4 ದಶಕ ಬಳಿಕ ಈ ಗ್ರಾಮದಲ್ಲಿ ಮದುವೆ
Team Udayavani, Feb 27, 2017, 10:47 AM IST
ನವದೆಹಲಿ: ಮಧ್ಯಪ್ರದೇಶದ ಗುಮಾರ ಎಂಬ ಗ್ರಾಮ 40 ವರ್ಷಗಳ ಬಳಿಕ ಯುವತಿಯ ಮದುವೆಗೆ ಸಾಕ್ಷಿಯಾಗುತ್ತಿದೆ. ಆಕೆಯ ಹೆಸರು ಆರತಿ ಗುರ್ಜರ್. ಗಮನಾರ್ಹ ಅಂಶವೆಂದರೆ ಆಕೆ ಅದೇ ಗ್ರಾಮದಲ್ಲಿ ಹುಟ್ಟಿದವರು. ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಆರತಿ ಮದುವೆಯಾಗುತ್ತಿದ್ದಾರೆ. ವೈದ್ಯೆಯಾಗಬೇಕೆಂದು ಇಚ್ಛೆ ಹೊಂದಿರುವ ಅವರು ಮದುವೆ ನಂತರವೂ ಶಿಕ್ಷಣ ಮುಂದುವರಿಸುವುದಾಗಿ ಹೇಳಿದ್ದಾರೆ.
ಹೆಣ್ಣು ಮಗು ಭ್ರೂಣ ಹತ್ಯೆಗೆ ಕುಖ್ಯಾತಿ ಗಳಿಸಿರುವ ಈ ಗ್ರಾಮದಲ್ಲಿ ಹೆಣ್ಣು ಮಗು ಹೊಂದಲು ಇಚ್ಛಿಸುತ್ತಿರಲಿಲ್ಲ. 2003ನೇ ಇಸ್ವಿಯ ವರೆಗೆ ಹೆಣ್ಣು ಶಿಶು ಅಥವಾ ಭ್ರೂಣ ಹತ್ಯೆ ಅಲ್ಲಿ ಸಾಮಾನ್ಯ ವಿಚಾರವಾಗಿತ್ತು. ಕೇಂದ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಭ್ರೂಣ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಬಳಿಕ ಸ್ಥಳೀಯರ ಮನಃಸ್ಥಿತಿಯೂ ಬದಲಾಗುತ್ತಾ ಬಂದಿತು ಮಾತ್ರವಲ್ಲದೆ ಭ್ರೂಣ ಹತ್ಯೆಯ ಪ್ರಮಾಣವೂ ಹತೋಟಿಗೆ ಬಂದಿತು. 1995ರಲ್ಲಿ 10:0 ಇದ್ದ ಲಿಂಗಾನುಪಾತ 2001ಕ್ಕೆ 10:2 ಕ್ಕೆ ಏರಿತ್ತು, 2011 ರಲ್ಲಿ 10:7 ಕ್ಕೆ ಏರಿಕೆಯಾಗಿತ್ತು. ಈ ಬೆಳವಣಿಗೆ ಹಳ್ಳಿಯ ಜನರ ಸಂತಸಕ್ಕೆ ಕಾರಣವಾಗಿದೆ. “ಇದು ನಮ್ಮ ಹಳ್ಳಿಯಲ್ಲಿ ನಾನು ನೋಡುತ್ತಿರುವ ಮೊದಲನೇ ಹೆಣ್ಣು ಮಗಳ ಮದುವೆ’ ಎಂದು 16 ವರ್ಷ ವಯಸ್ಸಿನ ಆಕಾಶ್ ಗುಜ್ಜಾರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
Loksabha; ಮಂದಿರಕ್ಕೆ ಬಾಬರಿ ಲಾಕ್ ಬೀಳದಿರಲು 400 ಸೀಟು ಬೇಕು: ಪ್ರಧಾನಿ ಮೋದಿ
Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್ ವಿವಾದ
Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ
Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್ ಗಾಂಧಿ
MUST WATCH
ಹೊಸ ಸೇರ್ಪಡೆ
Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ
Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ
IPL 2024; ಲಕ್ನೋ, ಹೈದ್ರಾಬಾದ್ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ
ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ
ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ