ಆಲಿಸಿ “ಕಿವಿ’ ಮಾತುಗಳನ್ನು! ಶ್ರವಣ ಸಂರಕ್ಷಣೆ ನಮ್ಮೆಲ್ಲರ ಹೊಣೆ


Team Udayavani, Mar 6, 2022, 6:45 AM IST

ಆಲಿಸಿ “ಕಿವಿ’ ಮಾತುಗಳನ್ನು! ಶ್ರವಣ ಸಂರಕ್ಷಣೆ ನಮ್ಮೆಲ್ಲರ ಹೊಣೆ

“ಜೀವನವಿಡೀ ಕೇಳಿಸಿಕೊಳ್ಳಲು ಕಾಳಜಿಯಿಂದ ಆಲಿಸಿ’ ಪಂಚೇಂದ್ರಿಯಗಳಲ್ಲಿ ಶ್ರವಣ ಶಕ್ತಿಯೂ ಒಂದು.ಇದು ಆಲಿಸುವಿಕೆ ಮತ್ತು ದೇಹದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಯು ಗ್ರಹಿಸಬಲ್ಲ ಆಲಿಸುವಿಕೆಯ ವ್ಯಾಪ್ತಿಯು ಆವರ್ತನ (ಫ್ರಿಕ್ವೆನ್ಸಿ) ಗಳಲ್ಲಿ ಹೇಳುವುದಾದರೆ 20-90 K Hz ಇರುತ್ತದೆ. ಅದೇ ರೀತಿ ತೀವ್ರತೆಯಲ್ಲಿ ಹೇಳುವುದಾದರೆ -10ರಿಂದ 120 ಡೆಸಿಬೆಲ್‌ಗ‌ಳಷ್ಟು ಇರುತ್ತದೆ. 1 ಬಿಲಿಯನ್‌ಗೂ ಅಧಿಕ ಯುವಜನತೆ ಯಾವುದೇ ಮುಂಜಾಗ್ರತ ಕ್ರಮಗಳನ್ನು ಅನುಸರಿಸದೆ ಅತಿಯಾದ ತೀವ್ರತೆ ಇರುವ ಶಬ್ದವನ್ನು ಕೇಳುವುದರಿಂದ ಶಾಶ್ವತ ಶ್ರವಣ ದೋಷಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು 63 ಮಿಲಿಯನ್‌ ಜನರು ಮಹತ್ತರವಾದ ಕಿವಿ ತೊಂದರೆಗಳಿಂದ ಬಳಲುತ್ತಿದ್ದಾರೆ. ವಿಶ್ವ ಶ್ರವಣ ದಿನವು ಪ್ರಪಂಚದಾದ್ಯಂತ ಕಿವಿ ಮತ್ತು ಶ್ರವಣ ಆರೈಕೆಯನ್ನು ಉತ್ತೇಜಿಸುತ್ತದೆ ಮತ್ತು ಕಿವುಡುತನ ಮತ್ತು ಶ್ರವಣ ನಷ್ಟವನ್ನು ಹೇಗೆ ತಡೆಯುವುದು ಎಂಬುದರ ಕುರಿತು ಜಾಗೃತಿ ಮೂಡಿಸುತ್ತದೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಪ್ರತೀ ವರ್ಷ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸುತ್ತಿದೆ. ಈ ವರ್ಷದ ವಿಷಯ “ಜೀವನಕ್ಕಾಗಿ ಕೇಳಲು ಕಾಳಜಿಯಿಂದ ಆಲಿಸಿ’.

ಶಬ್ದಪ್ರೇರಿತ ಶ್ರವಣ ನಷ್ಟ (ನಾಯ್ಸ ಇಂಡ್ನೂಸ್ಡ್ ಹಿಯರಿಂಗ್‌ ಲಾಸ್‌)
ಇದು ಶಾಶ್ವತವಾಗಿ ಒಳಕಿವಿಗೆ ಹಾನಿ ಉಂಟುಮಾಡುವುದರಿಂದ ಸಂವೇದನಾ ದೋಷದ ಒಂದು ವಿಧವಾಗಿದೆ. ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುತ್ತಿರುವ ಹೊಸ ತೊಂದರೆ ಎಂದರೆ ತಪ್ಪಾಗಲಾರದು. ಹಿತವಾಗಿರಬೇಕಾಗಿದ್ದ ಸಂಗೀತ ಇಂದು ಶಬ್ದಮಾಲಿನ್ಯದ ಪ್ರತಿನಿಧಿಯಾಗಿ ಬದಲಾಗುತ್ತಿರುವುದು ನಿಜಕ್ಕೂ ಖೇದಕರ. ಹೆಚ್ಚಿದ ಶಬ್ದಮಾಲಿನ್ಯ, ತೀವ್ರತರನಾದ ಶಬ್ದಕಾರಕಗಳ ಬಳಕೆ, ದಿನವೊಂದಕ್ಕೆ ನಾಲ್ಕರಿಂದ ಆರು ತಾಸುಗಳ ಕಾಲ ಇಯರ್‌ಫೋನ್‌ / ಹೆಡ್‌ಫೋನ್‌ಗಳ ಬಳಕೆಯಿಂದಾಗಿ ಈ ತೊಂದರೆ ಬರುತ್ತದೆ. ಗಟ್ಟಿಧ್ವನಿಯಲ್ಲಿ ಸಂಗೀತ ಆಲಿಸಲು ಹೆಡ್‌ಫೋನ್‌ ಉಪಯೋಗಿಸಿದರೆ ಈ ಅಪಾಯ ಹೆಚ್ಚಿರುತ್ತದೆ. ವೈದ್ಯಕೀಯವಾಗಿ 110 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವು ಮಾನವನ ಕಿವಿಗೆ ಅಸುರಕ್ಷಿತವಾಗಿರುತ್ತದೆ. ಏಕಾಏಕಿ ಕಿವಿಗಡಚಿಕ್ಕುವ ಶಬ್ದವಾದಾಗ ಕಿವಿ ತಮಟೆಗೆ ಹಾನಿಯಾಗುತ್ತದೆ. ಬ್ರಿಟಿಷ್‌ ಸ್ಟಾಂಡರ್ಡ್‌ ಪ್ರಕಾರ 80ರಿಂದ 90 ಡೆಸಿಬೆಲ್‌ನಷ್ಟು ಶಬ್ದವನ್ನು ಎಂಟು ಗಂಟೆಗಳ ಕಾಲ ಆಲಿಸುವುದು ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ
ಆದರೆ ಈ ಮಿತಿಯನ್ನು ಮೀರಿದರೆ ಅದು ಶ್ರವಣ ಶಕ್ತಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇತ್ತೀಚಿನ ವರದಿ ಪ್ರಕಾರ ಹೆಚ್ಚಿನ ಎಲ್ಲ ಪಟಾಕಿಗಳ ಶಬ್ದವು 100 ಡೆಸಿಬಲ್‌ಗಿಂತ ಮೇಲಿರುತ್ತದೆ. ಹಾಗಾಗಿ ಅದು ಶಾಶ್ವತ ಶ್ರವಣದೋಷಕ್ಕೆ ಕಾರಣವಾಗಬಹುದು. ಹಬ್ಬದ ಸಂದರ್ಭದಲ್ಲಿ ಮೋಜುಮಸ್ತಿಯಲ್ಲಿ ಮೈ ಮರೆಯುವಾಗ ಆರೋಗ್ಯದ ಕಾಳಜಿಯನ್ನು ಮರೆಯಬಾರದು. ಈಗ ಟ್ರೆಂಡ್‌ ಆಗಿರುವಂತಹ ಡಿಜೆ ನೈಟ್‌ಗಳಲ್ಲಿ ಬಳಸುವ ಶಬ್ದಕಾರಕಗಳು ಕಿವಿಗೆ ತೀವ್ರತರನಾದ ಹಾನಿಯನ್ನುಂಟುಮಾಡುತ್ತದೆ. ಮುಚ್ಚಿದ ಸ್ಥಳಗಳಲ್ಲಿನ ಅಬ್ಬರದ ಶಬ್ದಗಳು ಕಿವಿಗಳಿಗೆ ತೀರಾ ಅಪಾಯಕಾರಿ. ದೀರ್ಘ‌ಕಾಲ ಏರು ದ್ವನಿಯ ಶಬ್ದವನ್ನು ಆಲಿಸುವುದರಿಂದ ಕಿವಿಯಿಂದ ಮೆದುಳಿಗೆ ಸಂಕೇತಗಳನ್ನು ರವಾನಿಸುವ ನರತಂತುಗಳ ಕವಚವು ಹರಿದು ಹೋಗಬಹುದು, ಇದು ಒಂದು ಅಥವಾ ಎರಡೂ ಕಿವಿಗಳ ಆಲಿಸುವ ಸಾಮರ್ಥ್ಯದ ಕುಸಿತಕ್ಕೆ ಕಾರಣವಾಗಬಹುದು.

ಶಬ್ದ ಪ್ರೇರಿತ ಶ್ರವಣದೋಷವನ್ನು ಎರಡು ವಿಧವಾಗಿ ವಿಂಗಡಿಸಬಹುದು; ತಾತ್ಕಾಲಿಕ ಶಬ್ದ ಪ್ರೇರಿತ ದೋಷ ಹಾಗೂ ಶಾಶ್ವತ ಶಬ್ದ ಪ್ರೇರಿತ ದೋಷ. ತಾತ್ಕಾಲಿಕವೆಂದರೆ ಸರಿಪಡಿಸಬಹುದಾದಂತಹ ಶ್ರವಣದೋಷ. ಆದರೆ ಶಾಶ್ವತ ಶ್ರವಣದೋಷಕ್ಕೆ ಶ್ರವಣ ಸಂರಕ್ಷಕ ಸಾಧನ ಬಳಸುವುದು ಒಂದೇ ಮಾರ್ಗವಾಗಿರುತ್ತದೆ.

ಕಿವಿ ತೊಂದರೆಯನ್ನು ಉಂಟು ಮಾಡುವ ಕೆಲವೊಂದು ಕಾರಣಗಳು/ ಸೂಚನೆಗಳು
– ವಯೋಸಹಜ ಆಂತರಿಕ ಕಿವಿ ಕ್ಷೀಣತೆ: ವಯಸ್ಸು ಹೆಚ್ಚಾದಂತೆ ಒಳಕಿವಿ ಇಂದ ಮೆದುಳಿಗೆ ಸಂದೇಶವನ್ನು ರವಾನಿಸುವ ನರದ ಶಕ್ತಿಯು ಕ್ಷೀಣಿಸುತ್ತದೆ.ಇದರಿಂದಾಗಿ ಕಿವಿ ಕೇಳುವುದು ಕಡಿಮೆ ಆಗುತ್ತದೆ.
– ಮೆಲುಧ್ವನಿಯಲ್ಲಿ ಮಾತನಾಡಿದರೆ ಕೇಳದಿರುವುದು ಅಥವಾ ಅಸ್ಪಷ್ಟವಾಗಿ ಕೇಳುವುದು
– ಇನ್ನೊಬರ ಮಾತನ್ನು ಅರ್ಥೈಸಿಕೊಳ್ಳಲು ಕಷ್ಟವಾಗುವುದು
– ಜೋರಾದ ಶಬ್ದವನ್ನು ಸುದೀರ್ಘ‌ಕಾಲ ಆಲಿಸುವುದು
– ಆನುವಂಶೀಯತೆ
– ವೃತ್ತಿ ಸಂಬಂಧಿತ ಕಿವಿ ತೊಂದರೆಗಳು
– ಕೆಲವು ಔಷಧಗಳು: ಕೆಲವು ಅಂಟಿಬಿಯೋಟಿಕ್‌ಗಳು ಮತ್ತು ಅಂಟಿ ಮಲೇರಿಯ ಮಾತ್ರೆಗಳನ್ನು ದೀರ್ಘ‌ಕಾಲದವರೆಗೆ ಸೇವಿಸುವುದರಿಂದ ಒಳಕಿವಿಗೆ ತೊಂದರೆಯಾಗುವ ಸಂಭವವಿರುತ್ತದೆ.
– ಕಿವಿ ಗುಂಯಿಗುಡುವುದು
– ತಲೆ ಭಾಗಕ್ಕೆ ಬಲವಾದ ಪೆಟ್ಟು ಬೀಳುವುದು
– ಮಧ್ಯಕಿವಿಯ ಸೋಂಕುಗಳು
– ಕಿವಿ ತಮಟೆಯಲ್ಲಿ ರಂದ್ರಗಳು

ಶ್ರವಣ ದೋಷವನ್ನು ಮೂರು
ವಿಧವಾಗಿ ವಿಂಗಡಿಸಬಹುದು
ಹೊರ ಕಿವಿ ಮತ್ತು ಮಧ್ಯ ಕಿವಿಗೆ ತೊಂದರೆಯಾದರೆ ವಾಹಕ (ಕಂಡಕ್ಟಿವ್‌) ಶ್ರವಣ ದೋಷ; ಒಳ ಕಿವಿಗೆ ತೊಂದರೆ ಆದರೆ ಸಂವೇದನ (ಸೆನ್ಸರಿ ನ್ಯೂರಲ್‌) ಶ್ರವಣ ದೋಷ ಹಾಗೂ ಮಧ್ಯ ಕಿವಿ ಮತ್ತು ಒಳ ಕಿವಿ ಎರಡರಲ್ಲೂ ತೊಂದರೆ ಇದ್ದರೆ ಮಿಶ್ರ (ಮಿಕ್ಸೆಡ್‌) ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ .

ಲಭ್ಯವಿರುವ ಪರಿಹಾರೋಪಾಯಗಳು
– ಸೋಂಕು ಮತ್ತು ಸರಿಪಡಿಸಲಾಗುವಂತಹ ಶ್ರವಣ ತೊಂದರೆಗೆ ಔಷಧ ಮತ್ತು ಗುಳಿಗೆಗಳು ಇರುತ್ತದೆ.
– ಶ್ರವಣ ನಷ್ಟಕ್ಕೆ (ಒಳ ಕಿವಿ ತೊಂದರೆ ಇದ್ದಲ್ಲಿ ) ಶ್ರವಣ ಸಾಧನ ಅಥವಾ ಶ್ರವಣ ಸಹಾಯಕ ಸಾಧನೆಗಳನ್ನು ಬಳಸಬಹುದಾಗಿದೆ. ಈಗ ಮುಂದುವರಿದ ತಂತ್ರಜ್ಞಾನದಿಂದಾಗಿ ವಿವಿಧ ರೀತಿಯ ಶ್ರವಣ ಸಾಧನಗಳನ್ನು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಗ್ರಾಹಕೀಯಗೊಳಿಸಬಹುದಾಗಿದೆ.
– ಹಾನಿಕಾರಕ ಶಬ್ದಕಾರಕಗಳನ್ನು ಉಪಯೋಗಿಸದೆ ಇರುವುದು ಉತ್ತಮ ಅಥವಾ ಅಂತಹ ಸಂದರ್ಭದಲ್ಲಿ ಶ್ರವಣ ಸಂರಕ್ಷಕಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಉಪಯೋಗಿಸಬೇಕು.
– ಅತಿಯಾಗಿ ಶಬ್ದವನ್ನು ಉಂಟುಮಾಡುವ ಕಾರ್ಖಾನೆಗಳು ಊರ ಹೊರವಲಯದಲ್ಲಿ ಇರಬೇಕು ಮತ್ತು ಪ್ರತಿಯೊಬ್ಬ ಕಾರ್ಮಿಕನೂ ನಿಯಮಿತವಾಗಿ ಕಿವಿ ಪರೀಕ್ಷೆಗೆ ಒಳಗಾಗಬೇಕು.
-ಕೆಲಸ ಮಾಡುವ ಜಾಗದಲ್ಲಿ ಹೆಚ್ಚು ಗದ್ದಲವಿದ್ದಲ್ಲಿ 3 ಸೂಚನೆಗಳನ್ನು ಪಾಲಿಸುವುದು ಬಹುಮುಖ್ಯ
ವಾಗಿದೆ. ಮೊದಲನೆಯದಾಗಿ ಸದ್ದುಗದ್ದಲದ ಜಾಗದಿಂದ ದೂರವಿರಿ. ಎರಡನೆಯದು, ಸದ್ದನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ಮೊದಲೆರಡು ಹಂತಗಳನ್ನು ಅನುಸರಿಸಲು ಆಗುತ್ತಿಲ್ಲ ಎಂದಾಗ ಕಿವಿ ಸಂರಕ್ಷಕ ಸಾಧನಗಳನ್ನು ಅಗತ್ಯವಾಗಿ ಬಳಸಿ.
-ಯಾವುದೇ ರೀತಿಯ ಕಿವಿ ತೊಂದರೆಗಳಿಗೆ ಸ್ವಚಿಕಿತ್ಸೆ ಮಾಡದೆ ಹತ್ತಿರವಿರುವ ವೈದ್ಯರ ಸಲಹೆ ಪಡೆಯಬೇಕು

ಕೊನೆ ಮಾತು
ಜಗತ್ತಿನಲ್ಲಿ 360 ದಶಲಕ್ಷಕ್ಕೂ ಹೆಚ್ಚು ಜನ ಶ್ರವಣ ತೊಂದರೆಯಿಂದ ಬಳಲುತ್ತಿದ್ದರೂ ಶ್ರವಣ ನಷ್ಟ ಮತ್ತು ಕಿವಿ ತೊಂದರೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿರದೆ ಇರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಈಗ ಬದಲಾಗುತ್ತಿರುವ ಜೀವನ ಶೈಲಿಯೂ ಅನೇಕ ವಿಧದ ಕಿವಿ ತೊಂದರೆಗಳನ್ನು ಉಂಟುಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಅಂದಾಜಿನ ಪ್ರಕಾರ 2050ರ ಹೊತ್ತಿಗೆ 1.5 ಬಿಲಿಯನ್‌ ಜನರು ಶ್ರವಣ ದೋಷಕ್ಕೆ ತುತ್ತಾಗುವ ಸಾಧ್ಯತೆ ಇದೆ.ಶ್ರವಣದೋಷ ಒಂದು ಅಗೋಚರ ಅಂಗವೈಕಲ್ಯ. ಕಿವಿ ತೊಂದರೆಗಳು ಕೆಲವೇ ಸಂದರ್ಭಗಳಲ್ಲಿ ಮಾರಕವೇ ವಿನಾ ಎಲ್ಲ ಸಂದರ್ಭಗಳಲ್ಲೂ ಅಲ್ಲ.

ನವಜಾತ ಶಿಶುಗಳಲ್ಲಿ ಕಂಡುಬರುವಂತಹ ಜನ್ಮಜಾತ ಕಿವಿ ತೊಂದರೆಗಳನ್ನು ಮಗು ಜನಿಸಿದ ಒಂದು ತಿಂಗಳೊಳಗಾಗಿ ಪತ್ತೆ ಹಚ್ಚಿ, ಎರಡು ತಿಂಗಳು ತುಂಬುವ ಹೊತ್ತಿಗೆ ಶ್ರವಣ ದೋಷವನ್ನು ದೃಢೀಕರಿಸಿ, ಮೂರು ತಿಂಗಳ ಒಳಗೆ ಶ್ರವಣ ಸಾಧನದ ಸಹಾಯದಿಂದ ತರಬೇತಿಯನ್ನು ಪ್ರಾರಂಭಿಸಬೇಕು ಎಂಬ ನಿಯಮವನ್ನು ಯುಎನ್‌ಎಚ್‌ಎಸ್‌ (ಯೂನಿವರ್ಸಲ್‌ ನ್ಯೂ ಬಾರ್ನ್ ಹಿಯರಿಂಗ್‌ ಸ್ಕ್ರೀನಿಂಗ್‌) ಹೊರಡಿಸಿದೆ.ಇದರ ಅನ್ವಯ ಕಿವಿ ತೊಂದರೆಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ತರಬೇತಿ ಪಡೆದುಕೊಂಡಲ್ಲಿ ಶ್ರವಣ ದೋಷದಿಂದ ಬಳಲುವ ಮಗುವು ಇತರ ಸಾಮಾನ್ಯ ಮಗುವಿನಂತೆ ಮಾತನಾಡಬಲ್ಲದು ಮತ್ತು ಭಾಷಾ ಬೆಳವಣಿಗೆಯಲ್ಲೂ ಶೀಘ್ರ ಪ್ರಗತಿಯನ್ನು ಹೊಂದಬಹುದು. ಸಂವಹನ ಪ್ರಕ್ರಿಯೆಯಲ್ಲಿ ಕಿವಿ ಪ್ರಮುಖ ಪಾತ್ರವನ್ನುವಹಿಸುತ್ತದೆ. ಒಂದೊಮ್ಮೆ ಶ್ರವಣ ಶಕ್ತಿ ಕುಂಠಿತವಾದಲ್ಲಿ ಅದು ಸಂವಹನ ಸ್ಥಗಿತಕ್ಕೂ ಕಾರಣವಾಗಬಹುದು. ಇದು ಪರೋಕ್ಷವಾಗಿ ಜೀವನದ ಗುಣಮಟ್ಟವನ್ನು ಕುಗ್ಗಿಸಬಲ್ಲದು. ಆದುದರಿಂದ ಈ ಕುರಿತು ಜನಜಾಗೃತಿ ಹೆಚ್ಚಾಗಿ ಆವಶ್ಯಕತೆ ಇರುವವರೆಲ್ಲರೂ ಶ್ರವಣ ಸಾಧನವನ್ನು ಬಳಸುವಂತಾಗಿ ಸರ್ವರೂ ಖುಷಿಯಿಂದ ಜೀವಿಸುವಂತಾಗಲಿ.

“ಶ್ರವಣ ಸಾಧನ ಧರಿಸಿ ಮೌಲ್ಯಯುತ ಜೀವನ ನಡೆಸಿ’

ಇಎನ್‌ಟಿ/ ಶ್ರವಣ ತಜ್ಞರನ್ನು ಸಂಪರ್ಕಿಸಿ
ಕಿವಿ ಸಂಬಂಧಿತ ತೊಂದರೆಗೆ ಯಾರನ್ನು ಸಂಪರ್ಕಿಸಬೇಕು?
ಎಲ್ಲ ರೀತಿಯ ಕಿವಿ ತೊಂದರೆಗಳ ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಇಎನ್‌ಟಿ ತಜ್ಞ ವೈದ್ಯರು ಅಥವಾ ಶ್ರವಣ ತಜ್ಞರನ್ನು ಸಂಪರ್ಕಿಸುವುದು ಆವಶ್ಯಕ.

ದೀಪಿಕಾ ಕೆ.
ಕ್ಲಿನಿಕಲ್‌ ಸೂಪರ್ವೈಸರ್‌
ಸ್ಪೀಚ್‌ ಅಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.