ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

ಬಸ್‌ ಮಾಲಕರ ಕ್ರಮಕ್ಕೆ ಪ್ರಯಾಣಿಕರು, ಪೊಲೀಸರ ಶ್ಲಾಘನೆ

Team Udayavani, Jan 25, 2022, 5:38 PM IST

ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

ಮಹಾನಗರ: ಪ್ರಯಾಣಿಕರು ಮತ್ತು ಬಸ್‌ನ ಸುರಕ್ಷೆಯ ಉದ್ದೇಶದಿಂದ ನಗರದಲ್ಲಿ ಓಡಾಡುವ ಕೆಲವು ಸಿಟಿ ಬಸ್‌ಗಳಲ್ಲಿ ಬಸ್‌ ಮಾಲಕರು ಸಿಸಿ ಕೆಮರಾ ಅಳವಡಿಸಿದ್ದು ಇದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.

ಸ್ಟೇಟ್‌ಬ್ಯಾಂಕ್‌-ತಲಪಾಡಿ ನಡುವೆ ಸಂಚರಿಸುವ 2 ಹಾಗೂ ಶೇಡಿಗುರಿ-ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುವ ಒಂದು ಬಸ್‌ಗೆ ಈಗಾಗಲೇ ಸಿಸಿ ಕೆಮರಾ ಅಳವಡಿಸಲಾಗಿದ್ದು, ಇದರಿಂದಾಗಿ ಬಸ್‌ ಮಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಿಗೂ ಅನುಕೂಲವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ರಾತ್ರಿ ವೇಳೆ ನಿಲ್ಲಿಸಲಾಗುವ ಬಸ್‌ಗಳ ಬ್ಯಾಟರಿ ಕಳ್ಳತನ ಮಾಡುವುದು, ಬಸ್‌ಗಳಿಗೆ ಹಾನಿ ಮಾಡುವುದು, ಪ್ರಯಾಣಿಕರ ಮೊಬೈಲ್‌ ಮತ್ತಿತರ ಸೊತ್ತುಗಳ ಕಳ್ಳತನ, ಮಹಿಳೆಯರಿಗೆ ಕಿರುಕುಳ ಮೊದಲಾದ ಸಂದರ್ಭ ಆರೋಪಿಗಳನ್ನು ಪತ್ತೆ ಮಾಡಲು ನೆರವಾಗುತ್ತಿವೆ.

ಒಮ್ಮೆ ಯಾವುದೋ ಒಂದು ಪ್ರಕರಣದ ಆರೋಪಿಯನ್ನು ಬೆನ್ನು ಹತ್ತಿ ಬಂದಿದ್ದ ಪೊಲೀಸರಿಗೆ ಆರೋಪಿ ಒಂದು ಸಿಟಿ ಬಸ್‌ನಲ್ಲಿ ಹೋಗಿರುವ ಮಾಹಿತಿ ದೊರೆಯಿತು. ಅನಂತರ ಆ ಸಿಟಿ ಬಸ್‌ನ ಸಿಸಿ ಕೆಮರಾ ಪರಿಶೀಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಇನ್ನೊಂದು ಘಟನೆಯಲ್ಲಿ ಸಿಟಿ ಬಸ್‌ ನಿರ್ವಾಹಕನೊಂದಿಗೆ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದ ದೃಶ್ಯ ಕೂಡ ಸಿಸಿ ಕೆಮರಾದಲ್ಲಿ ದಾಖಲಾಗಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಿದೆ. ಡೀಸೆಲ್‌ ಪಂಪ್‌ ರೀಡಿಂಗ್‌ನ ದೃಶ್ಯ ದಾಖಲಾಗುವುದರಿಂದಲೂ ನೆರವಾಗುತ್ತಿದೆ ಎನ್ನುತ್ತಾರೆ ಸಿಸಿ ಕೆಮರಾ ಅಳವಡಿಸಿರುವ ಬಸ್‌ನ ಮಾಲಕರು.

ಎಲ್ಲರಿಗೂ ಪ್ರಯೋಜನ
ನಮ್ಮ ಮಾಲಕರು ಒಂದು ಬಸ್‌ಗೆ ಸಿಸಿ ಕೆಮರಾ ಹಾಕಿಸಿದ್ದಾರೆ. ಇದರಿಂದ ಎಲ್ಲರಿಗೂ ಪ್ರಯೋಜನವಾಗಿದೆ. ಒಂದು ಕೆಮರಾ ಇಡೀ ಬಸ್‌ನ ದೃಶ್ಯ ಸೆರೆ ಹಿಡಿಯುತ್ತದೆ. ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯವನ್ನು ಮಾಲಕರು ಪರಿಶೀಲಿಸುತ್ತಾರೆ.
– ಅಲ್ವಿನ್‌, ಬಸ್‌ ಚಾಲಕರು

ಶ್ಲಾಘನೀಯ ನಡೆ
ಬಸ್‌, ಪ್ರಯಾಣಿಕರ ಸುರಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಸಿ ಕೆಮರಾ ಅಳವಡಿಸಿರುವುದು ಶ್ಲಾಘನೀಯ. ಮಹಿಳಾ ಪ್ರಯಾಣಿಕರಿಗೆ ಕಿರುಕುಳ, ಬಸ್‌ಗೆ ಹಾನಿ, ಪಿಕ್‌ಪಾಕೆಟ್‌ ಮೊದಲಾದ ಸಂದರ್ಭದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ. ಇತರ ಬಸ್‌ಗಳ ಮಾಲಕರು ಕೂಡ ಇದೇ ರೀತಿ ಸಿಸಿ ಕೆಮರಾ ಅಳವಡಿಸಿದರೆ ಉತ್ತಮ.
– ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತರು ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.