ಲಾಭನಗದೀಕರಣಕ್ಕೆ ಕುಸಿದ ಮುಂಬಯಿ ಶೇರು: 239 ಅಂಕ ನಷ್ಟ
Team Udayavani, Aug 3, 2017, 4:03 PM IST
ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 238.86 ಅಂಕಗಳ ನಷ್ಟದೊಂದಿಗೆ 32,237.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.85 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,013.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ನಿಫ್ಟಿ ತನ್ನ ಐತಿಹಾಸಿಕ 10,000 ಮಟ್ಟವನ್ನು ಉಳಿಸಿಕೊಂಡದ್ದೇ ಸಮಾಧಾನದ ವಿಷಯವೆನಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳಲ್ಲಿ ಮುನ್ನಡೆ ಕಂಡ ಪ್ರತಿಯೊಂದು ಶೇರಿಗೆ ಪ್ರತಿಯಾಗಿ ಎರಡು ಶೇರುಗಳು ಹಿನ್ನಡೆಗೆ ಗುರಿಯಾಗುವ ಮೂಲಕ ವಹಿವಾಟಿನ ಹರಹು ನಿರಾಶಾದಾಯಕವೆನಿಸಿತು.
ಇಂದು ವಿಶೇಷವಾಗಿ ವಿಜೃಂಭಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಶೇರು ಶೇ.1.6ರ ಜಿಗಿತವನ್ನು ಕಂಡು 1,655 ರೂ.ಗಳ ದಾಖಲೆಯ ದಿನಾಂತ್ಯದ ಎತ್ತರದಲ್ಲಿ ಸ್ಥಿತವಾಯಿತು.
ಇಂದಿನ ನಿಫ್ಟಿ ಟಾಪ್ ಗೇನರ್ಗಳು : ಎಸಿಸಿ, ಅಂಬುಜಾ ಸಿಮೆಂಟ್ಸ್, ಭಾರ್ತಿ ಏರ್ಟೆಲ್, ಅರಬಿಂದೋ ಫಾರ್ಮಾ; ಟಾಪ್ ಲೂಸರ್ಗಳು : ಲೂಪಿನ್, ಕೋಲ್ ಇಂಡಿಯಾ, ಹಿಂಡಾಲ್ಕೊ, ಬ್ಯಾಂಕ್ ಆಫ್ ಬರೋಡ, ಟಾಟಾ ಮೋಟರ್(ಡಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ