ಸಯ್ಯದ್ ಮೋದಿ ಬ್ಯಾಡ್ಮಿಂಟನ್: ದ್ವಿತೀಯ ಸುತ್ತಿಗೆ ಏರಿದ ಸಿಂಧು
Team Udayavani, Jan 20, 2022, 5:50 AM IST
ಲಕ್ನೋ: ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ನೆಚ್ಚಿನ ಆಟಗಾರ್ತಿ ಪಿ.ವಿ. ಸಿಂಧು ಮೊದಲ ಸುತ್ತನ್ನು ಸುಲಭದಲ್ಲಿ ದಾಟಿದ್ದಾರೆ.
ಬುಧವಾರದ ಪಂದ್ಯದಲ್ಲಿ ಅವರು ಭಾರತದವರೇ ಆದ ತಾನ್ಯಾ ಹೇಮಂತ್ ವಿರುದ್ಧ 21-9, 21-9 ಅಂತರದ ಸುಲಭ ಜಯ ಸಾಧಿಸಿದರು.
ಸಿಂಧು ಅವರಿನ್ನು ಅಮೆರಿಕದ ಲಾರೆನ್ ಲ್ಯಾಮ್ ಅವರನ್ನು ಎದುರಿಸಲಿದ್ದಾರೆ. ಲ್ಯಾಮ್ ಭಾರತದ ಮತ್ತೋರ್ವ ಸ್ಪರ್ಧಿ ಐರಾ ಶರ್ಮ ವಿರುದ್ಧ ಭಾರೀ ಹೋರಾಟ ನಡೆಸಿ 15-21, 21-16, 21-6 ಅಂತರದ ಗೆಲುವು ಒಲಿಸಿಕೊಂಡರು.
ಭಾರತದವರೇ ಆದ ಆಟಗಾರ್ತಿ ಕಾಣಿಕಾ ಕನ್ವಾಲ್ ಭಾರತೀಯ ಮೂಲದ ಅಮೆರಿಕನ್ ಶಟ್ಲರ್ ದಿಶಾ ಗುಪ್ತಾ ಅವರನ್ನು 21-15, 16-21, 21-6ರಿಂದ ಪರಾಭವಗೊಳಿಸಿದರು.
ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್