ಧೋನಿ ಮಗಳಿಗೆ ವಿಶೇಷ ಗಿಫ್ಟ್ ನೀಡಿದ ವಿಶ್ವಕಪ್ ಹೀರೋ ಲಿಯೋನೆಲ್ ಮೆಸ್ಸಿ
Team Udayavani, Dec 28, 2022, 1:22 PM IST
ಮುಂಬೈ: ಅರ್ಜೆಂಟೀನಾ ನಾಯಕ ಮತ್ತು ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರು ಈ ತಿಂಗಳ ಆರಂಭದಲ್ಲಿ ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ 2022 ಪ್ರಶಸ್ತಿ ಗೆದ್ದು ಜೀವಮಾನದ ಕನಸನ್ನು ನನಸು ಮಾಡಿಕೊಂಡರು. ಮೆಸ್ಸಿ ಸಾಹಸದಿಂದ ಅರ್ಜೆಂಟೀನಾದ 36 ವರ್ಷಗಳ ನಂತರ ವಿಶ್ವಕಪ್ ಗೆದ್ದುಕೊಂಡಿತ್ತು.
ವಿಶ್ವಕಪ್ ಗೆಲುವಿನ ಬಳಿಕ ಮೆಸ್ಸಿ ವಿಶ್ವದಾದ್ಯಂತ ತಮ್ಮ ಅಪೂರ್ವ ಅಭಿಮಾನಿಗಳಿಗೆ ಗಿಫ್ಟ್ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಜೆರ್ಸಿ ಕಳುಹಿಸಿದ್ದ ಮೆಸ್ಸಿ, ಇದೀಗ ಪುಟ್ಟ ಬಾಲಕಿಯೊಬ್ಬಳಿಗೆ ಜೆರ್ಸಿ ನೀಡಿದ್ದಾರೆ. ಆ ಪುಟ್ಟ ಬಾಲಕಿಯೇ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಪುತ್ರ ಝೀವಾ.
ಇದನ್ನೂ ಓದಿ:ಯುವತಿಯನ್ನು ‘ದೇವದಾಸಿ’ ಪದ್ದತಿಗೆ ದೂಡಿದ ಕುಟುಂಬ; ಮೂವರ ಬಂಧನ
ವಿಶೇಷವಾಗಿ ಹಸ್ತಾಕ್ಷರ ಹೊಂದಿರುವ ಅರ್ಜೆಂಟೀನಾ ಜೆರ್ಸಿಯನ್ನು ಏಳು ವರ್ಷದ ಝೀವಾ ಧೋನಿಗೆ ಮೆಸ್ಸಿ ಕಳುಹಿಸಿದ್ದಾರೆ. ಮೆಸ್ಸಿ ಜರ್ಸಿಗೆ ‘ಪ್ಯಾರಾ ಝೀವಾ’ ಎಂದು ಬರೆದು ಸಹಿ ಹಾಕಿದ್ದಾರೆ.
ಮೆಸ್ಸಿ ಉಡುಗೊರೆಯಾಗಿ ನೀಡಿದ ಜೆರ್ಸಿಯ ಚಿತ್ರವನ್ನು ಝೀವಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ಟಾರ್ ಫುಟ್ಬಾಲ್ ಆಟಗಾರ ಮೆಸ್ಸಿಗೆ ಭಾರತದಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ. ಧೋನಿ ಕೂಡ ದೊಡ್ಡ ಫುಟ್ಬಾಲ್ ಅಭಿಮಾನಿಯಾಗಿದ್ದು, ಹಲವು ವರ್ಷಗಳ ಹಿಂದೆ ಮೆಸ್ಸಿ ಬಗ್ಗೆ ಟ್ವೀಟ್ ಮಾಡಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsBANW: ಭಾರತಕ್ಕೆ 2-0 ಮುನ್ನಡೆ
IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ