ಚೀನದಲ್ಲಿ ರೋಬೋಗಳಿಂದ ಅಣೆಕಟ್ಟು ನಿರ್ಮಾಣ!

ಟಿಬೆಟಿಯನ್‌ ಪ್ರಸ್ಥಭೂಮಿಯಲ್ಲಿ 590 ಅಡಿ ಎತ್ತರದ ಡ್ಯಾಂ ನಿರ್ಮಿಸಲು ಸಜ್ಜು; ಮನುಷ್ಯರ ಸಹಾಯವಿಲ್ಲದೇ ತಲೆಎತ್ತಲಿದೆ ಬೃಹತ್‌ ಅಣೆಕಟ್ಟು

Team Udayavani, May 12, 2022, 6:55 AM IST

ಚೀನದಲ್ಲಿ ರೋಬೋಗಳಿಂದ ಅಣೆಕಟ್ಟು ನಿರ್ಮಾಣ!

ಬೀಜಿಂಗ್‌:ಈಗ ಚೀನ ಜಗತ್ತಿನ ಅತಿದೊಡ್ಡ 3ಡಿ ಪ್ರಿಂಟೆಡ್‌ ಯೋಜನೆಯೊಂದರ ಹಿಂದೆ ಬಿದ್ದಿದೆ. ಕೇವಲ 2 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 590 ಅಡಿ ಎತ್ತರದ ಅಣೆಕಟ್ಟೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಇದರಲ್ಲಿ ವಿಶೇಷವೇನು ಎಂದು ಯೋಚಿಸುತ್ತಿದ್ದೀರಾ? ಇದು ಸಂಪೂರ್ಣವಾಗಿ ಮಾನವರಹಿತ ನಿರ್ಮಾಣ!

ಹೌದು. ಟಿಬೆಟಿಯನ್‌ ಪ್ರಸ್ಥಭೂಮಿಯಲ್ಲಿ ಯಾಂಗ್‌ಖು ಜಲವಿದ್ಯುತ್‌ ಸ್ಥಾವರ ಸ್ಥಾಪನೆಯ ಉದ್ದೇಶದಿಂದ ಈ ಡ್ಯಾಂ ನಿರ್ಮಾಣ ಮಾಡಲಾಗುತ್ತಿದ್ದು, ಒಬ್ಬನೇ ಒಬ್ಬ ಮನುಷ್ಯನ ಸಹಾಯವೂ ಇಲ್ಲದೆ ಈ ಅಣೆಕಟ್ಟು ತಲೆಎತ್ತಲಿದೆ. ಸಂಪೂರ್ಣವಾಗಿ ರೊಬೋಟ್‌ಗಳೇ ಇದನ್ನು ನಿರ್ಮಿಸಲಿವೆ.

ಹೇಗೆ ನಡೆಯುತ್ತೆ ಕಾಮಗಾರಿ?
ಇಡೀ ಕಾಮಗಾರಿ ಸಂಪೂರ್ಣವಾಗಿ ರೊಬೋಟಿಕ್‌ ತಂತ್ರಜ್ಞಾನದಲ್ಲಿ ನಡೆಯುತ್ತದೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ನಿಖರವಾಗಿ ನಿರ್ಮಾಣ ಸಾಮಗ್ರಿಗಳು ರೊಬೋಟ್‌ಗಳ ಮೂಲಕ ಸಾಗಣೆಯಾಗುತ್ತವೆ. ಮಾನವರಹಿತ ಬುಲ್ಡೋಜರ್‌ಗಳು, ಪೇವರ್‌ಗಳು ಮತ್ತು ರೋಲರ್‌ಗಳೇ ಹಂತ ಹಂತವಾಗಿ ಅಣೆಕಟ್ಟು ನಿರ್ಮಾಣ ಕಾರ್ಯ ಮಾಡುತ್ತವೆ.

ರೋಲರ್‌ಗಳಲ್ಲಿ ಅಳವಡಿಸಲಾಗಿರುವ ಸೆನ್ಸರ್‌ಗಳು ಪ್ರತಿಯೊಂದು 3ಡಿ ಪ್ರಿಂಟೆಡ್‌ ಪದರಗಳ ದೃಢತೆ ಮತ್ತು ಸ್ಥಿರತೆಯ ಕುರಿತು ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಮಾಹಿತಿ ರವಾನಿಸುತ್ತಿರುತ್ತದೆ. ಅಣೆಕಟ್ಟು ನಿರ್ಮಾಣವು 590 ಅಡಿ ಎತ್ತರಕ್ಕೆ ತಲುಪುವವರೆಗೂ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ.

ಈ ವಿಶಿಷ್ಟ ಯೋಜನೆಯ ಸಿದ್ಧತೆಗಾಗಿಯೇ ಎರಡು ವರ್ಷ ಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದು, ಸಿದ್ಧತೆ ಪೂರ್ಣಗೊಂಡ ನಂತರ ಅಣೆಕಟ್ಟು ನಿರ್ಮಾಣ ಶುರುವಾಗಲಿದೆಯಂತೆ.

590 ಅಡಿ-ಅಣೆಕಟ್ಟಿನ ಎತ್ತರ

5 ಶತಕೋಟಿ ಕಿಲೋ ವ್ಯಾಟ್‌ ಹವರ್ಸ್‌-ವಾರ್ಷಿಕ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ

20 ಅಡಿ-ಪ್ರಸ್ತುತ ಜಗತ್ತಿನ 3ಡಿ ಪ್ರಿಂಟೆಡ್‌ ಕಟ್ಟಡಗಳ ಗರಿಷ್ಠ ಎತ್ತರ

2-ಎಷ್ಟು ವರ್ಷಗಳಲ್ಲಿ ಡ್ಯಾಂ ನಿರ್ಮಾಣಕ್ಕೆ ಚಾಲನೆ

ಟಾಪ್ ನ್ಯೂಸ್

4-uv-fusion

UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?

3-madikeri

Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Fraud Case: ಮುಂಬೈ ಬಿಲ್ಡರ್‌ ಮನೆ ಮೇಲೆ ಇಡಿ ದಾಳಿ… 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

Housing Fraud Case: ಇಡಿ ದಾಳಿ… ಬಿಲ್ಡರ್‌ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

2-uv-fusion

UV Fusion: ಮೂಕಪ್ರಾಣಿಗಳ ವೇದನೆಗೆ ದನಿಯಾಗುವಿರಾ!

1-24-saturday

Daily Horoscope: ಉದ್ಯೋಗದಲ್ಲಿ ದಿನೇ ದಿನೇ ಉನ್ನತಿ, ಅಕಸ್ಮಾತ್‌ ಧನಾಗಮ ಯೋಗ

Market ಮೊಟ್ಟೆ ದರ ಏರಿಳಿತ: ಬಸವಳಿದ ಗ್ರಾಹಕರು

Market ಮೊಟ್ಟೆ ದರ ಏರಿಳಿತ: ಬಸವಳಿದ ಗ್ರಾಹಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—-eewewqe

45% ಅಂಗವೈಕಲ್ಯವಿದ್ದರೂ ಎವರೆಸ್ಟ್‌ ಬೇಸ್‌ಗೆ ಟ್ರೆಕ್‌!

rishi sun

UK; ಆರ್ಥಿಕ ಹಿಂಜರಿತದಿಂದ ಬ್ರಿಟನ್‌ ಅರ್ಥ ವ್ಯವಸ್ಥೆ ಪಾರು

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

Insects: ಮಹಿಳೆಯ ಮೂಗಿನಲ್ಲಿ ನೂರಾರು ಹುಳಗಳು ಪತ್ತೆ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

4-uv-fusion

UV Fusion: ಅವರು ಹಾಗೆ, ಇವರು ಹೀಗೆ, ನಾವು ಹೇಗೆ?

3-madikeri

Crime Followup: ಸೂರ್ಲಬ್ಬಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪೊಲೀಸ್ ವಶ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Pramod Muthalik: ಹುಣಸೂರು ಮತ್ತೊಂದು ಭಟ್ಕಳ್ಳ ಆಗಲಿದೆ… ಪ್ರಮೋದ್ ಮುತಾಲಿಕ್ ಎಚ್ಚರಿಕೆ

Fraud Case: ಮುಂಬೈ ಬಿಲ್ಡರ್‌ ಮನೆ ಮೇಲೆ ಇಡಿ ದಾಳಿ… 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

Housing Fraud Case: ಇಡಿ ದಾಳಿ… ಬಿಲ್ಡರ್‌ ಗೆ ಸೇರಿದ 52 ಕೋಟಿ ಮೌಲ್ಯದ ಆಸ್ತಿ ಜಪ್ತಿ

2-uv-fusion

UV Fusion: ಮೂಕಪ್ರಾಣಿಗಳ ವೇದನೆಗೆ ದನಿಯಾಗುವಿರಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.