‘ಗ್ರಾಮಕ್ಕೆ ನಡೆಯೋಣ, ದೇಶವನ್ನು ತಿಳಿಯೋಣ’: ಸೀತಾರಾಮ ಕೆದಿಲಾಯ

Team Udayavani, Jul 15, 2017, 3:40 AM IST

Kedilaya-14-7.jpg

ಹಳೆಯಂಗಡಿ: ಗ್ರಾಮದಿಂದ ಗ್ರಾಮಕ್ಕೆ ನಡೆಯಬೇಕು, ಗ್ರಾಮಗಳೇ ದೇಶದ ಉಸಿರು ಎನ್ನುವುದನ್ನು ಪ್ರತಿಪಾದಿಸುತ್ತಾ ಪಾದಯಾತ್ರೆ ಮೂಲಕ ಭಾರತೀಯ ಸಂಸ್ಕೃತಿಯನ್ನು ಪ್ರಚುರಪಡಿಸಲು ದೇಶದಲ್ಲಿ 26,750 ಕಿ.ಮೀ. ದೂರವನ್ನು 1795 ದಿನದಲ್ಲಿ ಪರಿಕ್ರಮಿಸಿದ್ದೇನೆ ಎಂದು ಆರೆಸ್ಸೆಸ್‌ನ ಅಖಿಲ ಭಾರತ ಮಾಜಿ ಹಿರಿಯ ಪ್ರಚಾರಕ್‌ ಸೀತಾರಾಮ ಕೆದಿಲಾಯ ಅವರು ಹೇಳಿದರು. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಅವರು ಮಾತನಾಡುತ್ತಾ, ನನ್ನ ಯಾತ್ರೆಗೆ ನಿರ್ದಿಷ್ಟವಾದ ಪೂರ್ವ ಉದ್ದೇಶವಿಲ್ಲ. ಆದರೆ ಪಾದಯಾತ್ರೆಯ ಮೂಲಕವೇ ನನ್ನ ಉದ್ದೇಶ ಸಿದ್ಧಿಸಿದೆ. ನಡೆಯುವ ಸ್ವಭಾವವನ್ನು ನೆನಪಿಸಿದ್ದೇನೆ, ಕಿವಿಯನ್ನು ಕೇಳಿಸಿಕೊಳ್ಳಲು ಬಳಸದೇ ಇದ್ದರೇ, ಕಣ್ಣನ್ನು ನೋಡಲು ಬಳಸದೇ ಇದ್ದರೇ ಏನಾಗುತ್ತದೆಯೋ ಅದೇ ಸಮಸ್ಯೆ ನಡೆಯದೇ ಇದ್ದರೇ ನಮ್ಮ ದೇಹಕ್ಕೆ ಆಗುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದೇನೆ. ದೇಹ ಆಲಸ್ಯದಿಂದ ಕೂಡಿದಲ್ಲಿ ಸಮಾಜಕ್ಕೆ ಹಾನಿಕಾರಕ ಎಂಬುದನ್ನು ತಿಳಿಹೇಳಲು ಪ್ರಯತ್ನಿಸಿದ್ದೇನೆ ಎಂದರು.

ಉತ್ತರದಲ್ಲಿ ಶ್ರದ್ಧೆ, ದಕ್ಷಿಣದಲ್ಲಿ ಆಚಾರ – ವಿಚಾರ
ಉತ್ತರ ಭಾರತದಲ್ಲಿ ದೇವರ ಶ್ರದ್ಧೆ ಹೆಚ್ಚು ಪ್ರಾಧಾನ್ಯ ಪಡೆದಿದೆ. ದಕ್ಷಿಣದಲ್ಲಿ ಆಂತರ್ಯದಲ್ಲಿನ ಆಚಾರ-ವಿಚಾರಕ್ಕೆ ಮನ್ನಣೆ ನೀಡಲಾಗುತ್ತದೆ. ಉತ್ತರದಲ್ಲಿ ರಾಮಾನುಗ್ರಹ, ಕೃಷ್ಣಾನುಗ್ರಹ ಪ್ರಾಪ್ತಿಯಾಗಿದೆ. ನಮ್ಮಲ್ಲಿ ದೇವರ ಸ್ವರೂಪದ ಬಿಂಬಕ್ಕೆ ಪೂಜೆ ಪುನಸ್ಕಾರ ನಡೆಯುತ್ತದೆ. ಅಲ್ಲಿ ದೇವರೇ ಅವತಾರ ಎತ್ತಿದ್ದರ ಬಗ್ಗೆ ಭಕ್ತಿ ಇದೆ. ಇಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯರು, ರಾಮಾನುಜಾಚಾರ್ಯರ ಮೂಲಕ ದೇವರ ಶಕ್ತಿಯನ್ನು ತೋರಿದ್ದಾರೆ ಎಂದರು.

ನುಡಿದಂತೆ ನಡೆಯೋಣ
ನಮ್ಮಲ್ಲಿ ಮಾತುಗಾರರೇ ಹೆಚ್ಚು. ಹೇಳುವುದೊಂದು ಮಾಡುವುದು ಇನ್ನೊಂದು ಎಂಬಂತೆ ನಮ್ಮಲ್ಲಿ ಸತ್ಯಗಳು ನಶಿಸುತ್ತಿವೆ. ಬದುಕುವುದಕ್ಕಾಗಿ ನುಡಿಯಲ್ಲಿ ವ್ಯತ್ಯಾಸ ಆಗುತ್ತಿದೆ. ನಾವೆಲ್ಲ ಎಂದಿಗೂ ಭೂಮಿಯಲ್ಲಿ ಶಾಶ್ವತವಲ್ಲ, ನಮ್ಮ ನಡೆ ನುಡಿ ಮಾತ್ರ ನಮ್ಮನ್ನು ಜೀವಂತವಾಗಿರಿಸುತ್ತದೆ ಎಂಬುದನ್ನು ಪಾದಯಾತ್ರೆಯ ಸಮಯದಲ್ಲಿ ಕಂಡುಕೊಂಡಿದ್ದೇನೆ ಎಂದು ವಿವರಿಸಿದರು.

ಆಹಾರ – ವಿಹಾರದಲ್ಲಿ ವ್ಯತ್ಯಾಸವೇ ಇಲ್ಲ
ಸಂಪೂರ್ಣ ಭಾರತ ದೇಶದಲ್ಲಿ ಆಹಾರವಾಗಲಿ ವಿಹಾರದಲ್ಲಾಗಲಿ ವ್ಯತ್ಯಾಸವನ್ನು ಕಾಣಲಿಲ್ಲ ಎಂದ ಅವರು, ಹಳ್ಳಿಗಳತ್ತ ಸಾಗುವುದೇ ಒಂದು ಸೋಜಿಗ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಸೀತಾರಾಮ ಕೆದಿಲಾಯರನ್ನು ಸಮ್ಮಾನಿಸಲಾಯಿತು. ದೇಗುಲದ ಧರ್ಮದರ್ಶಿ ಯಾಜಿ ಡಾ| ಎಚ್‌.ನಿರಂಜನ್‌ ಭಟ್‌, ವಿದ್ಯಾಶಂಕರ್‌, ಎಚ್‌.ರಾಮಚಂದ್ರ ಶೆಣೈ, ರವೀಂದ್ರನಾಥ್‌ ರೈ ಪಕ್ಷಿಕೆರೆ, ರಮಣಿ ರೈ, ಕಮಲಾಕ್ಷ ರೈ, ಎಚ್‌.ವಿ.ಕೋಟ್ಯಾನ್‌ ಮೂಲ್ಕಿ, ಅವಿನಾಶ್‌ ಮೂಲ್ಕಿ, ಮನ್ಸೂರ್‌ ಎಚ್‌., ಡಾ| ಜಗದೀಶ್‌ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವಜೀದೀಶು ಯಾಗ…
ಚಿಕ್ಕಮಗಳೂರಿನ ವೇದ ವಿಜ್ಞಾನ ಕೇಂದ್ರದ ವೇದ ಕೃಷಿಕ ಕೆ.ಎಸ್‌.ನಿತ್ಯಾನಂದ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಲ್ಲಿ ಸೀತಾರಾಮ ಕೆದಿಲಾಯ ಅವರ ಭಾರತ ಪರಿಕ್ರಮ ಯಾತ್ರೆಯನ್ನು ವಿಶ್ವಜೀದೀಶು ಯಾಗದ ಮೂಲಕ ಕೊನೆಗೊಳಿಸಲಾಗಿತ್ತು. ಪ್ರಕೃತಿಯ ಶುದ್ಧತೆ ಹಾಗೂ ವೈಜ್ಞಾನಿಕವಾಗಿ ಮಾಲಿನ್ಯವನ್ನು ತಡೆಯಲು ಈ ಯಾಗವನ್ನು ಮಾಡಲಾಯಿತು. ಇದರಿಂದ ಜಗತ್ತಿನಲ್ಲಿ ನಾನು ಎನ್ನುವ ಅಹಂ ತೊರೆದು ನಾವು ಎನ್ನುವ ಪರಿಕಲ್ಪನೆ ನಮ್ಮೊಳಗೆ ಮೂಡಲು ಸಾಧ್ಯವಿದೆ ಎಂದರು ಸೀತಾರಾಮ ಕೆದಿಲಾಯರು.

ಗುಜರಾತ್‌ನಲ್ಲಿ ಆರೋಗ್ಯ ಕೆಟ್ಟಿತ್ತು : ರೈ
ಸೀತಾರಾಮ ಕೆದಿಲಾಯರೊಂದಿಗೆ ಕಾಸರಗೋಡಿನಿಂದ ಕನ್ಯಾಕುಮಾರಿಗೆ ಪಾದಯಾತ್ರೆಯಲ್ಲಿ ಜತೆಯಾಗಿದ್ದ ಪಕ್ಷಿಕೆರೆಯ ರವೀಂದ್ರನಾಥ ರೈ ಮಾತನಾಡಿ, ನಾನು ಸಣ್ಣಪುಟ್ಟ ಕಂಟ್ರಾಕ್ಟರ್‌ನಾಗಿದ್ದೆ. ಕೆ.ಎಸ್‌.ನಿತ್ಯಾನಂದ ಸ್ವಾಮೀಜಿಯವರೊಂದಿಗೆ ಇದ್ದ ನನಗೆ ಆಕಸ್ಮಿಕ ಎನ್ನುವಂತೆ ಸೀತಾರಾಮ ಕೆದಿಲಾಯರ ಪರಿಚಯವಾಗಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುವ ಅವಕಾಶ ಸಿಕ್ಕಿತು. ಪಾದಯಾತ್ರೆಯಲ್ಲಿ ಗುಜರಾತ್‌ನಲ್ಲಿದ್ದಾಗ ಇಬ್ಬರ ಆರೋಗ್ಯ ಕೆಟ್ಟಿತ್ತು. ನನಗೆ ವಯಸ್ಸು 66. ಅವರಿಗೆ 74. ಎಷ್ಟೇ ಔಷಧ ತೆಗೆದುಕೊಂಡರೂ ಸಹ ಫಲಕಾರಿಯಾಗಲಿಲ್ಲ. ಕೊನೆಗೆ ನಿತ್ಯಾನಂದ ಸ್ವಾಮೀಜಿಯವರೇ ದೂರವಾಣಿಯ ಮೂಲಕ ಧೈರ್ಯ ತುಂಬಿ ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಪಾದಯಾತ್ರೆ ಮುಂದುವರಿಸಿ ಎಂದರು. ಆ ಮಾತಿನ ಶಕ್ತಿ ನಮ್ಮ ಪಾದಯತ್ರೆಯನ್ನು ಕಾಪಾಡಿತು ಎಂದರು.

ಟಾಪ್ ನ್ಯೂಸ್

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

1-24-sunday

Daily Horoscope: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.