ಶರಿಯಾ ಕಾನೂನು ಎಂದರೇನು? ಈ ಕಾನೂನಿನಲ್ಲಿ ಯಾವ ಅಪರಾಧಕ್ಕೆ ಯಾವ ಶಿಕ್ಷೆ?

Team Udayavani, Aug 20, 2021, 12:24 PM IST

sharia law in afghanistan

ಕಾಬೂಲ್: ಎರಡು ದಶಕಗಳ ಬಳಿಕ ಅಫ್ಘಾನಿಸ್ಥಾನ ಮತ್ತೆ ತಾಲಿಬಾನ್ ವಶವಾಗಿದೆ. ಅಮೆರಿಕ ತನ್ನ ಸೇನೆಯನ್ನು ಹಿಂಪಡೆದಿದ್ದೇ ತಡ, ತಾಲಿಬಾನಿಗಳು ಅಫ್ಘಾನಿಸ್ಥಾನವನ್ನು ತಮ್ಮ ತೆಕ್ಕೆಗೆ ಪಡೆದಿದ್ದಾರೆ. ಅಫ್ಘಾನ್ ನಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ. ಇಲ್ಲೇನಿದ್ದರೂ ಶರಿಯಾ ಕಾನೂನು ಪಾಲಿಸಬೇಕು ಎನ್ನುತ್ತಿದ್ದಾರೆ ತಾಲಿಬಾನ್ ನಾಯಕರುಗಳು. ಹಾಗಾದರೆ ಏನಿದು ಶರಿಯಾ ಕಾನೂನು? ಅದರಲ್ಲಿ ಶಿಕ್ಷೆಯ ಪ್ರಮಾಣವೇನು? ಇಲ್ಲಿದೆ ಮಾಹಿತಿ.

ಏನಿದು ಶರಿಯಾ ಕಾನೂನು?

ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್‌ ಮತ್ತು ಇಸ್ಲಾಂ ಧಾರ್ಮಿಕ ವಿದ್ವಾಂಸರ ಬೋಧನೆಗಳನ್ನು ಒಳಗೊಂಡು ಇರುವ ಕಾನೂನು ವ್ಯವಸ್ಥೆಯೇ ಶರಿಯಾ ಕಾನೂನು. ಅರೆಬಿಕ್‌ ಭಾಷೆಯಲ್ಲಿ ಶರಿಯಾ ಎಂದರೆ “ಮುಂದಕ್ಕೆ ಸಾಗುವುದು’ ಎಂಬ ಅರ್ಥವನ್ನು ಕೊಡುತ್ತದೆ. ಅದರಲ್ಲಿ ವಿವಿಧ ರೀತಿಯ ನೈತಿಕ ಮತ್ತು ಜೀವನ ಹೇಗೆ ನಡೆಸಬೇಕು ಎಂಬ ಬಗ್ಗೆ ಸೂತ್ರಗಳು ಇವೆ. ಅದರಲ್ಲಿನ ಪ್ರತಿಯೊಂದು ಅಂಶಗಳೂ ಕಡ್ಡಾಯ, ಅನುಸರಣೀಯವಾಗಿದೆ.

ಇದನ್ನೂ ಓದಿ:VIDEO: ಕಾರಿನಲ್ಲಿ ಅಫ್ಘಾನ್ ಧ್ವಜ ಪ್ರದರ್ಶಿಸಿದ ವ್ಯಕ್ತಿಯನ್ನು ಬಂಧಿಸಿದ ತಾಲಿಬಾನ್ ಉಗ್ರರು

ಜಗತ್ತಿನ ಮುಸ್ಲಿಂ ಸಮುದಾಯ ಯಾವ ರೀತಿಯಲ್ಲಿ ಜೀವನ ನಿರ್ವಹಿಸಬೇಕು ಎಂಬ ಅಂಶವನ್ನು ಅದರಲ್ಲಿ ಉಲ್ಲೇಖೀಸಲಾಗಿದೆ. ಪ್ರಾರ್ಥನೆ ಸಲ್ಲಿಸುವುದು, ಉಪವಾಸ, ಬಡವರಿಗೆ ದಾನ-ಧರ್ಮ ನಡೆಸುವುದು, ಭಗವಂತನ ಆಶಯಗಳಿಗೆ ಅನುಸಾರವಾಗಿ ಸಮುದಾಯದವರು ಯಾವ ರೀತಿ ಜೀವನ ನಡೆಸಬೇಕು ಎನ್ನುವುದನ್ನು ತಿಳಿಸಲಾಗಿದೆ.

ಆಧುನಿಕ ಯುಗದ ಕಾನೂನುಗಳಂತೆ ಶರಿಯಾ ಕಾನೂನುಗಳು ಲಿಖೀತ ರೂಪದಲ್ಲಿಲ್ಲ. ಅದನ್ನು ಸರ್ಕಾರ ಕೂಡ ಜಾರಿ ಮಾಡುವುದಿಲ್ಲ. ಜತೆಗೆ ನ್ಯಾಯಾಲಯಗಳಲ್ಲಿ ಕೂಡ ಅದರ ಬಗ್ಗೆ ವಿಮರ್ಶೆ ಮಾಡಲಾಗುವುದಿಲ್ಲ.

ಶರಿಯಾ ಕಾನೂನು ವ್ಯಾಪ್ತಿಯಲ್ಲಿ ಏನೇನು ಅಪರಾಧಗಳು?

ತಜೀರ್‌

ಈ ವಿಭಾಗದಲ್ಲಿ ಬರುವ ಅಪರಾಧಗಳು ಅತ್ಯಂತ ಗಂಭೀರವಲ್ಲದ ಅಪರಾಧಗಳು. ಅವುಗಳಿಗೆ ಶಿಕ್ಷೆ ನೀಡಬೇಕೋ ಬೇಡವೋ ಎಂಬ ಅಂಶ ನ್ಯಾಯಾಧೀಶರ ವಿವೇಚನೆಯಲ್ಲಿರುತ್ತದೆ. ಅಂದರೆ, ಈ ವಿಭಾಗದಲ್ಲಿ ನಡೆದ ಅಪರಾಧಗಳಿಗೆ ನ್ಯಾಯಾಧೀಶರೇ ಪರಾಮರ್ಶೆ ನಡೆಸಿ ಶಿಕ್ಷೆ ವಿಧಿಸುತ್ತಾರೆ. ಈ ವಿಭಾಗದಲ್ಲಿ ಬರುವ ಅಪರಾಧಗಳೆಂದರೆ, ಬಂಧುಗಳ ಮನೆಯಿಂದಲೇ ಕಳವು ಅಥವಾ ಕಳವು ಮಾಡಲು ಯತ್ನ, ಸುಳ್ಳು ಪ್ರಮಾಣ ಮಾಡುವುದು ,ಸಾಲ ನೀಡುವುದು.

ಖೀಸಾಸ್‌

ಈ ವ್ಯಾಪ್ತಿಯಲ್ಲಿಒಬ್ಬವ್ಯಕ್ತಿಯಿಂದ ಮತ್ತೂಬ್ಬ ತೊಂದರೆಗೆ ಒಳಗಾದರೆ, ನೋವು ಅನುಭವಿಸಿದ ವ್ಯಕ್ತಿಯೇ ಶಿಕ್ಷೆ ವಿಧಿಸುವ ವ್ಯವಸ್ಥೆ. ಅಂದರೆ, ಸಂತ್ರಸ್ತರೇ ಅಪರಾಧಿಗೆ ಶಿಕ್ಷಿಸುವ ಮೂಲಕ ಪ್ರತೀಕಾರ ತೀರಿಸುವುದು. ಉದಾಹರಣೆಗೆ ವ್ಯಕ್ತಿ ಮತ್ತೂಬ್ಬನಿಗೆ ಥಳಿಸಿದ್ದರೆ, ನೋವಿಗೆ ಒಳಗಾದ ವ್ಯಕ್ತಿ ಥಳಿಸಿದಾತನಿಗೆ ಅದೇ ಮಾದರಿಯಲ್ಲಿ ಶಿಕ್ಷೆ ನೀಡುತ್ತಾನೆ. ಒಂದು ವೇಳೆ, ವ್ಯಕ್ತಿ ಮತ್ತೂಬ್ಬನನ್ನು ಕೊಲೆ ಮಾಡಿದರೆ, ಆತನ ಸಮೀಪದವರು ಕೃತ್ಯವೆಸಗಿದವನನ್ನು ಕೊಲ್ಲಲು ಅನುಮತಿ ನೀಡಲಾಗುತ್ತದೆ. ಹೀಗೆ ಮಾಡಲು ನ್ಯಾಯಾಲಯದ ಒಪ್ಪಿಗೆ ಬೇಕಾಗುತ್ತದೆ.

‌ಹುದೂದ್‌

ಇದು ಕುರಾನ್‌ನಲ್ಲಿ ಉಲ್ಲೇಖಗೊಂಡಿರುವ ಘೋರ ಶಿಕ್ಷೆ. ಈ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಕೃತ್ಯಗಳು ಭಗವಂತನ ವಿರುದ್ಧ ನಡೆಸಿದ್ದು ಎಂದು ಪರಿಗಣಿಸಲಾಗುತ್ತದೆ. ದ್ರಾಕ್ಷಾರಸ ಸೇವನೆ, ಮದ್ಯಪಾನ, ವ್ಯಭಿಚಾರ, ಅಕ್ರಮವಾಗಿ ಲೈಂಗಿಕ ಸಂಬಂಧ ಇರಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡುವುದು, ರಸ್ತೆಗಳಲ್ಲಿ ಕಳವು, ದರೋಡೆಈ ವ್ಯಾಪ್ತಿಗೆ ಬರುತ್ತದೆ. ಈ ಕೃತ್ಯ ನಡೆಸಿದವರಿಗೆ ಛಡಿಯೇಟು, ಕಲ್ಲುಎಸೆದು ಶಿಕ್ಷೆ ನೀಡುವುದು, ಅಂಗಾಂಗ ಕತ್ತರಿಸುವುದು, ಗಡಿಪಾರುಅಥವಾ ಮರಣದಂಡನೆ ಶಿಕ್ಷೆಯನ್ನು ನೀಡಲಾಗುತ್ತದೆ.

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.