ಇದು ಆ ‘ಕಟ್ಟಿಂಗ್‌ ಶಾಪ್‌’ ಅಲ್ಲ!


Team Udayavani, May 6, 2022, 3:01 PM IST

ಇದು ಆ ‘ಕಟ್ಟಿಂಗ್‌ ಶಾಪ್‌’ ಅಲ್ಲ!

“ಕಟ್ಟಿಂಗ್‌ ಶಾಪ್‌’ – ಹೀಗೊಂದು ಹೆಸರಿನಲ್ಲಿ ಹೊಸಬರ ಸಿನಿಮಾವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಸಿನಿಮಾದ ಟೈಟಲ್‌ “ಕಟ್ಟಿಂಗ್‌ ಶಾಪ್‌’ ಅಂತಿದ್ದರೂ, ಇದು ಹೇರ್‌ ಕಟ್ಟಿಂಗ್‌ ಮಾಡುವ ಅಥವಾ ಸೆಲೂನ್‌ ಶಾಪ್‌ ಗಳ ಬಗ್ಗೆ ಮಾಡಿರುವ ಸಿನಿಮಾವಂತೂ ಖಂಡಿತಾ ಅಲ್ಲ. ಇದು ಸಿನಿಮಾ ಎಡಿಟರ್‌ (ಸಂಕಲನಕಾರ) ಒಬ್ಬನ ಲೈಫ್ ಸ್ಟೋರಿ ಕುರಿತಾದ ಸಿನಿಮಾ.

ಸಿನಿಮಾದಲ್ಲಿ ಹೀರೋ ಮುಚ್ಚಿ ಹೋಗಿದ್ದ ತನ್ನ ಮಾವನ ಹಳೇ ಸೆಲೂನ್‌ ಶಾಪ್‌ನಲ್ಲಿ ಸಿನಿಮಾ ಎಡಿಟಿಂಗ್‌ ಸೂಟ್‌ ಹಾಕಿಕೊಂಡು ಕೆಲಸ ಶುರು ಮಾಡುತ್ತಾನೆ. ಅಲ್ಲಿಂದ ಅವನ ಲೈಫ್ ಏನೇನು ಟರ್ನ್ ತೆಗೆದುಕೊಳ್ಳುತ್ತದೆ ಅನ್ನೋದೇ ಸಿನಿಮಾ. ಹಾಗಾಗಿ, ಸಬ್ಜೆಕ್ಟ್  ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಸಿನಿಮಾಕ್ಕೆ ಇಂಥದ್ದೊಂದು ಟೈಟಲ್‌ ಇಟ್ಟಿದ್ದೇವೆ ಎಂಬುದು ಚಿತ್ರತಂಡದ ಮೊದಲ ಮಾತು.

ಸಿನಿಮಾ ಎಡಿಟರ್‌ಗಳ ಕುರಿತಾದ ಕಥೆ “ಕಟಿಂಗ್‌ ಶಾಪ್‌’ ಸಿನಿಮಾದಲ್ಲಿರುವುದರಿಂದ, ಈ ಸಿನಿಮಾದ ಮೊದಲ ಟ್ರೇಲರ್‌ ಅನ್ನು ಕನ್ನಡ ಚಿತ್ರರಂಗದ ಎಡಿಟರ್‌ ಗಳ ಕೈಯಿಂದಲೇ ಚಿತ್ರತಂಡ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಸಂಕಲನಕಾರರಾದ ಬಿ. ಎಸ್‌ ಕೆಂಪರಾಜು, ಕ್ರೇಜಿಮೈಂಡ್ಸ್‌ ಶ್ರೀ, ಹರೀಶ್‌ ಕೊಮ್ಮೆ, ಸಾಗರ್‌ ಗಣೇಶ್‌ ಮೊದಲಾದವರು “ಕಟ್ಟಿಂಗ್‌ ಶಾಪ್‌’ ಟ್ರೇಲರ್‌ ಬಿಡುಗಡೆಗೊಳಿಸಿದರು.

ಇದನ್ನೂ ಓದಿ:ಸೌಂಡು ಮಾಡುತ್ತಿದೆ ‘ಬೈರಾಗಿ’ ಸಾಂಗ್‌

ಈ ಹಿಂದೆ “ಆಪರೇಶನ್‌ ಅಲಮೇಲಮ್ಮ’, “ಮಾಯಾಬಜಾರ್‌’, “ಅಳಿದು ಉಳಿದವರು’, “ರಾಂಚಿ’ ಮೊದಲಾದ ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್‌ ಮತ್ತು ಗೀತ ಸಾಹಿತಿಯಾಗಿ ಕೆಲಸ ಮಾಡಿದ ಅನುಭವವಿರುವ ಪವನ್‌ ಭಟ್‌, “ಕಟ್ಟಿಂಗ್‌ ಶಾಪ್‌’ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯದ ಬರೆದು ಮೊದಲ ಬಾರಿಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಯು-ಟ್ಯೂಬ್‌ ಚಾನೆಲ್‌ನಲ್ಲಿ ಒಂದಷ್ಟು ಕಿರುಚಿತ್ರಗಳ ಮೂಲಕ ಗುರುತಿಸಿಕೊಂಡಿರುವ, “ಆಪರೇಷನ್‌ ಅಲಮೇಲಮ್ಮ’, “ಮಯಾ ಬಜಾರ್‌’ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್‌ ಈ ಸಿನಿಮಾಕ್ಕೆ ಕಥೆ ಬರೆದು, ಸಂಗೀತ ನೀಡಿ ಜೊತೆಗೆ ತೆರೆಮೇಲೆ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಅರ್ಚನಾ ಕೊಟ್ಟಿಗೆ, ದೀಪಕ್‌ ಭಟ್‌, ಅಭಿಷೇಕ್‌ ಸಾವಳಗಿ, ನವೀನ್‌ ಕೃಷ್ಣ, ಭಗವಾನ್‌, ಓಂ ಪ್ರಕಾಶ್‌ ರಾವ್‌, ವತ್ಸಲಾ ಮೋಹನ್‌, ಕೆ. ಉಮೇಶ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ”

ಯಂಗ್‌ ಥಿಂಕರ್ಸ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಕೆ. ಉಮೇಶ್‌ ಮತ್ತು ಗಣೇಶ್‌ ಐತಾಳ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಸ್ಕಂದ ರತ್ನಂ ಛಾಯಾಗ್ರಹಣವಿದೆ. ಸದ್ಯ “ಕಟ್ಟಿಂಗ್‌ ಶಾಪ್‌’ ಟ್ರೇಲರ್‌ ಬಿಡುಗಡೆ ಮಾಡಿರುವ ಚಿತ್ರತಂಡ, ಇದೇ ಮೇ. 20ರಂದು ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.