ದರ್ಶನ್‌ಗೆ ವಯಸ್ಸಾಯ್ತಂತೆ ಹೌದಾ ! ಚಕ್ರವರ್ತಿಯ ಬಿಡುವಿನ ಕತೆಗಳು


Team Udayavani, Jan 20, 2017, 3:45 AM IST

Page-1—Chakravarthy.jpg

“ಇನ್ನು ಎಷ್ಟು ಅಂತ ಕುಣಿಯೋದು ಸಾರ್‌. ವಯಸ್ಸಾಯ್ತು. ಇನ್ನು ಸ್ವಲ್ಪ ದಿನ ಹೋದ್ರೆ ವಯಸ್ಸು 40 ಆಗೋಗುತ್ತೆ. ನೋಡಿ ಬಿಳಿ ಕೂದ್ಲು ಬಂದಾಗಿದೆ. ಸುಮ್ನೆ ತಲೆ ಅಲ್ಲಾಡಿಸ್ಕೊಂಡ್‌ ಹೋಗ್ತಾ ಇರಬೇಕಷ್ಟೇ…’

ಹೀಗೆ ಹೇಳಿ ಹಾಗೊಮ್ಮೆ ಸ್ಮೈಲ್ ಕೊಟ್ಟರು ದರ್ಶನ್‌. ಅವರು ಯಾಕೆ ಹಾಗಂದ್ರು ಅಂತಂದುಕೊಂಡೇ, “ಯಾರ್‌ ಸಾರ್‌ ಹೇಳಿದ್ದು, ವಯಸ್ಸಾಯ್ತು ಅಂತ’ ಎಂಬ ಈ ಪ್ರಶ್ನೆಗೆ, ಮತ್ತದೇ ಉತ್ತರ ಕೊಟ್ಟ ದರ್ಶನ್‌, “ನೋಡಿ ಗುರುಗಳೇ, ಇಲ್ಲೆಲ್ಲಾ ಬಿಳಿ ಕೂದಲು ಬಂದಾಗಿದೆ’ ಅಂತ ತಮ್ಮ ಕೆನ್ನೆ ಮೇಲೆ ಕೈ ಸವರಿಕೊಂಡು ಸಣ್ಣ ನಗೆ ಬೀರಿದರು. ಅಷ್ಟಕ್ಕೇ ಸುಮ್ಮನಾಗದೆ, ಅವರ ಮುಂದೆ ಇನ್ನೊಂದು ಪ್ರಶ್ನೆ ಎಗರಿಹೋಯ್ತು. “ಹೋಗ್ಲಿ ಬಿಡಿ ಸಾರ್‌,70 ರಲ್ಲೂ ಹೀರೋ ಆಗಬಹುದು? ಎಂಬ ಮಾತಿಗೆ, ಅಲರ್ಟ್‌ ಆದ ದರ್ಶನ್‌, “ಅಯ್ಯೋ, ಅಷ್ಟೊಂದು ಶೋಕಿ ಇಲ್ಲ ನನಗೆ. 70ರ ಹೀರೋ “ತಿಥಿ’ ಗಡ್ಡಪ್ಪ. ಆ ವಯಸ್ಸಲ್ಲೂ ಗಡ್ಡಪ್ಪ ಸ್ಟಾರ್‌ ಆಗಿದ್ದಾರೆ ನೋಡಿ’ ಎನ್ನುತ್ತಲೇ ಅಲ್ಲೊಂದು ನಗೆ ಅಲೆ ಎಬ್ಬಿಸಿದರು ದರ್ಶನ್‌.

ಇಷ್ಟಕ್ಕೂ ಇದೆಲ್ಲಾ ನಡೆದಿದ್ದು “ಚಕ್ರವರ್ತಿ’ ಆಡಿಯೋ ಸಿಡಿ ಬಿಡುಗಡೆ ನಂತರ ದುಂಡು ಮೇಜಿನ ಬಳಿ ನಡೆದ ಮಾತುಕತೆಯಲ್ಲಿ. ಅಂದು ಸ್ವತಃ ದರ್ಶನ್‌ ಮಾತಾಡಬೇಕು ಅಂತಾನೇ ಬಂದು ಕುಳಿತರು. ಅಲ್ಲಿ ಪ್ರಶ್ನೆಗಳು ಏಳುತ್ತಾ ಹೋದಂತೆ, ಒಂದೊಂದೇ ಉತ್ತರಗಳು ಹೊರ ಬರುತ್ತಾ ಹೋದವು. ಅಂದು ದರ್ಶನ್‌ ಅದೇಕೆ ಎರಡು ಬಾರಿ ನನಗೆ ವಯಸ್ಸಾಯ್ತು ಅಂತಂದರೋ ಗೊತ್ತಿಲ್ಲ. ಆದರೆ, ಅವರ ಎದುರು ಬಂದ ಪ್ರಶ್ನೆಗಳಿಗೆ ವಯಸ್ಸಿನ ಬಗ್ಗೆ ಪ್ರತಿಕ್ರಿಯಿಸಿದ್ದು ನಿಜ. “ನಂಗೆ ಇನ್ನು ಸ್ವಲ್ಪ ದಿನ ಕಳೆದರೆ 40 ಆಗೋಗುತ್ತೆ. ಇನ್ನು, ಎಷ್ಟು ಅಂತ ಕುಣಿಯೋಣ ಹೇಳಿ. ಸುಮ್ನೆ ತಲೆ ಅಲ್ಲಾಡಿಸಿಕೊಂಡ್‌ ಹೋಗ್ತಾ ಇರಬೇಕಷ್ಟೇ’ ಎಂಬ ಮಾತಿಗೆ 70 ರಲ್ಲೂ ಹೀರೋ ಆಗಬಹುದು ಬಿಡಿ ಅಂದಾಗಲೇ, “ಗಡ್ಡಪ್ಪ ಅವರು 70 ಸ್ಟಾರ್‌. ಅವರ “ತಿಥಿ’ ಸಿನಿಮಾ ನೋಡಿದ್ದೇನೆ. ಬಿಟ್ಟರೆ, ಟಿವಿಯಲ್ಲಿ ಬರುವ ಟ್ರೇಲರ್‌ವೊಂದು ನನಗೆ ತುಂಬಾ ಹಿಡಿಸಿದೆ. ಅವರು ಹೇಳುವ “ಕರಿದಾ, ಬಿಳಿದಾ’ ಎಂಬ ಡೈಲಾಗ್‌ ಮೀನಿಂಗ್‌ಫ‌ುಲ್‌ ಮತ್ತು ಕಾಮಿಡಿಯಾಗಿದೆ. ಅದು ಸತ್ಯ ಅಲ್ವಾ’ ಅಂತ ತಮ್ಮ “ಚಕ್ರವರ್ತಿ’ ಕಡೆ ವಾಲಿದರು ದರ್ಶನ್‌. 

“ಚಕ್ರವರ್ತಿ’ ಮುಗಿದಿದೆ. ಹಿನ್ನೆಲೆ ಸಂಗೀತಕ್ಕೆ ಟೈಮ್‌ ಬೇಕಿದೆ. ಈ ರೀತಿಯ ಚಿತ್ರವನ್ನು ಬೇಗ ಮಾಡೋದು ಸುಲಭವಲ್ಲ. ಒಳ್ಳೇ ಸಿನಿಮಾಗೆ ಟೈಮ್‌ ಬೇಕು. ಮಾರ್ಚ್‌ನಲ್ಲಿ ಚಿತ್ರ ರಿಲೀಸ್‌ ಆಗಲಿದೆ’ ಅಂತ ವರದಿ ಒಪ್ಪಿಸಿದ ದರ್ಶನ್‌ಗೆ, “ಇಲ್ಲಿ ನೀವು ಡಾನ್‌ ಆಗಿರಿ¤àರಾ? ನಿಮ್ಮೆದುರು ಯಾರ್ಯಾರೆಲ್ಲಾ ಹೊಡೆದಾಡ್ತಾರೆ? ಈ ಪ್ರಶ್ನೆಗೆ ಉತ್ತರಿಸಿದ ದರ್ಶನ್‌, “ಸಾರ್‌, ಎಲ್ಲರಿಗೂ ಕಥೆ ಹೇಳಬೇಕಾ? ಹೇಗಿದ್ರೂ ನಾವು ಸಿನಿಮಾ ತೋರಿಸ್ತೀವಿ. ನೀವೂ ನೋಡಿ ಬರಿತೀರಿ. ತಾಳ್ಮೆ ಇರಲಿ’ ಸಾರ್‌ ಅನ್ನುತ್ತಲೇ ತಮ್ಮ ಟಿಪಿಕಲ್‌ ಶೈಲಿಯ ಸ್ಮೈಲ್ ಕೊಟ್ಟರು ದರ್ಶನ್‌.

“ಸಿನಿಮಾ ಲೇಟ್‌ ಆಗಿದ್ದು ನಿಜ. ಕಾರಣ, ಮೂರು ಗೆಟಪ್‌. ಒಂದ್ಸಲ ದಾಡಿ ಬಿಡಬೇಕು, ಇನ್ನೊಂದ್ಸಲ ದಾಡಿ ತೆಗೀಬೇಕು, ಮತ್ತೂಂದ್ಸಲ ಕಲರಿಂಗ್‌ ಕೊಡಬೇಕು. ಈ ಪ್ರೋಸಸ್‌ಗೆ ಟೈಮ್‌ ಬೇಕಾಯ್ತು. ಹಾಗಾಗಿ ತಡವಾಯ್ತು. ನಿರ್ದೇಶಕ ಚಿಂತನ್‌ ಈ ಕಥೆ ಹೇಳಿ ಐದು ವರ್ಷ ಆಗಿದೆ. ಸಿಕ್ಕಾಗೆಲ್ಲ ಸ್ಕ್ರಿಪ್ಟ್ ವರ್ಕ್‌ ಮಾಡ್ತಾ ಇದೀನಿ ಅಂತ ಹೇಳ್ತಾ ಇದ್ದ. ನಾನೂ ಮಾಡೋಣ ಚಿಂತನ್‌ ಅಂತಿದ್ದೆ. ಇದು ಶುರುವಾಗಿದ್ದೇ ಜಸ್ಟ್‌ ಮಾತಲ್ಲಿ. ಇದಕ್ಕೆ ಬೇರೆಯವರಿದ್ದರು. ಕಾರಣಾಂತರದಿಂದ ಪ್ರಾಜೆಕ್ಟ್ ಮುಂದಕ್ಕೆ ಹೋಯ್ತು. ಆಗ ನಾನು ಸಿನಿಮಾವೊಂದರ ಡಬ್ಬಿಂಗ್‌ನಲ್ಲಿದ್ದೆ. ಅಲ್ಲಿಗೆ ಅಣಜಿ ನಾಗರಾಜ್‌ ಬಂದಿದ್ದರು. “ಕಬಾಲಿ’ ಸಿನಿಮಾ ವಿತರಣೆ ಮಾಡುವ ಯೋಚನೆಯಲ್ಲಿದ್ದರು. ಆಗ ಅಣಜಿ ಬಳಿ, “ಮಚ್ಚಾ ನೋಡು ಹಿಂಗೆ ಐತೆ. ಚಿಂತನ್‌ ಒಳ್ಳೇ ಕಥೆ ಮಾಡಿದ್ದಾರೆ. ನಾನು ಡೇಟ್ಸ್‌ ಕೊಡ್ತೀನಿ. ಇಮ್ಮಿಡಿಯೇಟ್‌ ಯಾರಾದ್ರೂ ಇದ್ದರೆ ಹುಡುಕು’ ಅಂದೆ. ಅದಕ್ಕೆ ಅಣಜಿ, ತಕ್ಷಣವೇ, ಯಾರಿಗೂ ಹೇಳ್ಬೇಡ. ಹತ್ತು ನಿಮಿಷ ಇರು. ಮತ್ತೆ ಮಾತಾಡ್ತೀನಿ ಅಂತ ಯಾರಿಗೋ ಫೋನ್‌ ಮಾಡಿದ. ಆ ಕಡೆಯಿಂದ ಗ್ರೀನ್‌ಸಿಗ್ನಲ್‌ ಬಂತು. ಬೆಳಗ್ಗೆ ಮೀಟಿಂಗ್‌ ಆಯ್ತು. ಸಿನಿಮಾಗೆ ಚಾಲನೆ ಸಿಕು¤. “ಚಕ್ರವರ್ತಿ’ಗೆ ಪಿಲ್ಲರ್‌ ಸಿದ್ಧಾಂತ್‌. ಅವರೂ ಒಬ್ಬ ಹೀರೋ ಆಗಿ, ಇನ್ನೊಬ್ಬ ಹೀರೋಗೆ ಹಣ ಹಾಕಿ ಸಿನಿಮಾ ಮಾಡಿದ್ದಾರೆ.

ಸಿದ್ಧಾಂತ್‌ ಈ ಚಿತ್ರದ ಟೈಟಲ್‌ಗೆ ತಕ್ಕಂತೆಯೇ ಸಿನಿಮಾ ಮಾಡಿದ್ದಾರೆ. ಯಾವುದೂ ಕಮ್ಮಿ ಇಲ್ಲವೆಂಬಂತೆ ಅದ್ಧೂರಿಯಾಗಿ ನಿರ್ಮಿಸಿದ್ದಾರೆ’ ಅಂತ ಸಿದ್ಧಾಂತ್‌ಗಿರುವ ಸಿನಿಮಾ ಪ್ರೀತಿ ಬಗ್ಗೆ ಹೇಳಿಕೊಂಡರು ದರ್ಶನ್‌.

“ಇಲ್ಲೂ ಕುದುರೆ ರೇಸ್‌ ಇದೆಯಾ, ಅಂಡರ್‌ವರ್ಲ್ಡ್ ಏನಾದ್ರೂ ಬಂದೋಗುತ್ತಾ? ಈ ಪ್ರಶ್ನೆಗೆ, “ಸ್ವಲ್ಪ ತಾಳ್ಮೆ ಸಾರ್‌. ನಾವು ಜನ ನೋಡೋಕ್ಕಂತಾನೇ ಚಿತ್ರ ಮಾಡಿದ್ದೇವೆ. ಈಗಲೇ ಹೇಳಿಬಿಟ್ಟರೆ ಮಜಾ ಇರೋಲ್ಲ’ ಅಂದರು. ಹಾಗಾದರೆ, ನೀವಿಲ್ಲಿ ತುಂಬಾನೇ ಎಕ್ಸೆ„ಟ್‌ ಆಗಿದ್ದೀರಾ ಎಂದರೆ, “ಖಂಡಿತ ಆಗಿದ್ದೇನೆ. ಒಂದೇ ಸಿನಿಮಾದಲ್ಲಿ ಮೂರು ವಿಭಿನ್ನ ಪಾತ್ರ ಮಾಡೋದೇ ದೊಡ್ಡ ಚಾಲೆಂಜಿಂಗ್‌. ಒಮ್ಮೆ ದಪ್ಪ, ಇನ್ನೊಮ್ಮೆ ಸಣ್ಣ, ಹೀಗೆ ಬೇರೆ ಶೇಡ್‌ ಪಾತ್ರ ಇರುವುದರಿಂದ ನನಗೂ ಕುತೂಹಲವಿದೆ. ಇಲ್ಲಿ ಟ್ರೇನ್‌ವೊಂದನ್ನು ಬಿಟ್ಟು, ಎಲ್ಲದ್ದನ್ನೂ ಬಳಸಿದ್ದೇವೆ. ಇಂಪೋರ್ಟೆಡ್‌ ಕಾರುಗಳು, ಓಲ್ಡ್‌ ಕಾರುಗಳು, ಶಿಪ್‌, ಚಾಪರ್‌, ಫ್ಲೈಟ್‌ ಹೀಗೆ ಎಲ್ಲವೂ ಇದೆ. ಅಷ್ಟೊಂದು ದುಬಾರಿ ವೆಚ್ಚ ಈ ಚಿತ್ರಕ್ಕಾಗಿದೆ …’

“ಇನ್ನು, ಲುಕ್‌ ವೈಸ್‌ ಬಗ್ಗೆ ಹೇಳ್ಳೋದಾದರೆ, ನಾನು ಸಾಕಷ್ಟು ವರ್ಕ್‌ ಮಾಡಿದ್ದೇನೆ. ಹಿಂದೆಯೂ ಕೆಲ ಸಿನಿಮಾಗಳಲ್ಲಿ ಲುಕ್‌ವೆçಸ್‌ ವರ್ಕ್‌ ಮಾಡಿದ್ದೆ. ಆದರೆ, ವರ್ಕ್‌ಔಟ್‌ ಆಗಿರಲಿಲ್ಲ. ಇಲ್ಲಿ ಒಂಭತ್ತು ಹೀರೋಗಳಿದ್ದಾರೆ’ ಅಂತ ಹೇಳುತ್ತಿದ್ದಂತೆಯೇ, “ನವಗ್ರಹ’ ರೀತಿ ನಿಮ್ಮದು ಇಲ್ಲಿ ನೆಗೆಟಿವ್‌ ಪಾತ್ರನಾ? ಎಂಬ ಪ್ರಶ್ನೆ ತೂರಿಬಂತು. “ಅರ್ಜೆಂಟ್‌ ಬೇಡ ಸರ್‌. ಇಷ್ಟರಲ್ಲೇ ಯಾರು ನೆಗೆಟಿವ್‌, ಯಾರು ಪಾಸಿಟಿವ್‌ ಅಂತ ಗೊತ್ತಾಗುತ್ತೆ. ದಿನಕರ್‌ ಇಲ್ಲಿ ವಿಲನ್‌. ಎಷ್ಟೊತ್ತು ಸ್ಕ್ರೀನ್‌ ಮೇಲೆ ನಮ್ಮಿಬ್ಬರ ಕಾಂಬಿನೇಷನ್‌ ಇದೆ ಅನ್ನೋದನ್ನ ಹೇಳಲ್ಲ. ದಿನಕರ್‌ಗೆ ಹೊಡಿತೀನಾ, ಸೈಡ್‌ಗೆ ಕರೊRಂಡ್‌ ಹೋಗಿ ಮುದ್ದಾಡ್ತೀನಾ ಅನ್ನೋದನ್ನ ನೀವೇ ನೋಡಬೇಕು. ಇಲ್ಲಿ ಮೂರು ಫೈಟ್ಸ್‌, ಒಂದು ಚೇಸಿಂಗ್‌ ಇದೆ. 80ರ ಕಾಲಘಟ್ಟದ ಹೊಡೆದಾಟವೂ ಇದೆ. ಈಗಿನ ಟ್ರೆಂಡೀ ಫೈಟೂ ಇದೆ. ಅಂದಹಾಗೆ, ಈ ಚಿತ್ರಕ್ಕೂ ಮೋದಿ ತಾತನ ಎಫೆಕ್ಟ್ ಆಗಿದ್ದುಂಟು. ಎಲ್ಲಾ ಹುಡುಗರು ಸಹಕರಿಸಿ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಥ್ಯಾಂಕ್ಸ್‌’ ಅಂದರು ದರ್ಶನ್‌. ಹಾಗಾದರೆ, “ಚಕ್ರವರ್ತಿ ಪಾರ್ಟ್‌ 2’ಗೆ ರೆಡಿಯಾಗ್ತಾ ಇದೀರಿ? ಎಂಬ ಪ್ರಶ್ನೆಗೆ, “ನಾನ್ಯಾವತ್ತೂ ಆ ಚಾನ್ಸ್‌ ತಗೊಳಲ್ಲ. ಸದ್ಯಕ್ಕೆ ಈ ವರ್ಷ “ಮಿಲನ’ ಪ್ರಕಾಶ್‌ ಸಿನಿಮಾ ಫೆಬ್ರವರಿ 9 ಕ್ಕೆ ಶುರು. “ಸರ್ವಾಂತರ್ಯಾಮಿ’ ಚಿತ್ರ ಮುಂದಕ್ಕೆ ಹೋಗಿದೆ. ಅದಕ್ಕೆ ಮೋದಿ ತಾತನ ಎಫೆಕ್ಟ್ ಕಾರಣ. 50ನೇ ಸಿನಿಮಾ ಯಾರದ್ದಾಗುತ್ತೆ ಅಂತ ಇಷ್ಟರಲ್ಲೇ ಹೇಳ್ತೀನಿ. ಮನೆಯಲ್ಲಿ 2 ತಿಂಗಳು ಸುಮ್ಮನೆ ಕೂತಿದ್ದೆ. ಆಗಾಗ ಫ್ರೆಂಡ್ಸ್‌ ಜತೆ ಲಾಂಗ್‌ ಡ್ರೈವ್‌ ಹೋಗ್ತಿàನಿ. ಟೀ ಕುಡಿಯೋಕ್ಕಂತ ಮಿಡ್‌ನೈಟ್‌ನಲ್ಲಿ ಈಗ ಬೈಕ್‌ ಸವಾರಿ ಮಾಡಲ್ಲ. ಏನಿದ್ದರೂ ಕಾರಷ್ಟೇ’ ಎನ್ನುತ್ತಿದ್ದಂತೆಯೇ, ಅತ್ತ ಯಾರೋ ಬಂದರು. ದರ್ಶನ್‌ ಮಾತು ನಿಲ್ಲಿಸಿ ಮೇಲೆದ್ದರು. ಅಲ್ಲಿಗೆ ದುಂಡುಮೇಜಿನ ಮಾತುಕತೆಗೂ ಬ್ರೇಕ್‌ಬಿತ್ತು.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.