ಆಧಾರ್ ಆಧಾರಿತ ಸ್ಕೈಪ್ ಲೈಟ್ ಬಿಡುಗಡೆ
Team Udayavani, Feb 23, 2017, 3:50 AM IST
ನವದೆಹಲಿ: ಭಾರತೀಯ ಇಂಟರ್ನೆಟ್- ಮೊಬೈಲ್ ವಲಯವನ್ನು ಗುರಿಯಾಗಿಸಿ ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ನೂತನ ಆಧಾರ್ ಆಧಾರಿತ, ವಿಡಿಯೋ ಕಾಲಿಂಗ್ ಆ್ಯಪ್ ಸ್ಕೈಪ್ ಲೈಟ್, ಲಿಂಕ್ಡ್ಇನ್ ಲೈಟ್ ಅನ್ನು ಬಿಡುಗಡೆ ಮಾಡಿದೆ. ಮುಂಬೈಯಲ್ಲಿನ ಸಮಾರಂಭದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಇದನ್ನು ಬಿಡುಗಡೆ ಮಾಡಿದರು. ನೂತನ ಸ್ಕೈಪ್ ಆ್ಯಪ್ ಸದ್ಯ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಸ್ಕೈಪ್ಲೈಟ್ ಕೇವಲ 13 ಎಂ.ಬಿ. ಹೊಂದಿದ್ದು, ಕಡಿಮೆ ಸ್ಟೋರೇಜ್ ಸಾಮರ್ಥ್ಯ ಇರುವ ಸ್ಮಾರ್ಟ್ ಫೋನ್ಗಳಲ್ಲೂ ಅಳವಡಿಸಿಕೊಳ್ಳಬಹುದು. ಜೊತೆಗೆ 2ಜಿಯಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಇರುವ ಸ್ಕೈಪ್ ಆ್ಯಪ್ ಹೆಚ್ಚಿನ ಇಂಟರ್ನೆಟ್ ವೇಗವನ್ನು ಬಯಸುತ್ತದೆ. ಇದಕ್ಕೂ ಆಧಾರ್ ಲಿಂಕ್ ಮಾಡಬಹುದಾಗಿದೆ. ಇನ್ನು ಉದ್ಯೋಗ ಮಾಹಿತಿ ನೀಡುವ ಸಾಮಾಜಿಕ ಜಾಲ ತಾಣ ಲಿಂಕ್ಡ್ ಇನ್ ಲೈಟ್ ಬಿಡುಗಡೆ ಮಾಡಲಾಗಿದ್ದು ಕಡಿಮೆ ಇಂಟರ್ನೆಟ್ ವೇಗದಲ್ಲೂ ಕಾರ್ಯಾಚರಿಸುತ್ತದೆ. ಇದಕ್ಕೂ ಆಧಾರ್ ಲಿಂಕ್ ಮಾಡಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ