PWD ವಾಲ್ ಚರಂಡಿ ನಿರ್ಮಾಣ ವೇಳೆ ಬಡ ಮಹಿಳೆಯ ಮನೆಗೋಡೆ ಕುಸಿತ

ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

Team Udayavani, Sep 4, 2023, 8:36 PM IST

1-sdad

ಕೊರಟಗೆರೆ: ಲೋಕೋಪಯೋಗಿ ಇಲಾಖೆ ವತಿಯಿಂದ ಅನುಷ್ಠಾನಗೊಂಡ  ವಾಲ್ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಬಡ ಮಹಿಳೆಯ ಮನೆಯ ಗೋಡೆ ಕುಸಿದಿದ್ದು, ಅದನ್ನ ರಿಪೇರಿ ಮಾಡಿಕೊಡಿ ಎಂದು ಗುತ್ತಿಗೆದಾರರನ್ನ ಪರಿಪರಿಯಾಗಿ ಬೇಡಿಕೊಂಡರೂ ನಿರ್ಲಕ್ಷ್ಯವಹಿಸಿ ಕಾಮಗಾರಿ ಅಂತಿಮಗೊಳಿಸಿ ಕೈ ತೊಳೆದುಕೊಂಡಿರುವುದು ಬಡ ಮಹಿಳೆಗೆ ಅನ್ಯಾಯವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕೊರಟಗೆರೆ ತಾಲೂಕ್ ಕೋಳಾಲ ಹೋಬಳಿ  ಚಿನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂಕದಹಳ್ಳಿ ಗ್ರಾಮದ ದಿ. ನರಸಪ್ಪನ ಮಡದಿ ಅಯ್ಯಮ್ಮ ಅವರ ಮನೆ ಹಾನಿಗೊಳಗಾಗಿದೆ. ಲೋಕಪಯೋಗಿ ಇಲಾಖೆಯ ಕಾಮಗಾರಿ ರಸ್ತೆಯ ಎರಡು ಬದಿಯ ವಾಲ್ ಚರಂಡಿ ನಿರ್ಮಾಣ ಸಂದರ್ಭದಲ್ಲಿ ಕೂಲಿ ಕಾರ್ಮಿಕ ಮಹಿಳೆಯ ಮನೆಯ ಮೇಲ್ಚಾವಣಿ ಮುಂಭಾಗದ ಕಂಬಗಳು ಜೆಸಿಬಿ ಡ್ರೈವರ್ ನಿರ್ಲಕ್ಷದಿಂದ ಅರ್ಧಕ್ಕೆ ಮುರಿದಿದ್ದು, ಯಾವ ಸಂದರ್ಭದಲ್ಲಾದರೂ ಮನೆ ಕುಸಿಯುವ ಆತಂಕದಲ್ಲಿ ಬಡ ಮಹಿಳೆ ಕಾಲ ಕಳೆಯುತ್ತಿದ್ದಾರೆ.

ಕೋಳಾಲ ಹೋಬಳಿ ಸುಂಕದಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗುತ್ತಿಗೆದಾರ ಸಂಗಮೇಶ್ವರ್ ಎಂಬುವರು ಸಿಸಿ ರಸ್ತೆ ಹಾಗೂ ವಾಲ್ ಚರಂಡಿ ಕಾರ್ಯ ನಿರ್ವಹಿಸುತಿದ್ದು, ವಾಲ್ ಚರಂಡಿ ನಿರ್ಮಾಣ ಸಂದರ್ಭದಲ್ಲಿ  ಜೆಸಿಪಿ ಡ್ರೈವರ್ ನಿರ್ಲಕ್ಷದಿಂದ ಬಿಲ್ಡಿಂಗನ ವಾಲ್ ಗೆ ಜೆಸಿಬಿ ಗುದ್ದಿದ ಪರಿಣಾಮ  ಬಡ ಕೂಲಿ ಕಾರ್ಮಿಕೆ ಅರಿಯಮ್ಮನ ಮನೆಯ ಮೇಲ್ಚಾವಣಿ ಕುಸಿಯುತಿದ್ದು , ದುರಸ್ತಿಗೊಳಿಸುವಂತೆ ಮನವಿ ಮಾಡಿಕೊಂಡರು ಗುತ್ತಿಗೆದಾರ ಉದಾಸೀನತೆಯಿಂದ ಸರಿಪಡಿಸಿಕೊಳ್ಳದೆ ಕೆಲಸ ಮುಗಿಸಿಕೊಂಡು ಹೋಗಿದ್ದಾನೆ ಎಂದು ನೊಂದ ಮಹಿಳೆ ಅರಿಯಮ್ಮ ಅಳಲು ತೋಡಿಕೊಂಡಿದ್ದಾರೆ.

ಲೋಕೋಪಯೋಗಿ ಇಲಾಖೆ ಅದೀನದಲ್ಲಿ ಕಾಮಗಾರಿ ನಡೆಯುತ್ತಿತದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ರಸ್ತೆಯ ಎರಡು ಬದಿಯ ವಾಲ್ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಜೆಸಿಬಿ ಬಳಸುವುದರಿಂದ ಅಲ್ಲಿನ ಮನೆಗಳಿಗೆ ಡ್ಯಾಮೇಜ್ ಆಗಲಿದೆ ಎಂಬ ಸಾಮಾನ್ಯ ಜ್ಞಾನವು ಅಲ್ಲಿನ ಉಸ್ತವರಿ‌ ಉಳಿಸಿಕೊಂಡ ಇಂಜಿನಿಯರ್ ಆಗಲಿ ಅಥವಾ ಗುತ್ತಿಗೆದಾರನಿಗೆ ಆಗಲಿ ಬಾರದಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಮನೆಗಳ ಪಕ್ಕದಲ್ಲಿ ನಿರ್ಮಾಣ ಮಾಡುವ ವಾಲ್ ಚರಂಡಿಗಳನ್ನ (ಮ್ಯಾನುಯೆಲ್) ಕೂಲಿ ಕಾರ್ಮಿಕರಿಂದ ಕಾರ್ಯ ನಿರ್ವಹಿಸಬೇಕು ಆದರೆ ಆತುರದ ಕೆಲಸಕ್ಕೆ ಗುತ್ತಿಗೆದಾರ ಜೆಸಿಬಿ ಬೆಳಸಿ ಅಲ್ಲಿನ ಬಹಳಷ್ಟು ಮನೆಗಳ ಪಾಯಕ್ಕೆ ತೊಂದರೆಯಾಗಿದ್ದು, ಅರಿಯಮ್ಮನ ಮನೆಯ ಮುಂಭಾಗದ ಮೇಲ್ಛಾವಣಿ ಕುಸಿಯುತ್ತಿದ್ದು, ಬಡ ಕೂಲಿ ಕಾರ್ಮಿಕೆ ಮನೆಯ ದುರಸ್ತಿ ಗಾಗಿ ಅಂಗಲಾಚುತಿದ್ದಾಳೆ.

ವಾಲ್ ಚರಂಡಿ ನಿರ್ಮಾಣದ ಸಂದರ್ಭದಲ್ಲಿ ಜನರು ಕೈಯಲ್ಲಿ ಕೆಲಸ ಮಾಡಿದೆ ಜೆಸಿಬಿ ಬಳಸಿ ಕೆಲಸ ಮಾಡಲು ಹೋಗಿ ಗೋಡೆ ಕುಸಿಯು ವಂತೆ ಮಾಡಿದ್ದಾರೆ, ಗ್ರಾಮ ಪಂಚಾಯತಿಯವರು ಗಮನಹರಿಸಿಲ್ಲ, ಕೆಲಸ ಮಾಡಿದವರು ಗಮನಹರಿಸಿಲ್ಲ ನಾವು ಏನು ಮಾಡುವುದು, ನನಗೆ ಎರಡು ಹೆಣ್ಣು ಮಕ್ಕಳಿದ್ದಾರೆ.

ಅರಿಯಮ್ಮ, ಮನೆ ಹಾನಿಗೊಳಗಾದ ಮಹಿಳೆ

 ಜೆಸಿಬಿ ಯಿಂದ ದೊಡ್ಡ ದೊಡ್ಡ ಕಂಬಗಳನ್ನು ಅರ್ಧಕ್ಕೆ ಕುಸಿಯುವಂತೆ ಮಾಡಲಾಗಿದೆ, ಕಾಂಪೌಂಡ್ ಸಹ ಕುಸಿಯುವಂತೆ ಮಾಡಿದ್ದಾರೆ, ನಾವು ಗುತ್ತಿಗೆದಾರರನ್ನು ಕೇಳಿದ್ದಕ್ಕೆ ಜಗಳ ಮಾಡುತ್ತಾರೆ, ಜಗಳ ಮಾಡಿಕೊಂಡು ಹೋದವ ಇಲ್ಲಿವರೆಗೂ ಬಂದಿಲ್ಲ

ನಂದಿನಿ, ಸುಂಕದಹಳ್ಳಿ. ಹಾನಿಗೊಳಗಾದ ಮನೆಯ ಮನೆಮಗಳು

ಸುಂಕದಹಳ್ಳಿಯಲ್ಲಿ ಕಾಮಗಾರಿ ನಡೆದು2-3 ತಿಂಗಳು ಕಳೆದಿದೆ, ಇಲ್ಲಿನ ಕಾಮಗಾರಿಯ ಗುತ್ತಿಗೆ ಪಡೆದ ಸಂಗಮೇಶ್ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಅಂತಿಮಗೊಳಿಸಿಲ್ಲ, ಉಳಿಕೆ ಕಾಮಗಾರಿಯನ್ನ ಬೇರೆ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಅತಿ ಶೀಘ್ರವಾಗಿ ಕಾಮಗಾರಿ ಕೈಗೆತ್ತುಕೊಳ್ಳುವುದರ ಜತೆಗೆ ಮನೆ ಹಾನಿಗೊಳಗಾಗಿರುವದರ ಬಗ್ಗೆ ಪರಿಶೀಲಿಸಿದ್ದೇನೆ ಗುತ್ತಿಗೆದಾರನಿಗೆ ರಿಪೇರಿ ಗೊಳಿಸುವಂತೆ ಈಗಾಗಲೇ ತಿಳಿಸಲಾಗಿದ್ದು ಅತಿ ಶೀಘ್ರವಾಗಿ ಮನೆ ರಿಪೇರಿ ಸಹ ಮಾಡಿಕೊಳ್ಳುವುದರ ಜತೆಗೆ ಉಳಿಕೆ ಕಾಮಗಾರಿಯನ್ನ ನಮ್ಮ ಇಲಾಖೆ ವತಿಯಿಂದ ಪೂರ್ಣಗೊಳಿಸಲಾಗುವುದು.

ಮಲ್ಲಿಕಾರ್ಜುನ್ , ಪಿಡಬ್ಲ್ಯೂಡಿ ಎಇಇ

ಟಾಪ್ ನ್ಯೂಸ್

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

1-asasa

LS Election; 5ನೇ ಹಂತದಲ್ಲಿ ಶೇ.58.96 ಮತದಾನ:TMC ಮತ್ತು BJP ನಡುವೆ ವಿವಿಧೆಡೆ ಗಲಾಟೆ

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

1-asasa

LS Election; 5ನೇ ಹಂತದಲ್ಲಿ ಶೇ.58.96 ಮತದಾನ:TMC ಮತ್ತು BJP ನಡುವೆ ವಿವಿಧೆಡೆ ಗಲಾಟೆ

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.