ಜನವರಿ 15: ಮುಂಬಯಿ,ದಿಲ್ಲಿಯಲ್ಲಿ ಫ್ರೆಂಚ್ ಡಿಜೆ ಗೆಟ್ಟಾ ಕಾರ್ಯಕ್ರಮ
Team Udayavani, Jan 14, 2017, 12:09 PM IST
ಮುಂಬಯಿ : ನಿನ್ನೆ ಶುಕ್ರವಾರ ಇಲ್ಲಿ ನಡೆಯಬೇಕಿದ್ದ ವಿಶ್ವ ಪ್ರಸಿದ್ಧ ಫ್ರೆಂಚ್ ಡಿಜೆ ಡೇವಿಡ್ ಗೆಟ್ಟಾ ಅವರ ಮುಂಬಯಿ ಸಂಗೀತ ಕಾರ್ಯಕ್ರಮವನ್ನು ಇದೀಗ ಮರು ನಿಗದಿ ಮಾಡಲಾಗಿದ್ದು ಅದೀಗ ನಾಳೆ, ಭಾನುವಾರ ಮಧ್ಯಾಹ್ನ 11ರಿಂದ ಸಂಜೆ 4 ಗಂಟೆಯ ತನಕ ರಿಲಯನ್ಸ್ ಜಿಯೋ ಗಾರ್ಡನ್ಸ್ ನಲ್ಲಿ ನಡೆಯಲಿದೆ.
49ರ ಹರೆಯದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಗೆಟ್ಟಾ ಅವರ ಮುಂಬಯಿ ಹಾಗೂ ದಿಲ್ಲಿ ಕಾರ್ಯಕ್ರಗಳು ನಾಳೆ ಭಾನುವಾರ ಜನವರಿ 15ರಂದು ಒಂದೇ ದಿನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಮೊದಲು ಗೆಟ್ಟಾ ಅವರ ಕಾರ್ಯಕ್ರಮ ಜನ.13ರಂದು ಮುಂಬಯಿಯ ಮಹಾಲಕ್ಷ್ಮೀ ರೇಸ್ ಕೋರ್ಸ್ ನಲ್ಲಿ ನಡೆಯುವುದಿತ್ತು; ಆದರೆ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ಭದ್ರತೆಯ ಕಾರಣಕ್ಕಾಗಿ ಅನುಮತಿ ನಿರಾಕರಿಸಿತ್ತು. ಕಾರ್ಯಕ್ರಮವನ್ನು ರಿಲಯನ್ಸ್ ಜಿಯೋ ಗಾರ್ಡನ್ನಲ್ಲಿ ನಡೆಸಲು ಸಂಘಟಕರು ಬಯಸಿದ್ದರೂ ಅದಕ್ಕೆ ಮುಂಬಯಿ ಪೊಲೀಸರಿಂದ ಅನುಮತಿ ಸಿಕ್ಕಿರಲಿಲ್ಲ.
ಈ ಮೊದಲು ಗೆಟ್ಟಾ ಅವರ ಬೆಂಗಳೂರು ಕಾರ್ಯಕ್ರಮ ಕೂಡ ಭದ್ರತೆಯ ಕಾರಣಗಳಿಗೆ ರದ್ದಾಗಿತ್ತು. ಇಂದು ಶನಿವಾರ ಹೈದರಾಬಾದ್ನಲ್ಲಿ ಗೆಟ್ಟಾ ಕಾರ್ಯಕ್ರಮ ಪೂರ್ವಯೋಜಿತ ವೇಳಾಪಟ್ಟಿ ಪ್ರಕಾರ ನಡೆಯಲಿದೆ. ಭಾರತದ ಒಟ್ಟು ನಾಲ್ಕು ಮಹಾನಗರಗಳಲ್ಲಿ ಗೆಟ್ಟಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ