ಬದುಕು ಸದಾ ಸಾಧನೆಯತ್ತ ಕೇಂದ್ರೀಕೃತವಾಗಲಿ


Team Udayavani, Apr 21, 2022, 6:15 AM IST

ಬದುಕು ಸದಾ ಸಾಧನೆಯತ್ತ ಕೇಂದ್ರೀಕೃತವಾಗಲಿ

“ಮನುಷ್ಯಾಣಾಂ ನರ ಜನ್ಮ ದುರ್ಲಭಂ’ ಎಂಬ ಸನಾತನ ಧರ್ಮೋಕ್ತಿಯಂತೆ ಮಾನವ ಜನ್ಮ 84 ಜೀವರಾಶಿಗಳಲ್ಲಿ ಉತ್ಕೃಷ್ಟವಾದದ್ದು. ನಮ್ಮ ಜನ್ಮಜನ್ಮಾಂತರಗಳ ಸುಕೃತ ಫ‌ಲದಿಂದ ದೊರಕುವುದು ಎಂದು ಸಾರುತ್ತವೆ ನಮ್ಮ ಧರ್ಮಶಾಸ್ತ್ರಗಳು. ಆದ ಕಾರಣ ನಮ್ಮ ಬದುಕಿಗೆ ಏನಾದರೂ ಸಾಧನೆ ಸೇರಿದರೆ ಬದುಕು ಅರ್ಥಪೂರ್ಣವಾಗುವುದು, ಘನ ವೆತ್ತವಾಗುವುದು. ಬಾಳು ಚಿನ್ನದ ಪುಟವಿಟ್ಟಂತೆ ಸುವರ್ಣಮಯವಾದರೆ ಸಮಾಜ ಶೃಂಗಾರಯಮಯ ಹೊಂದು ವುದು. ಇದಕ್ಕಾಗಿ “ಮಾನವ ಜನ್ಮ ಬಹು ದೊಡ್ಡದು ಇದ ಹಾಳ ಮಾಡದಿರಿ ಹುಚ್ಚಪ್ಪಗಳಿರಾ’ ಎಂದು ಎಚ್ಚರಿಸಿದ್ದು ದಾಸವರೇಣ್ಯರಾದ ಪುರಂದರದಾಸರು.

ನಾವು ಮಾಡುವ ಕ್ರಿಯೆ/ ಕಾರ್ಯಗಳ ಒಂದು ಹಂತವನ್ನು/ ಭಾಗವನ್ನು/ ಅಂತಿಮ ಸ್ವರೂಪವನ್ನು/ ಫ‌ಲಿತಾಂಶ ವನ್ನು… ಸಾಧನೆಯನ್ನಾಗಿ ಪರಿಗಣಿಸು ತ್ತೇವೆ. ಇಲ್ಲಿ ಕೆಲವೊಮ್ಮೆ ಸೋಲು, ನಕಾರಾತ್ಮಕತೆ ಉಂಟಾದರೂ ಪರಿಸ್ಥಿತಿ/ಗತಿ ಆಧರಿಸಿ ಸಾಧನೆಯಾಗುವುದು ಇದೆ. ಹೀಗೆ ಸಾಧನೆಯನ್ನು ನಾನಾ ಬಗೆಯಲ್ಲಿ ಅಥೆೃìಸಬಹುದು.

ಸಾಧನೆಯ ತುಡಿತ ಹುಟ್ಟುವುದು ಅಂತಃಕರಣದಿಂದಲೇ. ನಮ್ಮ ಅಂತರಂಗವೇ ಸಾಧನೆಯ ಉಗಮಸ್ಥಾನವಾಗಿರುತ್ತದೆ. ಇಲ್ಲಿ ಜನ್ಮ ತಾಳಿದ ಸಾಧನೆಯ ತುಡಿತವು ಸಾಧನೆಯ ಪ್ರಾಪ್ತಿಗೆ ತಮ್ಮ ತಮ್ಮ ವೃತ್ತಿ, ಹವ್ಯಾಸ, ಆಸಕ್ತಿ, ಸಾಮಾಜಿಕ ಚಟುವಟಿಕೆ, ಸುತ್ತಮುತ್ತಲ ಪರಿಸರ, ಸಾಧಕರ ಜೀವನ… ಇವೆಲ್ಲವು ಪ್ರೇರಣಾಸ್ರೋತವಾಗಿರುತ್ತದೆ. ಸಾಧಿಸುವ ಛಲವಿದ್ದರೆ ಎಲ್ಲೂ ಯಾವ ರಂಗದಲ್ಲಿಯೂ ಸಾಧಿಸಬಹುದು. ಅದರೆ ಹಂಬಲ, ತುಡಿತ ಮಾತ್ರ ಸದಾ ಜಾಗೃತಾವಸ್ಥೆಯಲ್ಲಿರಬೇಕಾಗಿರುವುದು ಅನಿವಾರ್ಯ.ಸತತ ಪರಿಶ್ರಮ, ಪ್ರಯತ್ನಗಳು ಸಾಧನೆಯೆ ಡೆಗೆ ಕೊಂಡೊಯ್ಯುವ ಸಾಧನಗಳಾಗಿವೆ. ಅದೃಷ್ಟ ಎಂಬುದು ನಮ್ಮ ಕೆೃಯಲ್ಲಿರದ ಮಾಪನ. ಆದರೆ ಪ್ರಯತ್ನಪಡುವಿಕೆ ನಮ್ಮ ಕೆೃಯಲ್ಲಿ ಸ್ಥಿತವಾಗಿರುವುದರಿಂದ ಪ್ರಯತ್ನ ಮಾತ್ರ ಅವಿರತವಾಗಿ, ನಿಯಮಿತವಾಗಿ ಸಾಗ ಬೇಕು. ಪ್ರಯತ್ನಗಳು ವಿಫ‌ಲವಾಗ ಬಹುದು ಅದರೆ ಪ್ರಯತ್ನ ಮಾಡದೇ ಇರುವುದು ಸರ್ವಥಾ ಸಲ್ಲದು.

ತ್ಯಾಗಶೀಲತೆ, ಸಂಯಮ, ಶಿಸ್ತು, ಮೌನ, ಧನಾತ್ಮಕತೆ, ಸತ್‌ಚಿಂತನೆ, ಸ್ವಾಭಿಮಾನ, ಆತ್ಮಗೌರವ, ಸರಳತೆ, ಮತ್ಸರ ಪಡದಿರುವಿಕೆ ಇವೆಲ್ಲ ಸಾಧನೆಯ ವಜ್ರಾಯುಧಗಳು. ಸಾಧನೆಯು ಕೆಲವು ಬಾರಿ ದಿಢೀರ್‌ ಆಗಿ ದೊರಕಲೂಬಹುದು. ಆದರೆ ಈ ರೀತಿ ಪ್ರಾಪ್ತವಾದ ಸಾಧನೆಯ ವಿವಿಧ ಆಯಾಮಗಳ ಘನತೆ ಮಾತ್ರ ಸೀಮಿತ ವಾದವುಗಳಾಗಿರುತ್ತವೆ. ಅದೇ ಸುದೀರ್ಘ‌ ಪರಿಶ್ರಮದ ಸಾಧನೆಗಳ ಧೀಮಂತಿಕೆಯ ಹೊಳಪು ವರ್ಣಮಯವಾಗಿರುವುದು ನಿಚ್ಚಳ. ಅದಕ್ಕಾಗಿ ಹಿರಿಯರು “ತಾಳಿದವನು ಬಾಳಿ-ಯಾನು’ ಎಂದಿರುವುದು. ಸಾಧಕರ ಸಮಗ್ರ ಜೀವನವನ್ನು ಸಾಧಿಸುವವನು ದಾರಿದೀಪವನ್ನಾಗಿಸಿಕೊಳ್ಳಬೇಕು. ಗುರುವಿನ/ ದಾರಿ ದೀಪಕನ ಅಲಭ್ಯತೆಯಲ್ಲಿ ಸ್ವಾಮೀ ವಿವೇಕಾನಂದರ ವಾಣಿಯಂತೆ ತಮ್ಮ ತಮ್ಮ ಆತ್ಮವನ್ನೇ ಗುರುವನ್ನಾಗಿಸಿ ಆತ್ಮಜ್ಞಾನದಂತೆ ನಡೆಯುವುದು ಒಳಿತು, ಶುಭಕರವೂ ಹೌದು. ಯಾಕೆಂದರೆ ಆತ್ಮದ ಶಕ್ತಿ ಅಂತಹುದು. ಇನ್ನು ಕೇವಲ ಸುದ್ದಿ, ಪ್ರತಿಷ್ಠೆ, ಗುರುತಿಸುವಿಕೆಗಾಗಿ ಸಾಧಿಸುವುದನ್ನು ಬಿಟ್ಟು ನಿಸ್ವಾರ್ಥ, ಆತ್ಮತೃಪ್ತಿಗಾಗಿ ಸಾಧನೆಗೈ ದರೆ ಈ ಸಾಧನೆಗಳ ಮಹತ್ವವೂ ಸರ್ವೋತ್ಕೃ ಷ್ಟವಾಗಿರುತ್ತದೆ. ಸಾಧನೆಯ ಪಥದಲ್ಲಿ ಸಾಗುವಾಗ ಟೀಕೆ-ಟಿಪ್ಪಣಿಗಳು ಸ್ವಾಭಾ ವಿಕ. ಟೀಕೆಗಳು ರಚನಾತ್ಮಕವಾಗಿದ್ದರೆ ಸ್ವೀಕರಿಸಬೇಕು. ಟೊಳ್ಳು, ಪೊಳ್ಳು ಟೀಕೆಗಳಿಗೆ ಬೆಲೆಯೇ ನೀಡಬೇಕಾಗಿಲ್ಲ. ಇವುಗಳೆಲ್ಲ ಗೌಣ. ನಗಣ್ಯವೇ ಇವೆಲ್ಲವುಗಳಿಗೂ ಮದ್ದು. ಬದುಕಿನೊಂದಿಗೆ ಹೋರಾಟ- ಸಂಘರ್ಷ ಮಾಡಬೇಕಾಗುವ ಪ್ರಮೇ ಯವೂ ಈ ಸಂದರ್ಭ ಎದುರಾಗುವ ಸಂಭವವಿರುವಾಗ ಇವನ್ನು ಎದುರಿಸುವ ಛಾತಿ ಹೊಂದಿರಬೇಕು.

ಅಹಂಕಾರ, ಮದ, ದರ್ಪ ಮಾನವನ ವ್ಯಕ್ತಿತ್ವದ ಪರಮ ವೆೃರಿಗಳು. ಇವುಗಳು ವ್ಯಕ್ತಿತ್ವದಲ್ಲಿ ನುಸುಳಿದರೆ ಸಮಗ್ರ ವ್ಯಕ್ತಿತ್ವವೇ ನಾಶವಾದಂತೆ. ಆದ್ದರಿಂದ ಸಾಧನೆಗೈ ಯುವ ವೇಳೆಯಾಗಲೀ ಸಾಧಿಸಿದ ಮೇಲಾಗಲಿ ಕಿಂಚಿತ್‌ ಅಹಂಕಾರ, ಮದ, ದರ್ಪ ಸುಳಿಯಲು ಸರ್ವಥಾ ಅವಕಾಶ ನೀಡಬಾರದು. ಸಾಧನೆಯು ವೈಯಕ್ತಿಕ ವಾಗಿ ಮಾತ್ರಲ್ಲದೆ ನಾಡಿಗೂ, ರಾಷ್ಟ್ರಕ್ಕೂ ಅಮೃತ ಸಿಂಚನ ವರ್ಷಿಸುವ ಅಮೇಯ ಘಳಿಗೆ ಸುಸಂದರ್ಭಗಳು. ಆದ ಕಾರಣ ಎಳವೆಯಿಂದಲೇ ಬದುಕಿನ ಗಮ್ಯ ಸಾಧನೆಯತ್ತ ಇರಲಿ.

- ಸಂದೀಪ್‌ ನಾಯಕ್‌ ಸುಜೀರ್‌, ಮಂಗಳೂರು

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.