ಹನುಮಂತ ದೇಗುಲ ಲೋಕಾರ್ಪಣೆ ಇಂದು

ತಾಲೂಕು ನಾಮಧಾರಿ ಸಮಾಜ ಸಂಘದಿಂದ ಸಂಪೂರ್ಣ ಶಿಲಾಮಯ ಗರ್ಭಗುಡಿ ನಿರ್ಮಾಣ

Team Udayavani, Apr 14, 2022, 5:34 PM IST

23

ಭಟ್ಕಳ: ಶಿರಾಲಿಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಜ್ಜುಗೊಂಡಿದ್ದು ಭಟ್ಕಳ ತಾಲೂಕಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಭಟ್ಕಳದಲ್ಲಿ ಪುರಾತನ ಆಂಜನೇಯನ ದೇವಾಸ್ಥಾನಗಳಿದ್ದು ಅವುಗಳಲ್ಲಿ ಶಿರಾಲಿಯ ಶ್ರೀ ಕ್ಷೇತ್ರ ಹಳೇಕೋಟೆ ಹನುಮಂತ ದೇವಸ್ಥಾನವೂ ಒಂದು. ಇದು ಸುಮಾರು 500 ವರ್ಷಗಳ ಇತಿಹಾಸ ಹೊಂದಿದ್ದು ರಾಜರ ಕಾಲದಲ್ಲಿ ಉಚ್ಛಾಟನೆಯ ಸ್ಥಿತಿಯಲ್ಲಿದ್ದ ದೇವಾಲಯವಾಗಿದೆ.

ಗೇರುಸೊಪ್ಪ ಸೀಮೆಯ ಅರಸ ಸಾಳುವ ಕೃಷ್ಣದೇವನ ಆಳ್ವಿಕೆಯಲ್ಲಿ ಹಳೇಕೋಟೆ ಪ್ರದೇಶವು ಉಗ್ರಾಣ ವಾಗಿತ್ತು. ನಂತರ ಕೋಟೆಯ ಉಸ್ತುವಾರಿಯನ್ನು ಅವರ ಶಿಷ್ಯರಾದ ಸಂಗೀತ ರಾಯನಿಗೆ ವಹಿಸಿಕೊಟ್ಟಿದ್ದು ಸಂಗೀತ ರಾಯರು ತಮ್ಮ ಸೇನಾ ನಾಯಕ ತಿಮ್ಮ ನಾಯಕನನ್ನು ಕೋಟೆಯ ರಕ್ಷಣೆಗೆ ನೇಮಿಸಿದ್ದನು ಎನ್ನುವುದು ದೇವಾಲಯದ ಆವರಣದಲ್ಲಿರುವ 1530ನೇ ಸಾಲಿನ ವೀರಗಲ್ಲು ಶಾಸನ ಹೇಳುತ್ತದೆ.

ಶಾಸನದಲ್ಲಿರುವ ಒಕ್ಕಣೆಯಂತೆ ಮಹಾಮಂಡಲಾಧೀಶ್ವರ ಒಡೆಯ ದೇವರಾಯನು ಕೋಟೆಯ ಮೇಲೆ ದಾಳಿ ಮಾಡಿ ಒಳಾಂಗಣದಲ್ಲಿರುವ ರಾಜ ಮನೆತನದವರಿಂದ ಪೂಜಿಸಲ್ಪಡುತ್ತಿದ್ದ ಹನುಮಂತ ದೇವರ ದೇವಸ್ಥಾನವೂ ಕೂಡಾ ಅವಸಾನವಾಗಿ ಶ್ರೀದೇವರ ವಿಗ್ರಹ ಮಣ್ಣಿನಲ್ಲಿ ಹೂತು ಹೋಗಿತ್ತು. ದೈವ ಪ್ರೇರಣೆಯಂತೆ ಮೇಲುಕೋಟೆಯ ಮಠಾಧೀಶರಾದ ಶ್ರೀಮದ್‌ ರಾಮಾನುಜಾಚಾರ್ಯರ ಶಿಷ್ಯವರ್ಗದ ಇಕ್ಕೇರಿಯ ಶ್ರೀಮದ್‌ ತಿರುಮಲ ತಾತಾಚಾರ್ಯರು ಈ ಮಾರ್ಗದ ಮೂಲಕ ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಿರುವಾಗ ಕೋಟೆಯ ಭಾಗದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ಶ್ರೀ ಹನುಮಂತ ದೇವರ ವಿಗ್ರಹವನ್ನು ತಮ್ಮ ದಿವ್ಯ ದೃಷ್ಟಿಯಲ್ಲಿ ನೋಡಿ ಮೇಲಕ್ಕೆತ್ತಿ ಸಾರದ ಹೊಳೆಯ ತಟದಲ್ಲಿ ವರ್ತುಲಾಕಾರವಾಗಿ ಹರಿಯುವ ಪ್ರಶಸ್ಥವಾದ ಇಂದಿನ ದೇವಾಲಯವಿರುವ ಸ್ಥಳದಲ್ಲಿ ವೈಭವೋಪೇತವಾಗಿ ಸ್ಥಾಪನೆ ಮಾಡಿದರು.

ಅಂದಿನಿಂದ ಈ ಸ್ಥಳದಲ್ಲಿ ನಾಮಧಾರಿ ಸಮಾಜ ಬಾಂಧವರು ತಮ್ಮ ಭಾಗದ ಕುಲದೇವರಾಗಿ ಪೂಜಿಸಿಕೊಂಡು ಬಂದಿದ್ದು ಇಂದಿಗೂ ಆ ಪರಂಪರ ಮುಂದುವರಿದಿದೆ. ಮಾವಳ್ಳಿ ಹೋಬಳಿ ವ್ಯಾಪ್ತಿಯ ಹಿಂದೂ ನಾಮಧಾರಿ ಸಮಾಜ ಬಾಂಧವರು ತಮ್ಮ ಸಮಾಜದ ಪೂಜೆ ವಗೈರೆಗಳನ್ನು ಹಾಗೂ ಆಡಳಿತವನ್ನು ನೋಡಿಕೊಂಡು ಬಂದಿರುತ್ತಾರೆ. ನಂತರ 1983ರಿಂದ ಮುರುಡೇಶ್ವರ ಮತ್ತು ಶಿರಾಲಿ ಸೀಮೆಯ ಸಮಾಜದ ಅಭಿವೃದ್ಧಿ ಸಂಘ ನಿರ್ಮಿಸಿಕೊಂಡು ದೇವಸ್ಥಾನದ ಮೊಕ್ತೇಸರ ಮಂಡಳಿ ರಚಿಸಿ ದೇವಸ್ಥಾನದ ಸಂಪೂರ್ಣ ಆಡಳಿತ, ಆಚಾರ-ವಿಚಾರಗಳನ್ನು ನೋಡಿಕೊಂಡು ಬಂದಿದೆ.

ಅಷ್ಟಮಂಗಲ ಪ್ರಶ್ನೆ: ಸಮಾಜದ ಒಟ್ಟಾಭಿಪ್ರಾಯದಂತೆ ವಿಧ್ವಾಂಸ ಕೇರಳದ ವಿಷ್ಣುಮೂರ್ತಿ ನಂಬೂದರಿಯವರ ಮುಖೇನ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ದೇವರ ಗರ್ಭಗ್ರಹವನ್ನು ಶಿಲಾಮಯವಾಗಿಸಬೇಕು ಎನ್ನುವ ಉತ್ತರ ದೊರೆತಿತ್ತು. ಅದರಂತೆ ಕುಲಗುರು ಶ್ರೀ ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ 2017ರಲ್ಲಿ ನೂತನ ಶಿಲಾಮಯ ದೇವಾಲಯದ ನಿರ್ಮಾಣಕ್ಕೆ ಅಡಿಗಲ್ಲನ್ನಿಡಲಾಯಿತು.

ಅಂದಿನಿಂದ ನಿರಂತರವಾಗಿ ದೇವಾಲಯದ ನಿರ್ಮಾಣ ಕಾರ್ಯ ಆಡಳಿತ ಹಾಗೂ ಜೀರ್ಣೋದ್ಧಾರ ಕಮಿಟಿ ಉಸ್ತುವಾರಿಯಲ್ಲಿ ನಡೆಯುತ್ತಾ ಬಂದಿದ್ದು, ಇದೀಗ ಮುಕ್ತಾಯಗೊಂಡು ದೇವಾಲಯದ ಪುನರ್‌ ಪ್ರತಿಷ್ಠಾ ಮಹೋತ್ಸವಕ್ಕೆ ಸಜ್ಜುಗೊಂಡಿದೆ.

ಶಿಲಾಮಯ ದೇವಾಲಯದ ಶೈಲಿ: ದೇವಸ್ಥಾನವನ್ನು ಪ್ರಾಚೀನ ಹಿಂದೂ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು ಸುಪ್ರಸಿದ್ಧ ವಾಸ್ತುಶಾಸ್ತ್ರ ತಜ್ಞ ಪ್ರಸಾದ ಮುನಿಯಂಗಳ ಕುಕ್ಕೆಸುಬ್ರಹ್ಮಣ್ಯ ಅವರ ಮಾರ್ಗದರ್ಶ ನದಲ್ಲಿಯೇ ನಿರ್ಮಾಣವಾಗಿದೆ. ಸುಂದರವಾದ ಕೆತ್ತನೆ, ಕುಸುರಿ ಕೆಲಸ ಎಲ್ಲವೂ ಸುಂದರವಾಗಿ ಮೂಡಿ ಬಂದಿದೆ. ಈ ಭಾಗದ ಪುಣ್ಯ ಕ್ಷೇತ್ರವಾಗಿ ಪ್ರವಾಸೀ ತಾಣವಾಗುವುದಕ್ಕೆ ಸಜ್ಜಾಗಿ ನಿಂತಿದೆ.

ಪರಿವಾರ ದೇವರು: ದೇವಾಲಯದ ಎದುರುಗಡೆ ಇರುವ ಸುಮಾರು 350 ವರ್ಷಗಳ ಹಳೆಯ ಅರಳೀ ಮರವನ್ನು ಹಾಗೆಯೇ ಇಟ್ಟುಕೊಳ್ಳಲಾಗಿದ್ದು ದೇವಾಲಯಕ್ಕೆ ಇದುವೇ ಮೆರಗು ನೀಡುತ್ತಿದೆ. ದೇವಾಲಯದ ಆವರಣದಲ್ಲಿರುವ ಸನ್ಯಾಸಿ ತುಳಸಿಯು ಅತ್ಯಂತ ಪವಿತ್ರವಾಗಿದ್ದು ಅನಾ ಕಾಲದಿಂದಲೂ ದೈವಿಕ ಶಕ್ತಿ ಹೊಂದಿದೆ. ವಿವಿಧ ಸಮಾಜದವರು ತಾವು ಮಾಡುವ ಹರಿಸೇವಾ ಕಾರ್ಯದ ಕಳಸ ಪ್ರತಿಷ್ಠಾಪನೆಯನ್ನು ಇದೇ ತುಳಸಿಯ ಮುಂಭಾಗದಲ್ಲಿ ಮಾಡುವುದು ತುಳಸಿಯ ದೈವಿಕ ಶಕ್ತಿಯ ಪ್ರತೀಕವಾಗಿದೆ. ಭಕ್ತಾದಿಗಳು ಬಲಿ ಪೂಜೆ ನೆರವೇರಿಸಲು ಕ್ಷೇತ್ರ ದೇವತೆ ಮಾರಿ ಬೊಮ್ಮನ ಸ್ಥಳವಿದ್ದು ಇದೂ ಕೂಡಾ ಆಸ್ತಿಕರ ಶಕ್ತಿ ಸ್ಥಳವಾಗಿದೆ.

-ಆರ್‌.ಕೆ. ಭಟ್‌

ಟಾಪ್ ನ್ಯೂಸ್

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

Election; ಮೊಹಬ್ಬತ್‌ ಕೀ ದುಕಾನ್‌ನಲ್ಲಿ ಫೇಕ್‌ ವೀಡಿಯೋಗಳು ಮಾರಾಟ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್‌ಡಿಎ ಗ್ಯಾರಂಟಿ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.