“ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಧ್ಯೇಯ’

Team Udayavani, Mar 13, 2017, 2:49 PM IST

1103ble4ph.jpg

ಬೆಳ್ತಂಗಡಿ : ಧ.ಗ್ರಾ.ಯೋಜನೆಯ ಮೂಲಕ ಸ್ವಸಹಾಯ ಸಂಘ ರಚಿಸಿ ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಧ್ಯೇಯವಾಗಿದೆ. ಹೊಸದಾಗಿ ರಚನೆಯಾದ ಸಂಘದ ಸದಸ್ಯರು ಕೂಡ ಅಭಿವೃದ್ಧಿಯನ್ನು ಕಾಣಬೇಕು. ಸ್ವ ಉದ್ಯೋಗಿಗಳಾಗಿ ಸಾಧನೆಯನ್ನು ಮಾಡಿ ತೋರಿಸ ಬೇಕು ಎಂದು  ಧ.ಗ್ರಾ. ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಚಂದ್ರಶೇಖರ ಹೇಳಿದರು.

ಅವರು ಬೆಳ್ತಂಗಡಿ ಲಾ„ಲ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ  ಧ.ಗ್ರಾ. ಯೋಜನೆಯ ಬೆಳ್ತಂಗಡಿ ವಲಯದ ನೂತನ 8 ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.ಹಿಂದೆ ಎಲ್ಲರೂ ಆರ್ಥಿಕವಾಗಿ ಹಿಂದುಳಿದಿದ್ದರು. ಅಭಿವೃದ್ಧಿಯೂ ಇರಲಿಲ್ಲ. ಈಗ ತಂತ್ರಜ್ಞಾನ ಬೆಳೆದ ಹಾಗೆ ಬದಲಾವಣೆಯೂ ಆಗುತ್ತಿದೆ. ಉಳಿತಾಯ ಯೋಜನೆಯಿಂದ ನಮ್ಮ ಆರ್ಥಿಕ ಸ್ಥಿತಿಗತಿಯೂ ಉತ್ತಮ ವಾಗುತ್ತದೆ. ನಾವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಂಡು ಉತ್ತಮ ಜೀವನ ನಡೆಸಲು ಇಂತಹ ಸಂಘಗಳು ಸಹಕಾರಿ. ಇದರ ಸದುಪಯೋಗ  ಪಡೆದುಕೊಳ್ಳಬೇಕು ಎಂದರು.

ಲಾ„ಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್‌ ಶೆಟ್ಟಿ ನೊಚ್ಚ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯ ಕೂಸು ಗ್ರಾಮಾಭಿವೃದ್ಧಿ ಯೋಜನೆ. ಇದರಿಂದ ತಾಲೂಕಿನ ಜನತೆ ಅಲ್ಲದೆ ರಾಜ್ಯದ ಜನರು ಆರ್ಥಿಕವಾಗಿ ಸಬಲಗೊಂಡಿದ್ದಾರೆ. ಮಹಿಳಾ ಸಶಕ್ತೀಕರಣವಾಗಿದೆ. ಜ್ಞಾನ ವಿಕಾಸದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಶ್ರೀ ಕ್ಷೇತ್ರದ ಯೋಜನೆಗಳು ಜನರ ಬದುಕಿನ ಆಶಾಕಿರಣವಾಗಿ ಮೂಡಿಬಂದಿವೆ. ಹೊಸದಾಗಿ ರಚನೆಯಾದ ಸಂಘಗಳು ಇದರ ಪ್ರಯೋಜನ ಪಡೆದು ಸಾಧನೆ ಮಾಡಿ ತೋರಿಸಬೇಕು ಎಂದರು.ವಲಯಾಧ್ಯಕ್ಷೆ ಶಾರದಾ ಎಸ್‌.  ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಯೋಜನೆಯ ಬೆಳ್ತಂಗಡಿ ತಾ| ಯೋಜನಾಧಿಕಾರಿ  ರೂಪಾ ಜಿ. ಜೈನ್‌, ಪತ್ರಕರ್ತ ಭುವನೇಶ್‌ ಗೇರುಕಟ್ಟೆ  ಮತ್ತಿತರರು ಉಪಸ್ಥಿತರಿದ್ದರು. ನೂತನವಾಗಿ ರಚನೆಯಾದ 8 ಸ್ವ ಸಹಾಯ ಸಂಘಗಳ ಪದಾಧಿಕಾರಿಗಳಿಗೆ ಸಂಘದ ಪುಸ್ತಕವನ್ನು ಹಸ್ತಾಂತರಿಸಲಾಯಿತು.

ಸೇವಾ ಪ್ರತಿನಿಧಿ ಗೀತಾ ಸ್ವಾಗತಿಸಿ, ಭಾರತಿ ವಂದಿಸಿದರು. ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್‌ ಎಸ್‌. ಕಾರ್ಯಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

Agra: ಆಗ್ರಾದಲ್ಲಿ ತಲೆ ಎತ್ತಿದೆ ತಾಜ್‌ ಮಹಲ್‌ ಪ್ರತಿಸ್ಪರ್ಧಿ

2

ಎಸ್‌ಎಸ್‌ಎಲ್‌ಸಿ ಗ್ರೇಸ್‌ ಮಾರ್ಕ್ಸ್ ರದ್ದು: ಪ್ರತಿಭಾವಂತರ ಶ್ರಮಕ್ಕೆ ಮನ್ನಣೆ 

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್‌ನಲ್ಲೇ ಹೆಚ್ಚು

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.