ಫುಡ್ ಪಾರ್ಸೆಲ್ ನೀಡುವ ವೇಳೆ ಓಡಿಸಿಕೊಂಡು ಬಂದ ಸಾಕು ನಾಯಿ: ಜೀವ ಭಯದಿಂದ 3ನೇ ಮಹಡಿಯಿಂದ ಹಾರಿದ ಯುವಕ
Team Udayavani, Jan 14, 2023, 12:35 PM IST
ಹೈದರಾಬಾದ್: ನಾಯಿಯೊಂದು ಬೊಗಳಿ ಓಡಿಸಿಕೊಂಡು ಬಂದ ಪರಿಣಾಮ ವ್ಯಕ್ತಿಯೋರ್ವ ಮೂರನೇ ಮಹಡಿಯಿಂದ ಹಾರಿ ಗಂಭೀರ ಗಾಯಗೊಂಡಿರುವ ಘಟನೆ ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ನಡೆದಿದೆ.
ಇತ್ತೀಚೆಗೆ ಮೊಹಮ್ಮದ್ ರಿಜ್ವಾನ್ ಎನ್ನುವ ಯುವಕನೊಬ್ಬ ಅಪಾರ್ಟ್ಮೆಂಟ್ ವೊಂದಕ್ಕೆ ಫುಡ್ ಡೆಲಿವೆರಿ ಮಾಡಲು ತೆರಳಿದ್ದರು. ಕೆ ಶೋಭನಾ ಎನ್ನುವವರ ಮನೆಗೆ ಪಾರ್ಸೆಲ್ ಕೊಡಲು ಹೋಗುವಾಗ ಮನೆಯಲ್ಲಿದ್ದ ಜರ್ಮನ್ ಶೆಫರ್ಡ್ ನಾಯಿ ರಿಜ್ವಾನ್ ಅವರನ್ನು ನೋಡಿ ಬೊಗಳಲು ಆರಂಭಿಸಿದೆ. ಜೋರಾಗಿ ಬೊಗಳುತ್ತಾ ಮುಂದೆ ಬಂದ ನಾಯಿಯನ್ನು ಕಂಡು ರಿಜ್ವಾನ್ ಹಿಂದೆ ಸರಿದು ಓಡಲು ಯತ್ನಿಸಿದ್ದಾರೆ. ನಾಯಿ ಆತನ ಹಿಂದೆಯೇ ಓಡಿಸಿಕೊಂಡು ಹೋಗಿದೆ. ಜೀವ ಭಯದಿಂದ ಏನು ಮಾಡುವುದೆಂದು ಯೋಚಿಸಿ, ಆ ಕ್ಷಣದಲ್ಲೇ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿ ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ನಾಯಿಯ ಮಾಲಕಿ ಶೋಭನಾ ಕೂಡಲೇ ಫುಡ್ ಡೆಲಿವೆರಿ ಯುವಕನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಯುವಕನ ಸ್ಥಿತಿ ಗಂಭೀರವಾಗಿದೆ.
ಈ ಕುರಿತು ರಿಜ್ವಾನ್ ಸಹೋದರ ಬಂಜಾರ ಹಿಲ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಾಯಿ ಮಾಲಕಿಯನ್ನು ವಿಚಾರಣೆ ಒಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್