ಬಿಬಿಎಂಪಿಯಿಂದಲೂ ಜಿನೋಮಿಕ್‌ ಸೀಕ್ವೆನ್ಸ್‌

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ; ಮಕ್ಕಳಿಗಾಗಿ ಪಾಲಿಕೆಯ ಆಸ್ಪತ್ರೆಗಳು ಸಜ್ಜು

Team Udayavani, Aug 19, 2021, 2:19 PM IST

ಬಿಬಿಎಂಪಿಯಿಂದಲೂ ಜಿನೋಮಿಕ್‌ ಸೀಕ್ವೆನ್ಸ್‌

ಬೆಂಗಳೂರು: ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಜಿನೋಮಿಕ್‌ ಸೀಕ್ವೆನ್ಸ್‌ ಮಾಡಲಾಗುತ್ತಿದೆ. ಅದರಂತೆಯೇ, ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಪ್ರಾಯೋಗಿಕವಾಗಿ ಜಿನೋಮಿಕ್‌ ಸೀಕ್ವೆನ್ಸ್‌ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಆಸ್ಪತ್ರೆಗಳನ್ನು ಮಕ್ಕಳಿಗಾಗಿ ಸಜ್ಜು ಮಾಡಲಾಗುತ್ತಿದೆ. ಪದ್ಮನಾಭನಗರದ ಆಸ್ಪತ್ರೆ ಹಾಗೂ ಡಾ.ಜಗಜೀವನ್‌ ರಾಮ್‌ ನಗರದ ಆಸ್ಪತ್ರೆ ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಪಾಲಿಕೆಯು, ಮುಂಬರುವ ದಿನಗಳಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆರೋಗ್ಯ ತಜ್ಞರ ಸಮಿತಿ, ಮಕ್ಕಳ ವೈದ್ಯರ ಸಮಿತಿ ಜತೆಗೆ ಆಗಾಗ ಸಭೆ ನಡೆಸಲಾಗುತ್ತಿದೆ. ಈಗಾಗಲೆ, ಮನೆ ಮನೆ ಸರ್ವೆ ಕೂಡ ಆರಂಭವಾಗಿದೆ. ಸೆರೋ ಸರ್ವೇಯೂ ನಡೆಯುತ್ತಿದೆ. ಜತೆಗ, ನಿತ್ಯ ನಮ್ಮಲ್ಲಿ ಜಿನೋಮಿಕ್‌ ಸೀಕ್ವೆನ್ಸ್‌ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ದಾಂಡೇಲಿ/ಜೋಯಿಡಾಕ್ಕಿಲ್ಲ ಜಲಕ್ರೀಡೆಗೆ ಅನುಮತಿ, ನೆಲಕಚ್ಚಿದ ಪ್ರವಾಸೋದ್ಯಮ

ನಗರದಲ್ಲಿ ಕೋವಿಡ್‌ ಸೋಂಕು ಕುರಿತಂತೆ ಪ್ರತಿನಿತ್ಯ ನಿಗಾವಹಿಸಲಾಗುತ್ತಿದೆ. ನಿತ್ಯ ಹೊಸದಾಗಿ ಎಷ್ಟು ಕೋವಿಡ್‌ ಪ್ರಕರಣಹಾಗೂ ಆಸ್ಪತ್ರೆಗಳಲ್ಲಿ ಎಷ್ಟು ಸೋಂಕಿತರು ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ.

ಇದರಲ್ಲಿ ವಿಶೇಷವಾಗಿ ಮಕ್ಕಳು ಎಷ್ಟು ಎಂದು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಿಂದಲೂ ಮಾಹಿತಿ ಪಡೆಯಲು ಈಗಾಗಲೇ ಒಂದು ತಂಡವನ್ನು ರಚನೆ ಮಾಡಲಾಗಿದೆ. ಪ್ರಸ್ತುತ ಕೋವಿಡ್‌ ಪ್ರಮಾಣ ಹತೋಟಿಯಲ್ಲಿದೆ ಎಂದರು.

ಕೋವಿಡ್‌ ಹೆಚ್ಚಾಗದಂತೆ ಹಾಗೂ ಪ್ರಕರಣಗಳು ಹೆಚ್ಚಾದರೆ ನಿಯಂತ್ರಣಕ್ಕೆ ಪಾಲಿಕೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾಸ್ಕ್ ಧರಿಸದೇ ಓಡಾಡುವುದರಿಂದಲೇ ಸೋಂಕು ಹೆಚ್ಚು ಹರಡುತ್ತಿದೆ. ಈ ಎಲ್ಲವಿಷಯಗಳಬಗ್ಗೆ ನಿಗಾವಹಿಸಲುಮಾರ್ಷಲ್‌ ಗಳ 54 ತಂಡ ನೇಮಕ ಮಾಡಲಾಗಿದೆ. ಪ್ರತಿ ತಂಡದಲ್ಲಿ ನಾಲ್ಕು ಮಂದಿ ಮಾರ್ಷಲ್ಸ್‌, ಪೊಲೀಸ್‌, ಗೃಹ ರಕ್ಷಕದಳ ಸಿಬ್ಬಂದಿ ಇರಲಿದ್ದಾರೆ. ವಿಶೇಷವಾಗಿ ಸಿವಿಲ್‌ ಡಿಫೆನ್ಸ್‌ ನಿಯೋಜನೆ ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ಕೋವಿಡ್‌ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಇದ್ದು, ಈ ಬಗ್ಗೆ ಹೆಚ್ಚು ನಿಗಾ ವಹಿಸುವಕೆಲಸ ಆಗುತ್ತಿದೆ ಎಂದು ತಿಳಿಸಿದರು.

ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಅವಕಾಶ: ಇದೇ ತಿಂಗಳ 23ರಿಂದ ಶಾಲೆ ಆರಂಭವಾಗಲಿದೆ. ಈಗಾಗಲೇ, ಕಾಲೇಜಿಗೆ ತೆರಳುವವರಿಗೆ
ಕಡ್ಡಾಯವಾಗಿ ಲಸಿಕೆ ನೀಡಲಾಗಿದೆ. ಕೋವಿಡ್‌ ನಿಯಮ ಪಾಲನೆ ವಿಚಾರಕ್ಕೆ ಹೆಚ್ಚಿನ ಗಮನಹರಿಸಲಾಗಿದೆ. ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ
ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಶಾಲಾ ಬಸ್‌, ಖಾಸಗಿ ಶಾಲೆಗಳಲ್ಲಿ ಎಸ್‌ಒಪಿ ಪಾಲನೆ ಕುರಿತಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸರ್ಕಾರಕ್ಕೆ ಹೆಚ್ಚು ಲಸಿಕೆಗೆ ಬೇಡಿಕೆ: ಗೌರವ್‌ಗುಪ್ತ
ನಗರದ ಜನರು, ಹೆಲ್ಮೆಟ್‌ ಹಾಗೂ ಕಾರಿನ ಸೀಟ್‌ ಬೆಲ್ಟ್ ರೀತಿಯಲ್ಲಿಯೇ ಮಾಸ್ಕ್ ಧರಿಸಬೇಕು. ಲಸಿಕೆ ಹಾಕಲು ಹಿಂದೇಟು ಹಾಕುವ ಕಡೆಗಳಲ್ಲಿ ಹೆಚ್ಚಿನ ನಿಗಾ ಇಡಲು ತೀರ್ಮಾನ ಮಾಡಲಾಗಿದೆ. ಮಂಗಳವಾರ ರಾಜ್ಯ ಸರ್ಕಾರದ ಜತೆಗೆ ನಡೆದ ಸಭೆಯಲ್ಲಿ ಹೆಚ್ಚಿನ ಲಸಿಕೆಗೆ ಬೇಡಿಕೆ ಇಡಲಾಗಿದೆ. ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಲಸಿಕೆ ಬರಲಿದೆ ಎಂದು ಆಶ್ವಾಸನೆ ನೀಡಿದ್ದಾರೆ ಎಂದರು.

ಟಾಪ್ ನ್ಯೂಸ್

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Majestic Underpass: ಅಸಹ್ಯ, ಭಯ ಹುಟ್ಟಿಸುತ್ತೆ ಮೆಜೆಸ್ಟಿಕ್‌ ಅಂಡರ್‌ಪಾಸ್‌

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Vande Bharat: ಉಪನಗರಕ್ಕೂ ವಂದೇ ಭಾರತ ಮೆಟ್ರೋ ಬೋಗಿ?

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

Cucumber price: ಬಿಸಿಲ ಬರೆ; 1ಕೆಜಿ ಸೌತೆಕಾಯಿ ಬೆಲೆ 62 ರೂ.!

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

ನನಗೂ ಭೂ ವ್ಯವಹಾರಕ್ಕೂ ಸಂಬಂಧ ಇಲ್ಲ: ಬೆಂವಿವಿ ಪ್ರೊ.ಮೈಲಾರಪ್ಪ ಸ್ಪಷ್ಟನೆ 

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.