Thane: ಥಾಣೆ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 18 ರೋಗಿಗಳ ಸಾವು


Team Udayavani, Aug 14, 2023, 5:56 AM IST

thane

ಥಾಣೆ: ಮಹಾರಾಷ್ಟ್ರದ ಥಾಣೆಯ ಕಲ್ವಾಲದಲ್ಲಿ ಇರುವ ಛತ್ರಪತಿ ಶಿವಾಜಿ ಮಹಾರಾಜ್‌ ಆಸ್ಪತ್ರೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 18 ಮಂದಿ ರೋಗಿಗಳು ಅಸುನೀಗಿದ್ದಾರೆ. ಈ ಪೈಕಿ 10 ಮಂದಿ ಮಹಿಳೆಯರು, 8 ಮಂದಿ ಪುರುಷರು ಸೇರಿದ್ದಾರೆ ಎಂದು ಪಾಲಿಕೆ ಆಯುಕ್ತ ಅಭಿಜಿತ್‌ ಬಂಗಾರ್‌ ಹೇಳಿದ್ದಾರೆ. ಅಸುನೀಗಿದವರ ಪೈಕಿ 12 ಮಂದಿ ಐವತ್ತು ವರ್ಷಕ್ಕಿಂತ ಮೇಲ್ಪಟ್ಟವರು.

ಈ ಬಗ್ಗೆ ತನಿಖೆಗಾಗಿ ಸಮಿತಿಯನ್ನೂ ರಚಿಸಲಾಗಿದೆ. ಅಸುನೀಗಿದವರೆಲ್ಲರೂ ಮೂತ್ರಪಿಂಡದಲ್ಲಿ ಕಲ್ಲು, ಗಂಭೀರ ಪ್ರಮಾಣದ ಪಾರ್ಶ್ವವಾಯು, ನ್ಯುಮೋನಿಯಾ, ಕರುಳಿನಲ್ಲಿ ಹುಣ್ಣು, ನೆತ್ತರು ನಂಜು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ, 24 ಗಂಟೆಗಳಲ್ಲಿ ಇಷ್ಟೊಂದು ಸಾವು ಸಂಭವಿಸಿರುವ ಕುರಿತು ಅನುಮಾನ ಎದ್ದಿರುವ ಕಾರಣ 2 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆಸ್ಪತ್ರೆಗೆ ಸರ್ಕಾರ ಸೂಚಿಸಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌, ಥಾಣೆಯ ಆಸ್ಪತ್ರೆಯಲ್ಲಿ ಉಂಟಾಗಿರುವ ಸಾವು ಅತ್ಯಂತ ದುಃಖದ ವಿಚಾರ. ಕೆಲವು ದಿನಗಳಿಂದ ಈ ರೀತಿ ಸಾವು ನೋವು ಉಂಟಾಗುತ್ತಿದ್ದರೂ ಸ್ಥಳೀಯ ಮಹಾನಗರ ಪಾಲಿಕೆ ಎಚ್ಚೆತ್ತುಕೊಳ್ಳದೇ ಇದ್ದದ್ದು ಖಂಡನೀಯ ಎಂದಿದ್ದಾರೆ.

ಲೂಟಿ ಮತ್ತು ಜುಮ್ಲಾಗಳು ದೇಶದ ಆರೋಗ್ಯ ವ್ಯವಸ್ಥೆಯನ್ನು ಕಂಗೆಡಿಸಿವೆ. ಪ್ರಧಾನಿ ಮೋದಿಯವರ ಪ್ರತಿ ಮಾತಿನಲ್ಲಿಯೂ ಸುಳ್ಳು ಎದ್ದು ಕಾಣುತ್ತಿದೆ. ಎಐಐಎಂಎಸ್‌ಗಳನ್ನು ಸ್ಥಾಪಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿರುವಂತೆ ಆ ಸಂಸ್ಥೆಗಳಲ್ಲಿ ವೈದ್ಯರು ಮತ್ತು ಇತರ ಸಿಬ್ಬಂದಿಯ ಕೊರತೆ ಇದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

 

ಟಾಪ್ ನ್ಯೂಸ್

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.