ಕರಾಚಿ ಟೆಸ್ಟ್‌ : 172 ಓವರ್‌ ಆಡಿ ಡ್ರಾ ಸಾಧಿಸಿದ ಪಾಕಿಸ್ಥಾನ

Team Udayavani, Mar 16, 2022, 11:15 PM IST

ಕರಾಚಿ ಟೆಸ್ಟ್‌ : 172 ಓವರ್‌ ಆಡಿ ಡ್ರಾ ಸಾಧಿಸಿದ ಪಾಕಿಸ್ಥಾನ

ಕರಾಚಿ: ಈಗಿನ ಹೊಡಿಬಡಿ ಕ್ರಿಕೆಟ್‌ ಜಮಾನಾದಲ್ಲಿ ಟೆಸ್ಟ್‌ ಪಂದ್ಯವೊಂದನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದಕ್ಕೆ ಪಾಕಿಸ್ಥಾನ ಅತ್ಯುತ್ತಮ ನಿದರ್ಶನವೊದಗಿಸಿದೆ.

ಹೆಚ್ಚು-ಕಡಿಮೆ ಪೂರ್ತಿ ಎರಡು ದಿನ ಕ್ರೀಸ್‌ ಆಕ್ರಮಿಸಿಕೊಂಡು, 171.4 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ 7ಕ್ಕೆ 443 ರನ್‌ ಪೇರಿಸಿ, ಆಸ್ಟ್ರೇಲಿಯ ಎದುರಿನ ಕರಾಚಿ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡುವ ಮೂಲಕ ಪಾಕ್‌ ಗೆಲುವಿಗೂ ಮಿಗಿಲಾದ ಪ್ರತಿಷ್ಠೆಗೆ ಪಾತ್ರವಾಗಿದೆ.

506 ರನ್ನುಗಳ ಕಠಿನ ಗುರಿಯನ್ನು ಪಡೆದ ಪಾಕಿಸ್ಥಾನವನ್ನು ಬಚಾಯಿಸಿದ್ದು ಕೇವಲ ಮೂರೇ ಮಂದಿ. ನಾಯಕ ಬಾಬರ್‌ ಆಜಂ, ಕೀಪರ್‌ ಮೊಹಮ್ಮದ್‌ ರಿಜ್ವಾನ್‌ ಮತ್ತು ಆರಂಭಕಾರ ಅಬ್ದುಲ್ಲ ಶಫೀಕ್‌. ಇವರು ಒಟ್ಟು 907 ಎಸೆತಗಳನ್ನು ನಿಭಾಯಿಸಿ ನಿಂತರು.

ಇವರಲ್ಲಿ ಕಪ್ತಾನನ ಆಟವಾಡಿದ ಬಾಬರ್‌ ಆಜಂ 425 ಎಸೆತಗಳನ್ನು ಎದುರಿಸಿ 196 ರನ್‌ ಬಾರಿಸಿದರು (21 ಬೌಂಡರಿ, 1 ಸಿಕ್ಸರ್‌). ಇದು 4ನೇ ಕ್ರಮಾಂಕದಲ್ಲಿ ನಾಯಕನೊಬ್ಬ ಬಾರಿಸಿದ ಅತ್ಯಧಿಕ ರನ್‌ ದಾಖಲೆ. ಇಂಗ್ಲೆಂಡಿನ ಮೈಕಲ್‌ ಆಥರ್ಟನ್‌ ಅಜೇಯ 185 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

ರಿಜ್ವಾನ್‌ ಕೊಡುಗೆ ಅಜೇಯ 104 ರನ್‌ (177 ಎಸೆತ, 11 ಬೌಂಡರಿ, 1 ಸಿಕ್ಸರ್‌). ಅಬ್ದುಲ್ಲ ಶಫೀಕ್‌ 305 ಎಸೆತ ನಿಭಾಯಿಸಿ 96 ರನ್‌ ಬಾರಿಸಿದರು. ಶಫೀಕ್‌-ಬಾಬರ್‌ 3ನೇ ವಿಕೆಟಿಗೆ 228 ರನ್‌ ಪೇರಿಸುವ ಮೂಲಕ ಆಸ್ಟ್ರೇಲಿಯದ ಗೆಲುವಿನ ಯೋಜನೆಯನ್ನು ವಿಫ‌ಲಗೊಳಿಸಿದರು.

ಸರಣಿಯ ಮೊದಲ ಟೆಸ್ಟ್‌ ಕೂಡ ಡ್ರಾಗೊಂಡಿತ್ತು. ಅಂತಿಮ ಟೆಸ್ಟ್‌ ಮಾ. 21ರಂದು ಲಾಹೋರ್‌ನಲ್ಲಿ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-9 ವಿಕೆಟಿಗೆ 556 ಡಿಕ್ಲೇರ್‌ ಮತ್ತು 2 ವಿಕೆಟಿಗೆ 97 ಡಿಕ್ಲೇರ್‌. ಪಾಕಿಸ್ಥಾನ-148 ಮತ್ತು 7 ವಿಕೆಟಿಗೆ 443 (ಬಾಬರ್‌ 196, ರಿಜ್ವಾನ್‌ ಔಟಾಗದೆ 104, ಶಫೀಕ್‌ 96, ಲಿಯೋನ್‌ 112ಕ್ಕೆ 4, ಕಮಿನ್ಸ್‌ 75ಕ್ಕೆ 2).
ಪಂದ್ಯಶ್ರೇಷ್ಠ: ಬಾಬರ್‌ ಆಜಂ.

ಟಾಪ್ ನ್ಯೂಸ್

7

Viral News: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಎಸಿಯ ಗಾಳಿಗೆ ಗಾಢವಾಗಿ ನಿದ್ರಿಸಿದ ಕಳ್ಳ.!

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Shimoga; ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂಯುವಕನ ಮೇಲೆ ಹಲ್ಲೆ

Shimoga; ಸಹೋದ್ಯೋಗಿಯನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಹಿಂದೂಯುವಕನ ಮೇಲೆ ಹಲ್ಲೆ

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

Stock Market: ಸಾರ್ವಕಾಲಿಕ ದಾಖಲೆಯ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೂಚ್ಯಂಕ!

Stock Market: ಸಾರ್ವಕಾಲಿಕ ದಾಖಲೆಯ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೂಚ್ಯಂಕ!

Rupert Murdoch: 93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

Rupert Murdoch: 93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

ಮದುವೆ ಮೆರವಣಿಗೆಯ ಟ್ರಾಕ್ಟರ್ ಟ್ರಾಲಿ ಪಲ್ಟಿ: ನಾಲ್ವರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣ

ಮದುವೆ ಮೆರವಣಿಗೆಯ ಟ್ರಾಕ್ಟರ್ ಟ್ರಾಲಿ ಪಲ್ಟಿ: ನಾಲ್ವರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

NamvsOmn: ಲೋ ಸ್ಕೋರ್‌ ಥ್ರಿಲ್ಲರ್ ನಲ್ಲಿ ಮಿಂಚಿದ ವಿಸ್ಸೆ: ಸೂಪರ್‌ ಓವರ್‌ ಗೆದ್ದ ನಮೀಬಿಯಾ

1-sadsad

Cricket; ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಆಲ್‌ರೌಂಡರ್‌ ವೆಂಕಟೇಶ್‌ ಅಯ್ಯರ್‌

1-aaasasas

T20 World Cup ಕ್ರಿಕೆಟ್‌; ದಕ್ಷಿಣ ಆಫ್ರಿಕಾ-ಶ್ರೀಲಂಕಾ: ಮೊದಲ ಬಿಗ್‌ ಗೇಮ್‌

tennis

French Open-2024 ; ಬೋಪಣ್ಣ ಜೋಡಿಗೆ ಗೆಲುವು

Hockey India

Pro Hockey League: ಗ್ರೇಟ್‌ ಬ್ರಿಟನ್‌ ವಿರುದ್ಧ ಭಾರತಕ್ಕೆ ಸೋಲು

MUST WATCH

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

udayavani youtube

ರಘುಪತಿ ಭಟ್ ಅವರ ಮನದಾಳದ ಮಾತು

ಹೊಸ ಸೇರ್ಪಡೆ

MLC Election; ಹಿಂದೆ ಸರಿದಿರುವುದಾಗಿ ಪ್ರಚಾರ: ರಘುಪತಿ ಭಟ್‌ ದೂರು

MLC Election; ಹಿಂದೆ ಸರಿದಿರುವುದಾಗಿ ಪ್ರಚಾರ: ರಘುಪತಿ ಭಟ್‌ ದೂರು

7

Viral News: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಎಸಿಯ ಗಾಳಿಗೆ ಗಾಢವಾಗಿ ನಿದ್ರಿಸಿದ ಕಳ್ಳ.!

ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌

ಕೆ.ಸಿ.ಇ.ಟಿ ಫ‌ಲಿತಾಂಶ: ಜ್ಞಾನಸುಧಾ ಎಂಜಿನಿಯರಿಂಗ್‌ನಲ್ಲಿ 18 ರ್‍ಯಾಂಕ್‌

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: ಕೆಸರು ಗದ್ದೆಯಂತಾದ ತರಕಾರಿ ಮಾರಾಟ ಕೇಂದ್ರ

Raichur: Power outage; Voting by torchlight

Raichur: ವಿದ್ಯುತ್ ಅಡಚಣೆ; ಟಾರ್ಚ್ ಬೆಳಕಿನಲ್ಲಿ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.