Voters ದಾರಿ ತಪ್ಪಿಸಲು ಚೀನ ಯತ್ನ: ಮೈಕ್ರೋಸಾಫ್ಟ್
Team Udayavani, Apr 6, 2024, 1:06 AM IST
ವಾಷಿಂಗ್ಟನ್: ಭಾರತದಲ್ಲಿನ ಲೋಕಸಭೆ ಚುನಾವಣೆ ಮೇಲೆ ಚೀನ ಕೃತಕ ಬುದ್ಧಿಮತ್ತೆ ಮೂಲಕ ದಾಳಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ಸಂಸ್ಥೆ ಎಚ್ಚರಿಕೆ ನೀಡಿದೆ. ಎ.ಐ. ರಚಿತ ಮೀಮ್ಗಳು, ಯುಟ್ಯೂಬ್ ವೀಡಿಯೋಗಳು ಹಾಗೂ ಎ.ಐ. ಸುದ್ದಿ ವಾಚಕರನ್ನು ಬಳಸಿ ಮತದಾರರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ತಪ್ಪು ದಾರಿಗೆ ತಳ್ಳುವ ಹುನ್ನಾರವನ್ನು ಚೀನ ನಡೆಸಿದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಕೆ ನೀಡಿದೆ.