ಅಧಿಕಾರಿಗಳ ಗೈರಿಗೆ ಗ್ರಾಮಸ್ಥರ ಆಕ್ರೋಶ

ಮುಂದಿನ ಗ್ರಾಮಸಭೆ ವಿಶಾಲವಾದ ಸ್ಥಳದಲ್ಲಿ ಆಯೋಜಿಸುವ ಭರವಸೆ

Team Udayavani, Dec 30, 2021, 5:48 PM IST

ಅಧಿಕಾರಿಗಳ ಗೈರಿಗೆ ಗ್ರಾಮಸ್ಥರ ಆಕ್ರೋಶ

ಮಹಾಲಿಂಗಪುರ: ಅಧಿಕಾರಿಗಳ ಗೈರು ಹಾಜರಿ ಹಾಗೂ ನಿಲ್ಲದ ಅಕ್ರಮ ಮದ್ಯ ಮಾರಾಟಕ್ಕೆ ಬೇಸತ್ತ ಗ್ರಾಮಸ್ಥರು ಗ್ರಾಮಸಭೆ ಮುಂದೂಡಬೇಕೆಂದು ಚಿಮ್ಮಡ ಗ್ರಾಮ ಪಂಚಾಯತಿ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಚಿಮ್ಮಡ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕವಿ ಚಕ್ರವರ್ತಿ ರನ್ನ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ನಡೆದ ಗ್ರಾಮಸಭೆಯಲ್ಲಿ ಹಲವಾರು ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳಿಗೆ ಸಭೆಯ ತಿಳಿವಳಿಕೆ ಪತ್ರ ನೀಡಿ, ಕರೆ ಮಾಡಿ ಮನವರಿಕೆ ಮಾಡಿದರೂ ಹಲವು ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಹಲವರು ತಮ್ಮ ಸಹಾಯಕರನ್ನು ಸಭೆಗೆ ಕಳುಹಿಸಿದ್ದರು.

ಅಲ್ಲದೇ ಸಭೆಯ ನೋಡಲ್‌ ಅಧಿಕಾರಿಗಳು ಗೈರಾದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗುವವರೆಗೂ ಸಭೆ ನಡೆಸಬಾರದೆಂದು ಪಟ್ಟು ಹಿಡಿದರು. ಇಕ್ಕಟ್ಟಾದ ಸ್ಥಳದಲ್ಲಿ ಸಭೆ ಆಯೋಜಿಸಿದ್ದರಿಂದ ಮಲ್ಲಪ್ಪ ಬಿರಾದರಪಾಟೀಲ, ಮೋನೇಶ ಬಡಿಗೇರ, ಗುರಲಿಂಗಪ್ಪ ದೊಡಮನಿ ಗ್ರಾಪಂ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಿಡಿಒ ಎಂ.ಎಸ್‌. ರೂಗಿ ಮಾತನಾಡಿ, ಮುಂದಿನ ಗ್ರಾಮಸಭೆ ವಿಶಾಲವಾದ ಸ್ಥಳದಲ್ಲಿ ಆಯೋಜಿಸುವ ಭರವಸೆ ನೀಡಿದರು. ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಶ್ರೀಧರ ನಂದಿಹಾಳ, ಹೆಸ್ಕಾಂನ ಎಸ್‌.ಎಸ್‌. ಮುಧೋಳ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ನೀಲನ್ನವರ, ಪಶು ವೈದ್ಯಾಧಿಕಾರಿ ಡಾ| ರೂಪಾ ಕಡಸಾನಿ ಮಾತನಾಡಿ, ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯ, ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿ ಕಾರಿ ಡಾ| ಅಶೋಕ ಪಡಸಾಲಿಯವರ ಕಾರ್ಯವೈಖರಿ ಕುರಿತು ಮಾನವ್ವ ಸಾವಳಗಿ, ಮಹಾಂತೇಶ ಯಂಕಂಚಿ ಸಲೀಮ ಸರಕಾವಸ, ಬಸವರಾಜ ಬಳಗಾರ ದೂರಿದರು. ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ ಮಾತನಾಡಿದರು. ಗ್ರಾಮದ ಸರಕಾರಿ ಪ್ರೌಢಶಾಲೆ, ರೈತ ಸಂಪರ್ಕ ಕೇಂದ್ರ, ಸರಕಾರಿ ಆಸ್ಪತ್ರೆ ಸೇರಿದಂತೆ ಹಲವಾರು ಇಲಾಖೆಯ ಸಮಸ್ಯೆಗಳ ಕುರಿತು ಗ್ರಾಮಸ್ಥರು ಚರ್ಚೆ ನಡೆಸಿದರು.

ನೋಡಲ್‌ ಅಧಿಕಾರಿಗಳೇ ಇಲ್ಲದ ಗ್ರಾಮಸಭೆಯ ಅದ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ರೇಣುಕಾ ಮಾಯಣ್ಣವರ, ಆನಂದ ಕವಟಿ, ಮನೋಜ ಹಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಮುಧೋಳ, ಮಹಾಲಿಂಗ ಮಾಯನ್ನವರ, ಗ್ರಾಪಂ ಸದಸ್ಯರು, ಗ್ರಾಮದ ವಿವಿಧ ಶಾಲೆಗಳ ಮುಖ್ಯಗುರುಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Hassan ಮುಸ್ಸಂಜೆಯಿಂದ ಮುಂಜಾನೆವರೆಗೂ ಎಸ್‌ಐಟಿ ಶೋಧನೆ

Hassan ಮುಸ್ಸಂಜೆಯಿಂದ ಮುಂಜಾನೆವರೆಗೂ ಎಸ್‌ಐಟಿ ಶೋಧನೆ

ಸುಬ್ರಹ್ಮಣ್ಯ: ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಮೃತ್ಯು…

ಸುಬ್ರಹ್ಮಣ್ಯ: ಗಾಳಿ ಮಳೆಗೆ ಮರ ಬಿದ್ದು ಮಹಿಳೆ ಮೃತ್ಯು…

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

Ankola: ಅಪ್ರಾಪ್ತ ಬಾಲಕಿಯ ಮೇಲೆ ವಯೋವೃದ್ಧನಿಂದ ಲೈಂಗಿಕ ದೌರ್ಜನ್ಯ; ಪ್ರಕರಣ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

Online ವಂಚಕರಿದ್ದಾರೆ ಹುಷಾರ್‌..!”ಉದಯವಾಣಿ’ ಇಂದಿನಿಂದ ಸರಣಿ ವರದಿ ಆರಂಭಿಸಿದೆ

1-pV

Bagalkote; ಅಬ್ಬರದ ಮಳೆ: ಸಿಡಿಲು ಬಡಿದು ಯುವಕ ಸಾವು

1-eqwewqeqw

Bagalkote; ಕಾರಿಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಜೀವ ದಹನ!

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

SSLC Exam Result; ರೈತ ಕುಟುಂಬದ ಅಂಕಿತಾ ರಾಜ್ಯಕ್ಕೆ ಪ್ರಥಮ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

Davanagere: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು… ಸಾವಿರಾರು ಮೀನುಗಳ ಮಾರಣಹೋಮ

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

ಜೈಲಿಂದ ಬಿಡುಗಡೆಯಾದ ರೇವಣ್ಣ ತವರು ಜಿಲ್ಲೆ ಭೇಟಿ ದಿಢೀರ್‌ ರದ್ದು

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

CM.. ನಿಮ್ಮ ಸರ್ಕಾರದ ವಿರುದ್ಧ ಮಹಿಳೆಯರು ವಿಶ್ವಾಸವಿಡಬಹುದೇ?

Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Fraud Case ಕೆನರಾ ಬ್ಯಾಂಕ್‌ ಹೆಸರಲ್ಲಿ ಸಂದೇಶ ಕಳುಹಿಸಿ 3.27 ಲಕ್ಷ ರೂ. ವಂಚನೆ

Hassan ಮುಸ್ಸಂಜೆಯಿಂದ ಮುಂಜಾನೆವರೆಗೂ ಎಸ್‌ಐಟಿ ಶೋಧನೆ

Hassan ಮುಸ್ಸಂಜೆಯಿಂದ ಮುಂಜಾನೆವರೆಗೂ ಎಸ್‌ಐಟಿ ಶೋಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.