ಅವತ್ತು ನನ್ನ ಮಾತು ಕೇಳಿದ್ದರೆ ಮಗಳು ಉಳಿಯುತ್ತಿದ್ದಳು… ಶ್ರದ್ದಾ ತಂದೆಯ ಕಣ್ಣಿರೀನ ಮಾತು


Team Udayavani, Nov 15, 2022, 3:06 PM IST

thumb-5

ಮುಂಬಯಿ : ದೆಹಲಿಯಲ್ಲಿ ಸಂಚಲನ ಮೂಡಿಸಿದ ಶ್ರದ್ದಾ ಹತ್ಯೆ ಪ್ರಕರಣ ಹಿಂದೆ ಒಂದರ ಹಿಂದೆ ಒಂದರಂತೆ ಭಯಾನಕ ವಿಚಾರಗಳು ಬೆಳಕಿಗೆ ಬರುತ್ತಿವೆ.

ಇದೆಲ್ಲದರ ನಡುವೆ ತನ್ನ ಮಗಳನ್ನು ಕಳೆದುಕೊಂಡ ತಂದೆ ದುಖ್ಖದ ಮಡುವಿನಲ್ಲಿ ಮರುಗುತಿದ್ದಾರೆ, ಶ್ರದ್ದಾ ಹಾಗೂ ಅಫ್ತಾಬ್ ಅಮೀನ್ ಪೂನಾವಾಲ ಪ್ರೀತಿಸುವ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಶ್ರದ್ದಾ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು, ಆದರೆ ಶ್ರದ್ದಾ ಪೋಷಕರ ಮಾತನ್ನು ಕೇಳುವ ಹಂತದಲ್ಲಿ ಇರಲಿಲ್ಲ ಯಾಕೆಂದರೆ ಆಕೆಯೂ ಅಫ್ತಾಬ್ ನನ್ನ ಮನಸಾರೆ ಇಷ್ಟಪಡುತ್ತಿದ್ದಳು.

ಪೋಷಕರ ವಿರೋಧದ ನಡುವೆಯೂ ಮುಂಬಯಿಯಲ್ಲಿದ್ದ ಜೋಡಿ ಪೋಷಕರ ಕಣ್ಣು ತಪ್ಪಿಸಿ ದೆಹಲಿಗೆ ಓಡಿಹೋಗಿದ್ದರು, ಆದರೆ ಈ ವಿಚಾರ ಮಾತ್ರ ಮನೆಯವರಿಗೆ ಗೊತ್ತೇ ಇರಲಿಲ್ಲ ಮನೆಯವರೊಂದಿಗೆ ಫೋನ್ ಕರೆಗಳನ್ನು ಮಾತ್ರ ಮಾಡುತ್ತಿದ್ದ ಶ್ರದ್ದಾ ಮನೆಯವರಿಗೆ ತಾನು ದೆಹಲಿಗೆ ಬಂದಿರುವ ವಿಚಾರವನ್ನು ಮುಚ್ಚಿಟ್ಟಿದ್ದರು.

ಆದರೆ ವಿಧಿಯಾಟ ಬೇರೆಯೇ ಆಗಿತ್ತು ನೋಡಿ ಮುಂಬೈನಿಂದ ದೆಹಲಿಗೆ ತೆರಳಿ ಅಲ್ಲಿ ಫ್ಲ್ಯಾಟ್ ವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿ, ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಅಫ್ತಾಫ್ ಶ್ರದ್ಧಾಳನ್ನು ಕೊಚ್ಚಿ ಕೊಲೆಗೈದ ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು 18 ದಿನಗಳ ಕಾಲ ಒಂದೊಂದು ಭಾಗವನ್ನು ಬೇರೆ, ಬೇರೆ ಸ್ಥಳಗಳಲ್ಲಿ ಎಸೆದು ಬಂದಿದ್ದ. ಈ ನಡುವೆ ಬೇರೆ ಯುವತಿಯನ್ನು ತಾನು ಇದ್ದ ಫ್ಲಾಟ್ ಗೆ ಕರೆದುಕೊಂಡು ಬರುತ್ತಿದ್ದನಂತೆ. ಕೊನೆಗೂ ಶ್ರದ್ದಾ ಹತ್ಯೆಯಾಗಿರುವ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಗಳ ಹತ್ಯೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶ್ರದ್ಧಾಳ ತಂದೆ ಅಂದು ನನ್ನ ಮಾತು ಕೇಳಿ ಶ್ರದ್ದಾ ಅಫ್ತಾಬ್ ನ ಪ್ರೀತಿಯ ಜಾಲದಿಂದ ಹೊರಬರುತಿದ್ದರೆ ಇಷ್ಟು ಹೊತ್ತಿಗೆ ನನ್ನ ಮಗಳು ಒಳ್ಳೆಯ ಜೀವನ ನಡೆಸುತ್ತಿದ್ದಳು ಎಂದು ಕಣ್ಣೀರು ಹಾಕಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಗೊತ್ತಾಗುತ್ತಿದಂತೆ ಮಗಳನ್ನು ಆ ವಿಚಾರದಲ್ಲಿ ದೂರ ಇರು, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲವೆಂದು ಅವತ್ತೇ ಹೇಳಿದ್ದೆವು ಆದರೆ ಮಗಳು ಮಾತ್ರ ನಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೆ ತನ್ನ ಜೀವವನ್ನೇ ತೆಗೆದುಕೊಂಡಿದ್ದಾಳೆ, ಎಂದು ಮಮ್ಮಲ ಮರುಗಿದ್ದಾರೆ, ನನ್ನ ಮಗಳನ್ನು ಹತ್ಯೆ ಮಾಡಿದ ಪಾಪಿಗೆ ತಕ್ಕ ಶಿಕ್ಷೆ ಆಗಲೇ ಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಾಂತಾರ ಸಿನಿಮಾ ಪ್ರಭಾವ!…ಪಂಜುರ್ಲಿ ದೈವದ ವೇಷದಲ್ಲಿ ಕಾರ್ಯಕ್ರಮಕ್ಕೆ ಬಂದ ತಹಸೀಲ್ದಾರ್

ಟಾಪ್ ನ್ಯೂಸ್

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು

Surathkal ಸೂರಿಂಜೆ ಮೂಡುಬೆಟ್ಟು; ಅಣೆಕಟ್ಟು ಕುಸಿತ, ಕೃಷಿಕರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Onion

Onion ರಫ್ತು ನಿಷೇಧ ತೆರವು: ಕಳೆದ ವರ್ಷಕ್ಕಿಂತ ಕಡಿಮೆ ಉತ್ಪಾದನೆ ಸಾಧ್ಯತೆ

1-eewqewq

UNICEF ಇಂಡಿಯಾಗೆ ಕರೀನಾ ಕಪೂರ್‌ ರಾಯಭಾರಿ

MOdi (3)

Next 5 years ಭ್ರಷ್ಟರಿಗೆ ತಕ್ಕ ಶಾಸ್ತಿ, ನನ್ನ ಬಳಿ ಸ್ವಂತ ಮನೆ ಯೂ ಇಲ್ಲ: ಮೋದಿ

mamata

Sandeshkhali ಪ್ರಕರಣ ಬಿಜೆಪಿಯದ್ದೇ ಪಿತೂರಿ: ಸಿಎಂ ಮಮತಾ ಆಕ್ರೋಶ

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

ವಿವಿಧೆಡೆ ಕುಸಿದು ಬಿದ್ದು ಮೂವರು ವ್ಯಕ್ತಿಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.