Delhi: ಮನೆಯ ಕಪಾಟಿನಲ್ಲಿತ್ತು ಯುವತಿಯ ಶವ… ಜೊತೆಗಿದ್ದ ಲಿವ್ ಇನ್ ಪಾರ್ಟ್ನರ್ ನಾಪತ್ತೆ
Team Udayavani, Apr 5, 2024, 9:39 AM IST
ಹೊಸದಿಲ್ಲಿ: ನೈಋತ್ಯ ದೆಹಲಿಯ ದ್ವಾರಕಾ ಪ್ರದೇಶದಲ್ಲಿರುವ ಮನೆಯೊಂದರ ಕಪಾಟಿನಲ್ಲಿ 26 ವರ್ಷದ ಯುವತಿಯ ಶವವೊಂದು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಲವು ದಿನಗಳಿಂದ ತನ್ನ ಮಗಳು ರುಕ್ಷಾರ್ಳನ್ನು ತಂದೆ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ ಆದರೆ ತಂದೆ ಎಷ್ಟೇ ಕರೆ ಮಾಡಿದರೂ ಮಗಳಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಇದರಿಂದ ಆತಂಕಗೊಂಡ ತಂದೆ ಮುಸ್ತಾಕಿಮ್ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮಗಳು ವಾಸವಿದ್ದ ಮನೆಯನ್ನು ಪರಿಶೀಲನೆ ನಡೆಸಿದ ವೇಳೆ ಮನೆಯ ಕಪಾಟಿನಲ್ಲಿ ಯುವತಿಯ ಶವ ಪತ್ತೆಯಾಗಿದೆ.
ಕೊಲೆಯ ಹಿಂದೆ ಆಕೆಯ ಲಿವ್ ಇನ್ ಪಾಲುದಾರ ವಿಪಾಲ್ ಟೈಲರ್ ಪಾತ್ರವಿದೆ ಎಂದು ಆಕೆಯ ತಂದೆ ಪೊಲೀಸರ ಬಳಿ ಸಂಶಯ ವ್ಯಕ್ತಪಡಿಸಿದ್ದು, ಕಳೆದ ಒಂದೂವರೆ ತಿಂಗಳಿನಿಂದ ತನ್ನ ಮಗಳು ಟೈಲರ್ ಜೊತೆ ಬಾಡಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದಳು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ, ಘಟನೆ ನಡೆದಂದಿನಿಂದ ಯುವತಿಯ ಜೊತೆಗಿದ್ದ ಪಾಲುದಾರ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಇದನ್ನೂ ಓದಿ: Case Filed: ಮಣಿಪುರ ಸಿಎಂಗೆ ಬೆದರಿಕೆ: ಲೋಕಸಭಾ ಚುನಾವಣಾ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್