ನಾಪತ್ತೆಯಾಗಿದ್ದ ನಟಿಯ ದೇಹ ಗೋಣಿ ಚೀಲದಲ್ಲಿ ಪತ್ತೆ : ಪತಿ, ಕಾರು ಚಾಲಕ ವಶಕ್ಕೆ
Team Udayavani, Jan 19, 2022, 3:28 PM IST
ಢಾಕಾ : ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಶಿಮು ಅವರ ಮೃತ ದೇಹವು ಢಾಕಾ ಹೊರವಲಯದ ನಿರ್ಜನ ಪ್ರದೇಶದಲ್ಲಿ ಗೋಣಿ ಚೀಲದೊಳಗೆ ಪತ್ತೆಯಾಗಿದೆ ಎಂದು ಬಾಂಗ್ಲಾ ಪೊಲೀಸರು ತಿಳಿಸಿದ್ದಾರೆ.
ರೈಮಾ ಅವರ ಮೃತದೇಹವು ಹಜರತ್ಪುರ ಸೇತುವೆಯ ಬಳಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ. ಕಳೆದ ಎರಡು ಮೂರು ದಿನಗಳಿಂದ ನಾಪತ್ತೆಯಾಗಿರುವ ಕುರಿತು ರೈಮಾ ಅವರ ಪತಿ ಠಾಣೆಗೆ ದೂರು ನೀಡಿದ್ದರು.
ರೈಮಾ ಮೃತ ದೇಹದ ಮೇಲೆ ಹಲವು ಗಾಯದ ಗುರುತು ಪತ್ತೆಯಾಗಿದ್ದು ಯಾರೋ ಕೊಲೆ ಮಾಡಿ ಸೇತುವೆಯ ಬಳಿ ಎಸೆದು ಹೋಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತನಿಖೆ ಕೈಗೆತ್ತಿಕೊಂಡ ಪೊಲೀಸರು ರೈಮಾ ಅವರ ಪತಿ ಹಾಗೂ ಅವರ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರೈಮಾ ಅವರು 1998 ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೂ ಸುಮಾರು 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕೂಡ ಕೆಲಸ ಮಾಡಿದ್ದರು.
ಇದನ್ನೂ ಓದಿ : ಸ್ನಾನದ ವಿಡಿಯೋ ಚಿತ್ರೀಕರಿಸಿ… ಬ್ಲ್ಯಾಕ್ ಮೇಲ್; ಅತ್ತಿಗೆ ಮೇಲೆ ಅತ್ಯಾಚಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cannes Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು
ಹೃದಯ ಸಂಬಂಧಿ ಕಾಯಿಲೆ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
Bollywood: ಜೂನ್ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್ ಭರಾಟೆ
Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್ ʼಬಾರ್ಡರ್ -2ʼ ರಿಲೀಸ್?