ಕಸ್ತೂರಿ ರಂಗನ್‌ ವರದಿ ಜಾರಿಗೆ ಅಜ್ಞಾನ-ಸ್ವಾರ್ಥ ಅಡ್ಡಿ: ಹೆಗಡೆ


Team Udayavani, Apr 23, 2017, 12:23 PM IST

nagesh-hegde.jpg

ಬೆಂಗಳೂರು: ಪಶ್ಚಿಮಘಟ್ಟ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್‌ ವರದಿ ಜಾರಿಗೆ ಅಜ್ಞಾನ ಮತ್ತು ಸ್ವಾರ್ಥ ಅಡ್ಡಿಯಾಗಿದೆ ಎಂದು ಪರಿಸರ ವಿಜ್ಞಾನ ಬರಹಗಾರ ಹಾಗೂ ಪತ್ರಕರ್ತ ನಾಗೇಶ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಏರ್ಪಡಿಸಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬಳಿಕ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಧವ ಗಾಡ್ಗಿಳ್‌ ವರದಿ ಪಶ್ಚಿಮಘಟ್ಟದ ಭವಿಷ್ಯದ ದೃಷ್ಟಿಯಿಂದ ಸುರಕ್ಷಿತ ವರದಿ ಆಗಿತ್ತು. ಆದರೆ, ಕಸ್ತೂರಿರಂಗನ್‌ ವರದಿ ಸ್ವಲ್ಪ ಸಡಿಲ ಸ್ವರೂಪದ ವರದಿಯಾಗಿದೆ ಎಂದು ತಿಳಿಸಿದರು.

ಮಾಧವ ಗಾಡ್ಗಿಳ್‌ ವರದಿ ಬಗ್ಗೆ ಅನಾವಶ್ಯಕ ಗೊಂದಲಗಳನ್ನು ನಿರ್ಮಾಣ ಮಾಡಲಾಯಿತು. ಸ್ಥಳೀಯ ಭಾಷೆಯಲ್ಲಿ ವರದಿ ಬಗ್ಗೆ ಅಲ್ಲಿನ ಜನರಿಗೆ ಹೇಳಿಕೊಡಬೇಕು ಎಂದು ಗಾಡ್ಗಿಳ್‌ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಆ ಕೆಲಸ ಆಗಿಲ್ಲ. ಬಳಿಕ ಬಂದ ಕಸ್ತೂರಿ ರಂಗನ್‌ ವರದಿ ಬಗ್ಗೆಯೂ ಆತಂಕ-ಅನುಮಾನಗಳು ಹುಟ್ಟಿಕೊಂಡವು. ವರದಿಯನ್ನು ಓದಿಕೊಳ್ಳದೇ ಇರುವುದು ಇದಕ್ಕೆ ಪ್ರಮುಖ ಕಾರಣ.

ಒಟ್ಟಾರೆಯಾಗಿ ಅಜ್ಞಾನ ಮತ್ತು ಸ್ವಾರ್ಥದ ಕಾರಣದಿಂದಾಗಿ ವರದಿಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಭೂಮಿಗೆ 460 ಕೋಟಿ ವರ್ಷದ ಇತಿಹಾಸ ಇದೆ ಎಂದು ಅಂದಾಜಿಸಲಾಗಿದೆ. ಅದರಂತೆ ಒಂದು ಕೋಟಿ ವರ್ಷದ ಇತಿಹಾಸವನ್ನು ಒಂದು ಪುಟದಲ್ಲಿ ಬರೆದರೆ ಒಟ್ಟು 460 ಪುಟಗಳ ಪುಸ್ತಕ ಆಗಬಹುದು. ಈ 460 ಪುಟದ ಪುಸ್ತಕದಲ್ಲಿ ಮನುಷ್ಯ ಬರುವುದು ಕೊನೆಯ ಪುಟದ ಕೊನೆಯ ಪ್ಯಾರಾದಲ್ಲಿ.

ಆದರೆ, ಈ ಮನುಷ್ಯ ಪ್ರಕೃತಿ ಮತ್ತು ಪರಿಸರವನ್ನು ಗೆದ್ದಲು ಹುಳುವಿನಂತೆ ಹಾಳು ಮಾಡುತ್ತ ಬಂದಿದ್ದಾನೆ. ಪ್ರಕೃತಿ ವಿಕೋಪ ಹಾಗೂ ಪರಿಸರ ವೈಪರಿತ್ಯಗಳಿಗೆ ಮನುಷ್ಯನ ಸ್ವಾರ್ಥ ಹಾಗೂ ವೈಯುಕ್ತಿ ಭಾನಗಡಿಗಳು ಕಾರಣ. ಪರಿಸರದ ಬಗೆಗಿನ ಮನುಷ್ಯನ ದೃಷ್ಟಿಕೋನ ಬದಲಾಗಬೇಕು ಎಂದರು. ಕನ್ನಡ, ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಇದ್ದರು. 

ಇಂದು (ಏ.22) ವಿಶ್ವ ಭೂಮಿ ದಿನ. ಪ್ರಪಂಚದ 135 ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಒಂದು ಕಡೆಯೂ ಈ ಸಂಬಂಧ ಕಾರ್ಯಕ್ರಮಗಳು ನಡೆಯದಿರುವುದು ನೋವಿನ ಸಂಗತಿ.
-ನಾಗೇಶ ಹೆಗಡೆ, ಪರಿಸರ ಬರಹಗಾರ

ಟಾಪ್ ನ್ಯೂಸ್

1-wewqeewqe

Actor Jackie Shroff ಹೆಸರು ಬಳಕೆಗೆ ಹೈಕೋರ್ಟ್‌ ನಿಷೇಧ

1-wqeeqwewq

Taiwan; ಸಂಸತ್‌ನಲ್ಲಿ ಸಂಸದರ ಭಾರೀ ಬಡಿದಾಟ!

Covid test

Singapore; ಹೆಚ್ಚಿದ ಕೋವಿಡ್‌: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

Crime: ಜಗಳ ವೇಳೆ ತಳ್ಳಿದಾಗ ವಿದ್ಯುತ್‌ ತಂತಿ ಮೇಲೆ ಬಿದ್ದ ಯುವಕ ಸಾವು: 2 ಆರೋಪಿಗಳ ಬಂಧನ

7

ಇನ್‌ಸ್ಪೆಕ್ಟರ್‌ ಹೆಸರಲ್ಲಿ ಸುಲಿಗೆ: ಬೆಸ್ಕಾಂ ಎಂಜಿನಿಯರ್‌ ಸೆರೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: 14 ಲಕ್ಷ ರೂ. ಒಡವೆ ಕದಿದ್ದ ಬಾಲಕ ವಶಕ್ಕೆ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wewqeewqe

Actor Jackie Shroff ಹೆಸರು ಬಳಕೆಗೆ ಹೈಕೋರ್ಟ್‌ ನಿಷೇಧ

1-wqeeqwewq

Taiwan; ಸಂಸತ್‌ನಲ್ಲಿ ಸಂಸದರ ಭಾರೀ ಬಡಿದಾಟ!

Covid test

Singapore; ಹೆಚ್ಚಿದ ಕೋವಿಡ್‌: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.