಬೈ-ನೆವಾರ್ಕ್ ನಡುವಿನ ವಿಮಾನ ಸಂಚಾರ ರದ್ದಾಗಿದೆ. ಇದು ಅನಿವಾರ್ಯವಾಗಿ ಕೈಗೊಳ್ಳಬೇಕಾದ ನಿರ್ಧಾರ. ಪ್ರಯಾಣಿಕರಿಗೆ ಈ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಆದರೆ, ಈ ಸಮಸ್ಯೆಯನ್ನು ಬೇರೊಂದು ನಿವಾರಿಸಲು ಎರಡೂ ದೇಶಗಳ ನಡುವಿನ ಏರ್ಇಂಡಿಯಾ ವಿಮಾನಗಳ ಸಂಚಾರವನ್ನು ಹೆಚ್ಚಿಸಲಾಗುತ್ತದೆ ಎಂದಿದೆ.
ಇದನ್ನೂ ಓದಿ :ಹಿಮಾಚಲ ಭೂಕುಸಿತದ ತೀವ್ರತೆಗೆ ಕ್ಷಣ ಮಾತ್ರದಲ್ಲಿ ಕುಸಿದುಬಿದ್ದ 100 ಮೀಟರ್ ರಸ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ