ವೇಟ್‌ಲಿಫ್ಟಿಂಗ್‌: ಗುರುದೀಪ್‌ ಸಿಂಗ್‌ ಕಂಚಿನ ಮಿಂಚು


Team Udayavani, Aug 4, 2022, 10:06 PM IST

ವೇಟ್‌ಲಿಫ್ಟಿಂಗ್‌: ಗುರುದೀಪ್‌ ಸಿಂಗ್‌ ಕಂಚಿನ ಮಿಂಚು

ಬರ್ಮಿಂಗ್‌ಹ್ಯಾಮ್‌: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೂಂದು ಪದಕ ಒಲಿದಿದೆ. ಇದನ್ನು ತಂದಿತ್ತವರು ಗುರುದೀಪ್‌ ಸಿಂಗ್‌.

ಇದೇ ಮೊದಲ ಸಲ ಗೇಮ್ಸ್‌ನಲ್ಲಿ ಪ್ರತಿನಿಧಿಸಿದ, 26 ವರ್ಷದ ಗುರುದೀಪ್‌ 109 ಪ್ಲಸ್‌ ಕೆಜಿ ವಿಭಾಗದಲ್ಲಿ ಒಟ್ಟು 390 ಕೆಜಿ (167 ಪ್ಲಸ್‌ 223 ಕೆಜಿ) ಭಾರವನ್ನೆತ್ತಿ ತೃತೀಯ ಸ್ಥಾನಿಯಾದರು.

ಚಿನ್ನ ಪಾಕಿಸ್ಥಾನದ ಪಾಲಾಯಿತು. ಮುಹ ಮ್ಮದ್‌ ನೂಹ್‌ ಬಟ್‌ 405 ಕೆಜಿ ಭಾರವೆತ್ತಿ ನೂತನ ದಾಖಲೆ ನಿರ್ಮಿಸಿದರು (173 ಪ್ಲಸ್‌ 232 ಕೆಜಿ). ನ್ಯೂಜಿಲ್ಯಾಂಡಿನ ಡೇವಿಡ್‌ ಆ್ಯಂಡ್ರೂé ಲಿಟಿ 394 ಕೆಜಿ ತೂಕದೊಂದಿಗೆ ಬೆಳ್ಳಿ ಗೆದ್ದರು (170 ಪ್ಲಸ್‌ 224 ಕೆಜಿ).

ಗುರುದೀಪ್‌ ಅವರ ಸ್ನ್ಯಾಚ್‌ ಆರಂಭ ತೀರಾ ಸಾಮಾನ್ಯ ಮಟ್ಟದಲ್ಲಿತ್ತು. ಮೊದಲ ಪ್ರಯತ್ನದಲ್ಲಿ 167 ಕೆಜಿ ಎತ್ತಲು ವಿಫ‌ಲರಾದರು. ದ್ವಿತೀಯ ಸುತ್ತಿನಲ್ಲಿ ಯಶಸ್ಸು ಕಂಡರು. ಆದರೆ 3ನೇ ಸುತ್ತಿನಲ್ಲಿ 173 ಕೆಜಿ ಎತ್ತಲು ಸಾಧ್ಯವಾಗಲಿಲ್ಲ.

ಹ್ಯಾಮರ್‌ ತ್ರೋ :  ಪದಕ ಸುತ್ತಿಗೆ ಮಂಜು ಬಾಲಾ :

ಬರ್ಮಿಂಗ್‌ಹ್ಯಾಮ್‌: ಹ್ಯಾಮರ್‌ ತ್ರೋ ಸ್ಪರ್ಧೆಯಲ್ಲಿ ಮಂಜು ಬಾಲಾ ಪದಕ ಸುತ್ತು ಪ್ರವೇಶಿಸಿದ್ದಾರೆ. ಆದರೆ ಸರಿತಾ ಸಿಂಗ್‌ ಈ ಹಂತ ಮುಟ್ಟಲು ವಿಫ‌ಲರಾದರು.

33 ವರ್ಷದ ಮಂಜು ಬಾಲಾ ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದರು. ಇವರ ಗರಿಷ್ಠ ದೂರ 59.68 ಮೀ. ಆಗಿತ್ತು. ಇದು ಮೊದಲ ಎಸೆತದಲ್ಲೇ ದಾಖಲಾಯಿತು. ಕೆನಡಾದ ಕ್ಯಾಮ್ರಿನ್‌ ರೋಜರ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನಿಯಾದರು (74.68 ಮೀ.). ಇದು ಗೇಮ್ಸ್‌ ದಾಖಲೆಯೂ ಆಗಿದೆ.

ಸರಿತಾ ಸಿಂಗ್‌ 13ನೇ ಸ್ಥಾನಕ್ಕೆ ಕುಸಿದರು. ಇವರೆಸೆದ ಗರಿಷ್ಠ ದೂರ 57.48 ಮೀ. ಆಗಿತ್ತು. ಕಡೇ ಪಕ್ಷ 12ನೇ ಸ್ಥಾನಕ್ಕೆ ಬಂದರೂ ಸರಿತಾಗೆ ಫೈನಲ್‌ ಪ್ರವೇಶ ಲಭಿಸುತ್ತಿತ್ತು.

ಹ್ಯಾಮರ್‌ ತ್ರೋ ಫೈನಲ್‌ ಸ್ಪರ್ಧೆ ಶನಿವಾರ ಸಾಗಲಿದೆ.

 

ಟಾಪ್ ನ್ಯೂಸ್

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

Rohit SHarma (2)

Star Sports ; ರೋಹಿತ್‌ ಶರ್ಮರ ಖಾಸಗಿ ಮಾತು ಪ್ರಸಾರ ಮಾಡಿಲ್ಲ

1-wewqe

Alexander Zverev ರೋಮನ್‌ ಕಿಂಗ್‌: ಜೆರ್ರಿ ವಿರುದ್ಧ 6-4, 7-5 ಜಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.