JJM ಕುಡಿಯುವ ನೀರಿನ ಕಾಮಗಾರಿ ಸಭೆ: ಪತ್ರಕರ್ತರನ್ನು ಆಹ್ವಾನಿಸಿ ಹೊರಗೆ ಕಳಿಸಿದ ಜಿ.ಪಂ. ಸಿಇಓ

ಪತ್ರಕರ್ತರಿಂದ ಪ್ರತಿಭಟನೆ

Team Udayavani, Sep 1, 2023, 3:11 PM IST

7-gangavathi

ಗಂಗಾವತಿ: ಜೆ.ಜೆ.ಎಂ. ಕಾಮಗಾರಿ ಅನುಷ್ಠಾನದ ಪರಿಶೀಲನಾ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಹೊರಗೆ ಕಳುಹಿಸಿ ಅವಮಾನಿಸಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಂಗಾವತಿ ಪತ್ರಕರ್ತರು ಮತ್ತು ಮಾಧ್ಯಮ ತಾ.ಪಂ. ಸಭಾಂಗಣ ಹಾಗೂ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗೂ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ  ಮನವಿ ಸಲ್ಲಿಸಿದರು.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಜೆ.ಜೆ.ಎಂ. ಶುದ್ಧ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದ ಲೋಪಗಳ ಬಗ್ಗೆ ಪರಾಮರ್ಶಿಸಲು ಜಿ.ಪಂ. ಸಿ.ಇ.ಓ. ಹಾಗೂ ಸ್ಥಳಿಯ ಶಾಸಕರ ನೇತೃತ್ವದಲ್ಲಿ ಗಂಗಾವತಿ ತಾಲೂಕು ಪಂಚಾಯತ್ ಸಭಾಂಗಣ ಮಂಥನದಲ್ಲಿ ಸೆ.1ರ ಶುಕ್ರವಾರ ಬೆಳಿಗ್ಗೆ 11.20ಕ್ಕೆ ಸಭೆ ಕರೆಯಲಾಗಿತ್ತು.

ಈ ಸಭೆಗೆ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಜಿ.ಪಂ. ಸಿ.ಇ.ಓ. ಪತ್ರಕರ್ತರನ್ನು ಈ ಸಭೆಗೆ ಆಹ್ವಾನಿಸಿಲ್ಲ. ಸಭೆ ಆದ ನಂತರ ನಿಮ್ಮನ್ನು ಕರೆಯಲಾಗುತ್ತದೆ ಎಂದು ತಿಳಿಸಿದರು.

ಇದರಿಂದ ಪತ್ರಕರ್ತರ ಕಾರ್ಯ ಕಲಾಪಕ್ಕೆ ಧಕ್ಕೆಯಾಗುವಂತಹ ಮಾತುಗಳನ್ನಾಡಿರುವ ಜಿ.ಪಂ. ಸಿ.ಇ.ಒ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಸರ್ಕಾರ ಅನುಷ್ಠಾನ ಮಾಡುವ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಪತ್ರಕರ್ತರು ಮತ್ತು ಮಾಧ್ಯಮದವರು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಕೆ.ಡಿ.ಪಿ.ಮತ್ತು ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಳ್ಳುವುದು ಹಲವು ದಶಕಗಳ ಸಂಪದಾಯವಾಗಿರುತ್ತದೆ ಎಂದರು.

ಆದರೆ ಜಿ.ಪಂ. ಸಿ.ಇ.ಒ. ಜಿಲ್ಲೆಯ ಇತರೇ ತಾಲೂಕುಗಳಲ್ಲಿಯೂ ಜೆ.ಜೆ.ಎಂ. ಕಾಮಗಾರಿ ಪರಿಶೀಲನಾ ಸಭೆ ನಡೆದಾಗ ಅಲ್ಲಿಯೂ ಸಹ ಪತ್ರಕರ್ತರನ್ನು ಹೊರಗಡೆ ಕಳುಹಿದ್ದಾರೆ. ಇದರಿಂದ ಪತ್ರಕರ್ತರು ಮತ್ತು ಮಾಧ್ಯಮದವರು ಕೆಲಸಗಳಿಗೆ ಅಡ್ಡಿ ಮಾಡುವ ಆತಂಕ ಇದ್ದು, ಕೂಡಲೇ ಸರ್ಕಾರ ಸೂಕ್ತ ಸುತ್ತೋಲೆ ಮೂಲಕ ತಾಲೂಕು ಮತ್ತು ಜಿಲ್ಲಾಮಟ್ಟದ ಸರ್ಕಾರದ ಅಭಿವೃದ್ಧಿ ಕಾಮಗಾರಿ ಕೆ.ಡಿ.ಪಿ. ಸಾಮಾನ್ಯ ಸಭೆ ಮತ್ತು ಅಧಿಕಾರಿಗಳ ಸಭೆಗಳು ನಡೆದಲ್ಲಿ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಸಭೆಗೆ ಆಹ್ವಾನಿಸಿ ಸಂಪೂರ್ಣ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.

ಗಂಗಾವತಿ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಸಭೆಯಿಂದ ಹೊರಗಡೆ ಕಳುಹಿಸಿದ ಜಿ.ಪಂ. ಸಿ.ಇ.ಓ. ಕೊಪ್ಪಳ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಸಭೆಯಲ್ಲಿ ಶಾಸಕರೊಂದಿಗೆ ಅವರ ಬೆಂಬಲಿಗರೂ ಸಹ ಪಾಲ್ಗೊಂಡಿದ್ದು, ಅವರನ್ನು ಸಭೆಯಲ್ಲಿ ಉಳಿಸಿಕೊಂಡು ಪತ್ರಕರ್ತರು ಮತ್ತು ಮಾಧ್ಯಮದವರನ್ನು ಹೊರಗಡೆ ಕಳುಹಿಸಿರುವುದು ಖಂಡನಿಯವಾಗಿದೆ ಎಂದರು.

ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸರ್ಕಾರ ಪತ್ರಕರ್ತರು ಮತ್ತು ಮಾಧ್ಯಮದವರ ಕೆಲಸ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡುವುದರೊಂದಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ಕಾಪಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಕೆ.ನಿಂಗಜ್ಜ, ನಾಗರಾಜ ಇಂಗಳಗಿ, ರಾಮಮೂರ್ತಿ ನವಲಿ, ಸಿ.ಮಹಾಲಕ್ಷ್ಮಿ, ಎಂ.ಜೆ.ಶ್ರೀನಿವಾಸ, ಹರೀಶ ಕುಲಕರ್ಣಿ, ವಿಶ್ವನಾಥ ಬೆಳಗಲ್ ಮಠ, ಜೋಗದ ಕೃಷ್ಙಪ್ಪ ನಾಯಕ, ಜಿ.ತಿರುಪಾಲಯ್ಯ, ರವಿ ಸಾಕ್ಷಿ, ದೇವದಾನಂ, ಮುಕ್ಕುಂದಿ ಚಂದ್ರಶೇಖರ, ವಿಜಯಕುಮಾರ್, ಸೈಯದ್ ಅಲಿ, ಗಾದಿಲಿಂಗಪ್ಪ ನಾಯಕ, ಜೋಗಿನ್ ರಮೇಶ, ಮಲ್ಲಿಕಾರ್ಜುನ ಗೋಟೂರು, ಶಿವಪ್ಪ ನಾಯಕ, ವೆಂಕಟೇಶ ಮಾಂತ, ಚನ್ನಬಸವ ಮಾನ್ವಿ, ವೆಂಕಟೇಶ ಉಪ್ಪಾರ, ಮಂಜುನಾಥ ಗುಡ್ಲಾನೂರು, ಸಿ.ಡಿ. ರಾಮಕೃಷ್ಣ, ಎಂ.ಡಿ.ಗೌಸ್, ಎಂ.ಡಿ.ಅಲಿ.ಮಂಜುನಾಥ ಹೋಸ್ಕೇರಿ, ಕೆ.ಎಂ.ಶರಣಯ್ಯ, ಹನುಮೇಶ ಭಟಾರಿ, ನಾಗರಾಜ ಕೊಟ್ನೆಕಲ್, ಹೊಸಳ್ಳಿ ರಗಡಪ್ಪ ಸೇರಿ ಪತ್ರಕರ್ತರು ಮಾಧ್ಯಮದವರಿದ್ದರು.

ಟಾಪ್ ನ್ಯೂಸ್

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-kushtagi

Kushtagi: ಪಟ್ಟಣದ ಹೊರವಲಯದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಕಳವು

21-ganagvathi

ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರಿಗೆ ಬ್ಯಾಂಕ್ ಸಿಬ್ಬಂದಿಗಳಿಂದ ಕಿರುಕುಳ, ಪ್ರತಿಭಟನೆ

ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!

ಕುಕನೂರು: ಸೌಕರ್ಯವಿಲ್ಲದೇ ಹಮಾಲರ ಕಾಲೋನಿ ಅನಾಥ!

10

3ನೇ ಸೆಮಿಸ್ಟರ್ ಸಮಾಜಶಾಸ್ತ್ರ ಪರೀಕ್ಷೆಗೆ 1ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ವಿತರಣೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

Gangavathi ಖಾಸಗಿ ಶಾಲೆಗಳಿಂದ ಪ್ರವೇಶ ನೆಪದಲ್ಲಿ ಲಕ್ಷಾಂತರ ರೂ.ವಸೂಲಿ ಖಂಡಿಸಿ ಪ್ರತಿಭಟನೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

Manipal: ಗಾಂಜಾ ಸೇವನೆ: 6 ಮಂದಿ ವಶಕ್ಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ

Transfer: ಕೆಇಎ ನಿರ್ದೇಶಕಿ ರಮ್ಯಾ ಎತ್ತಂಗಡಿ; ಸಿಇಟಿ ಪತ್ರಿಕೆ ಗೊಂದಲಕ್ಕೆ ತಲೆದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.